ಭದ್ರಾವತಿಯಲ್ಲಿ ಸಿಡಿಲು ಬಡಿದು ಸಹೋದರರ ದುರ್ಮರಣ

Public TV
1 Min Read

ಶಿವಮೊಗ್ಗ: ಸಿಡಿಲು ಬಡಿದ (Lightning Strike) ಪರಿಣಾಮ ಗದ್ದೆಗೆ ತೆರಳಿದ್ದ ಸಹೋದರರಿಬ್ಬರು ಸಾವಿಗೀಡಾದ ಘಟನೆ ಭದ್ರಾವತಿಯ (Bhadravati) ಹುಣಸೆಕಟ್ಟೆ ಜಂಕ್ಷನ್‍ನಲ್ಲಿ ನಡೆದಿದೆ

ಮೃತ ದುರ್ದೈವಿಗಳನ್ನು ಬೀರು (32) ಹಾಗೂ ಸುರೇಶ್ (30) ಎಂದು ಗುರುತಿಸಲಾಗಿದೆ. ಇಬ್ಬರೂ ಮಂಗಳವಾರ ರಾತ್ರಿ, ಕಟಾವಾಗಿದ್ದ ಭತ್ತದ ಗದ್ದೆಗೆ ಭತ್ತ ಕಾಯಲು ತೆರಳಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಭ್ರೂಣ ಪತ್ತೆ, ಹತ್ಯೆ ಪ್ರಕರಣ- ಆಲೆಮನೆ ಮಾಲೀಕನಿಂದ ಆಶಾ ಕಾರ್ಯಕರ್ತೆಗೆ ಬೆದರಿಕೆ

ಮೃತರ ಶವವನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯ ಮುಂಭಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್‌ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 6 ತಿಂಗಳಿಗೇ ಕಿತ್ತು ಬಂದ 1.58 ಕೋಟಿಯ 2 ಕಿ.ಮೀ ರಸ್ತೆ!

Share This Article