ಸಹೋದರಿಯನ್ನು ಉಸಿರುಗಟ್ಟಿಸಿ ಕೊಂದು ದೇಹವನ್ನು ಕಾಲುವೆಗೆ ಎಸೆದ್ರು!

Public TV
1 Min Read

ನವದೆಹಲಿ: ಅನ್ಯ ಸಮುದಾಯದ ವ್ಯಕ್ತಿಯೊಂದಿಗೆ  ಸಂಬಂಧ ಹೊಂದಿರುವ ಆರೋಪ ಹೊರಿಸಿ ಇಬ್ಬರು ವ್ಯಕ್ತಿಗಳು ತಮ್ಮ ಸಹೋದರಿಯನ್ನು (Sister Murder) ಉಸಿರುಗಟ್ಟಿಸಿ ಕೊಂದು ಆಕೆಯ ದೇಹವನ್ನು ಕಾಲುವೆಗೆ ಎಸೆದಿರುವ ಘಟನೆ ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

ಪೊಲೀಸ್ ಗಸ್ತು ತಂಡದ ತಪಾಸಣೆಯ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಶನಿವಾರ ಸಂಜೆ ಗಸ್ತು ತಿರುಗುತ್ತಿದ್ದ ಪೊಲೀಸರು, ಮುರಾದ್‌ನಗರದಲ್ಲಿ (Muradnagar) ಇಬ್ಬರನ್ನು ಗುರುತಿಸಿದ್ದಾರೆ. ಅಲ್ಲದೇ ಎಲ್ಲಿಂದ ಬಂದಿದ್ದೀರಿ ಎಂದು ಕೇಳಿದ್ದಾರೆ. ಆಗ ವೇಳೆ ಅವರು ನೀಡಿರುವ ಉತ್ತರ ಅನುಮಾನ ಹುಟ್ಟುಹಾಕಿದೆ. ಕೂಡಲೇ ಪೊಲೀಸರು ಅವರನ್ನು ಹಿಡಿದರು. ಇದನ್ನೂ ಓದಿ: ಇಸ್ಪಿಟ್ ಆಡುತ್ತಿದ್ದ ನಗರಸಭೆ ಸದಸ್ಯ ಸಹಿತ 14 ಜನರ ಬಂಧನ

ಸುಫಿಯಾನ್ ಮತ್ತು ಅವರ ಸೋದರ ಸಂಬಂಧಿ ಮಹತಾಬ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ತಮ್ಮ ಸಹೋದರಿಯನ್ನು ಉಸಿರುಗಟ್ಟಿಸಿ ಕೊಂದ ನಂತರ ಶವವನ್ನು ಗಂಗ್ನಾಹರ್ ಕಾಲುವೆಯಲ್ಲಿ ಎಸೆದಿದ್ದಾರೆ ಎಂದು ಬಹಿರಂಗಪಡಿಸಿದರು. ಪೊಲೀಸರು ಕಾರ್ಯಪ್ರವೃತ್ತರಾಗಿ ಕಾಲುವೆಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತಮ್ಮ ಸಹೋದರಿ ಶೀಬಾ ದೆಹಲಿಯಲ್ಲಿ ಸಂಬಂಧಿಕರೊಂದಿಗೆ ತಂಗಿದ್ದರು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಸೂಫಿಯಾನ್ ಉತ್ತರಾಖಂಡದ ರೂರ್ಕಿಯವರು ಮತ್ತು ಅವರ ಚಿಕ್ಕಪ್ಪನ ಮಗ ಮಹತಾಬ್ ಮುಜಾಫರ್‌ನಗರದವರು. ಇತ್ತೀಚೆಗಷ್ಟೇ ಶೀಬಾಗೆ ಬೇರೊಂದು ಸಮುದಾಯದ ವ್ಯಕ್ತಿ ಜೊತೆಗಿನ ಸಂಬಂಧ ಇಬ್ಬರಿಗೆ ಗೊತ್ತಾಗಿದೆ. ಈ ಸಂಬಂಧವನ್ನು ವಿರೋಧಿಸಿದ ಇಬ್ಬರು ವ್ಯಕ್ತಿಗಳು ಆಕೆಯನ್ನು ಗಾಜಿಯಾಬಾದ್ ಕಾಲುವೆ ಬಳಿ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ನೀರಿಗೆ ಎಸೆದಿದ್ದಾರೆ.

ಶೀಬಾಳ ಬಟ್ಟೆಗಳು, ಚಪ್ಪಲಿಗಳು ಮತ್ತು ಆಕೆಯನ್ನು ಉಸಿರುಗಟ್ಟಿಸಲು ಬಳಸಿದ ವಸ್ತುವನ್ನು ಕಾಲುವೆಯಿಂದ ವಶಪಡಿಸಿಕೊಳ್ಳಲಾಗಿದೆ. ಸದ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಸ್ಥಳೀಯ ಡೈವರ್‌ಗಳ ತಂಡವು ಕಾಲುವೆಯಲ್ಲಿ ಶೋಧ ನಡೆಸುತ್ತಿದೆ. ಆದರೆ ಮೃತದೇಹ ಇನ್ನೂ ಪತ್ತೆಯಾಗಿಲ್ಲ.

Share This Article