– ತೆರಿಗೆ ಪಾವತಿ ಮಾಡುತ್ತಿದ್ದ 2 ಲಕ್ಷ ಮಹಿಳೆಯರು ಪತ್ತೆ
ಬೆಂಗಳೂರು: ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಫಲಾನುಭವಿಗಳಲ್ಲಿ ಅನರ್ಹರನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪತ್ತೆ ಹಚ್ಚಿದೆ. ತೆರಿಗೆ ಪಾವತಿ ಮಾಡ್ತಾ ಇದ್ದ 2 ಲಕ್ಷ ಮಂದಿಯನ್ನ ಅನರ್ಹರು ಎಂದು ಪರಿಗಣಿಸಿ ಯೋಜನೆಯಿಂದ ಕೈಬಿಡಲು ಇಲಾಖೆ ಮುಂದಾಗಿದೆ.
ಟ್ಯಾಕ್ಸ್ ಪೇಯರ್ ಅಂತಾ ಪರಿಗಣಿಸಿ ಅನರ್ಹರನ್ನ ಪತ್ತೆ ಹಚ್ಚಲಾಗಿದೆ. ಸದ್ಯ 1.28 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳು ಇದ್ದು, ಪ್ರತಿ ತಿಂಗಳು ಕೂಡ ಅನರ್ಹರನ್ನ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಆದಾಯ ತೆರಿಗೆ ಮಾಹಿತಿ ಜೊತೆಗೆ ತೆರಿಗೆ ಪಾವತಿ ಮಾಹಿತಿ ಆಧರಿಸಿ ಅನರ್ಹರು ಅಂತಾ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: 3 ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡ್ತಿದ್ದೇವೆ, ಪ್ರತಿ ತಿಂಗಳು ಹಣ ಕೊಡೋಕೆ ತೊಡಕುಗಳಿವೆ: ಹೆಚ್.ಎಂ ರೇವಣ್ಣ
ಸ್ತ್ರೀ ಶಕ್ತಿ ಸಂಘ ಮಾದರಿಯಲ್ಲಿ ಗೃಹಲಕ್ಷ್ಮೀ ಸಂಘಗಳನ್ನ ಮಾಡೋದಕ್ಕೆ ಇಲಾಖೆ ಸಿದ್ಧತೆ ನಡೆಸಿದ್ದು, ಗೃಹಲಕ್ಷ್ಮೀ ಸಂಘಗಳ ರಚನೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಪ್ರಸ್ತಾವನೆಯನ್ನ ಒಪ್ಪಿದ್ರೆ ಗೃಹಲಕ್ಷ್ಮೀ ಸಂಘಗಳ ರಚನೆ ಪ್ರಕ್ರಿಯೆ ಶುರುವಾಗಲಿದೆ.
ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಯರು ಪ್ರತಿ ತಿಂಗಳು ಪಡೆಯುವ ಎರಡು ಸಾವಿರ ರೂ.ಗಳನ್ನು ಸಂಘಗಳಲ್ಲಿ ಹೂಡಿಕೆ ಮಾಡಿ, ಸ್ವ-ಉದ್ಯೋಗದೊಂದಿಗೆ ಮತ್ತಷ್ಟು ಹಣ ಸಂಪಾದಿಸಿ ಆರ್ಥಿಕವಾಗಿ ಸಬಲಗೊಳಿಸಲು ಸಂಘಗಳು ನೆರವಾಗಲಿವೆ. 4ರಿಂದ 10 ಮಂದಿಗೆ ಒಂದು ಸಂಘ ರಚಿಸಲು ಉದ್ದೇಶಿಸಲಾಗಿದೆ. ಇದನ್ನೂ ಓದಿ: ಒಳಮೀಸಲಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹ: ಮುಖ್ಯಮಂತ್ರಿ ಚಂದ್ರು