ಶಿವಮೊಗ್ಗ: ಪ್ರೇಮಿಗಳಿಗೆ (Lovers ) ಸಹಕರಿಸಿದ ಇಬ್ಬರನ್ನು ಯುವತಿಯ ಸಹೋದರ ಹಾಗೂ ಸ್ನೇಹಿತರು ಸೇರಿ ಚಾಕುವಿನಿಂದ ಇರಿದು ಹತ್ಯೆ (Murde) ಮಾಡಿದ ಘಟನೆ ಭದ್ರಾವತಿಯ (Bhadravathi) ಜೈಭೀಮ್ ಬಡಾವಣೆಯಲ್ಲಿ ನಡೆದಿದೆ.
ನಗರದ ಕಿರಣ್ (25), ಮಂಜುನಾಥ್ (45) ಹತ್ಯೆಯಾದ ಯುವಕರು. 2 ದಿನದ ಹಿಂದೆ ಮನೆ ತೊರೆದಿದ್ದ ಪ್ರೇಮಿಗಳು ಶುಕ್ರವಾರ ಸಂಜೆ ಹಳೆ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಹುಡುಗನ ಸ್ನೇಹಿತರ ಮೇಲೆ ಯುವತಿಯ ಸಹೋದರ ಹಾಗೂ ಆತನ ಸ್ನೇಹಿತರು ದಾಳಿ ಮಾಡಿದ್ದಾರೆ. ಜಗಳ ನಿಲ್ಲಿಸಲು ಹೋದಾಗ ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾರೆ. ಇದನ್ನೂ ಓದಿ: ನೇಣುಬಿಗಿದ ಸ್ಥಿತಿಯಲ್ಲಿ BAMS ವಿದ್ಯಾರ್ಥಿ ಶವ ಪತ್ತೆ – ಕಾಲೇಜು ವಿರುದ್ಧ FIR, ಮುಗಿಲುಮುಟ್ಟಿದ ಪೋಷಕರ ಆಕ್ರಂದನ
ಹುಡುಗಿ ಹುಡುಗನ ಜೊತೆ ಓಡಿ ಹೋಗುವಾಗ ಇವರಿಬ್ಬರು ಬೆಂಬಲ ನೀಡಿದ್ದಾರೆಂದು ದಾಳಿ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗಿಳಿ ಉಳಿಸಲು ಹೋದ ಯುವಕನ ಪ್ರಾಣ ಪಕ್ಷಿ ಹಾರಿಹೋಯ್ತು!

