ಕೊಪ್ಪಳದಲ್ಲಿ ಸಿಡಿಲಬ್ಬರಕ್ಕೆ ಇಬ್ಬರು ಬಲಿ

Public TV
1 Min Read

ಕೊಪ್ಪಳ: ಸಿಡಿಲು ಬಡಿದು (Lightning strikes) ಇಬ್ಬರು ಸಾವಿಗೀಡಾದ ಘಟನೆ ಕೊಪ್ಪಳದ (Koppal) ಚುಕ್ಕನಕಲ್ ಬಳಿ ನಡೆದಿದೆ.

ಮೃತರನ್ನು ಮಂಜುನಾಥ ಗಾಳಿ (48) ಗೋವಿಂದಪ್ಪ ಮ್ಯಾಗಲಮನಿ (62) ಎಂದು ಗುರುತಿಸಲಾಗಿದೆ. ಇಬ್ಬರೂ ಗುರುವಾರ ಸಂಜೆ ಗ್ರಾಮದ ತೋಟದ ಮನೆಯಲ್ಲಿದ್ದರು. ಈ ವೇಳೆ ಮಳೆ (Rain) ಬಂದಿದ್ದು, ತೋಟದ ಮನೆಯ ಕಿಟಕಿ ಬಾಗಿಲು ಹಾಕಲು ಹೋದಾಗ ಸಿಡಿಲು ಬಡಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಸಿಡಿಲು ಬಡಿದು ಯುವಕ ಸಾವು

ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಆಕಾಶದಲ್ಲೇ ತುಂಡಾದ ಹೆಲಿಕಾಪ್ಟರ್‌ನ ಫ್ಯಾನ್‌ – ಐವರು ದುರ್ಮರಣ

Share This Article