ಇರಾನ್‌ ಯುದ್ಧ| 2 ರೂಪಾಯಿಗೆ ಕುಸಿದ ಕಲ್ಲಂಗಡಿ

1 Min Read

ಬೀದರ್: ಇರಾನ್‌ Iran ವಿರುದ್ಧ ಅಮೆರಿಕ ಮತ್ತು ಇಸ್ರೇಲ್‌ ನಡೆಸುತ್ತಿರುವ ಯುದ್ಧದಿಂದ (Iran War) ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ಕಲ್ಲಂಗಡಿ ಬೆಳೆದ ರೈತರು ಬದಕು ಮೂರಾಬಟ್ಟೆಯಾಗಿದೆ. ರಫ್ತು ಇಲ್ಲದ ಕಾರಣ 1 ಕೆಜಿ ಕಲ್ಲಂಗಡಿ ಕೇವಲ 2 ರೂಪಾಯಿಗೆ ಬೆಲೆ ಕುಸಿತವಾಗಿದೆ.

ಕಳೆದ ವರ್ಷ ಈ ಸಂದರ್ಭದಲ್ಲಿ ಒಂದು ಕೆಜಿ ಕಲ್ಲಂಗಡಿ(Watermelon) 12 ರಿಂದ 15 ರೂಪಾಯಿಗೆ ಮಾರಾಟವಾಗುತ್ತಿತ್ತು. ಆದರೆ ಈಗ 2 ರೂ.ಗೆ ಮಾರಾಟ ಮಾಡುತ್ತೇವೆ ಎಂದರೂ ಖರೀದಿಗೆ ವರ್ತಕರು ಬರುತ್ತಿಲ್ಲ ಎಂದು ರೈತರು ಬೇಸರ  ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:  ಇರಾನ್‌ ಮೇಲೆ ರಣಭೀಕರ ದಾಳಿಗೆ ಪ್ಲ್ಯಾನ್‌ – ಮಧ್ಯಪ್ರಾಚ್ಯಕ್ಕೆ 3,500 ನೌಕಾಪಡೆ, ಟ್ರಿಪೋಲಿ ನಿಯೋಜಿಸಿದ ಅಮೆರಿಕ

ಬೀದರ್ ತಾಲೂಕಿನ ರೈತ ವೈಜನಾಥ್ ಸಿದ್ದಾ 1 ಲಕ್ಷ ರೂ. ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಈಗ ರಫ್ತು ಇಲ್ಲದ ಕಾರಣ ಕಲ್ಲಂಗಡಿ ಮಾರಾಟವಾಗದೇ ಜಮೀನನಲ್ಲೇ ಕೊಳೆತು ಹೋಗುತ್ತಿದೆ.

ಸಾಕಷ್ಟು ಹಣ ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದೇವೆ. ಕಟಾವು ಮಾಡಿ ಮಾರಾಟ ಮಾಡಲು ಸಿದ್ಧವಾಗುತ್ತಿದ್ದಾಗ ಯುದ್ಧ ಆರಂಭಗೊಂಡು ಮುಂದುವರಿಯುತ್ತಿದೆ. ಈ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಕಲ್ಲಂಗಡಿ ಬೆಳೆಯನ್ನು ತೋರಿಸಿ ರೈತರು (Farmers) ಮನವಿ ಮಾಡುತ್ತಿದ್ದಾರೆ.

Share This Article