ಗ್ಯಾಂಗ್ ವಾರ್‌ನಲ್ಲಿ ಸೇವಾ ಗನ್ ಬಳಸಿ ಇಬ್ಬರು ಪೊಲೀಸರು ಪರಾರಿ

Public TV
2 Min Read

ಶ್ರೀನಗರ: ಗ್ಯಾಂಗ್ ವಾರ್‌ನಲ್ಲಿ ಕಾನೂನುಬಾಹಿರವಾಗಿ ಇಬ್ಬರು ಪೊಲೀಸರು ಸೇವಾ ಗನ್ ಬಳಸಿ ಪರಾರಿಯಾಗಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ.

ಶುಕ್ರವಾರ ಜಮ್ಮುವಿನಲ್ಲಿ ನಡೆದ ಗ್ಯಾಂಗ್ ವಾರ್‌ನಲ್ಲಿ ಪೊಲೀಸರು ತಮ್ಮ ಸೇವಾ ಗನ್ ಅನ್ನು ಬಳಸಿ ಇಬ್ಬರನ್ನು ಕೊಲ್ಲಲಾಗಿದೆ. ಇದು ಕಾನೂನುಬಾಹಿರ ಕೃತ್ಯವಾಗಿದ್ದು, ಅವರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪೊಲೀಸರ ಶೋಧ ಕಾರ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮುಂದಾಗಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಿನ್ನೆ ಜಮ್ಮುವಿನ ಅರ್ನಿಯಾ ಪ್ರದೇಶದಲ್ಲಿ ಇಬ್ಬರು ಪೊಲೀಸರನ್ನು ಒಳಗೊಂಡ ತಂಡ ನಾಲ್ಕು ಜನರ ಗುಂಪನ್ನು ಬೆನ್ನಟ್ಟಿದ್ದರು. ಎಸ್‍ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಗುಂಪಿನ ಮೇಲೆ ಪೊಲೀಸರು ತಮ್ಮ ಸೇವಾ ಆಯುಧದಿಂದ ಗುಂಡು ಹಾರಿಸಿದ್ದು, ಅವರನ್ನು ಕೊಂದಿದ್ದಾರೆ. ಈ ತನಿಖೆಗೆ ವಿಶೇಷ ತನಿಖಾ ತಂಡ ಅಥವಾ ಎಸ್‍ಐಟಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಾವಳಿಯ ಫ್ಯಾಮಿಲಿ ಫೋಟೋ ಹಂಚಿಕೊಂಡು ಬಿಗ್ ಬಿ ಸಂಭ್ರಮ

ವಾಹನದೊಳಗೆ ಪೊಲೀಸ್ ಸಮವಸ್ತ್ರ ಕಂಡುಬಂದಿದೆ. ಈ ಹಿನ್ನೆಲೆ ಪೊಲೀಸರು ಜಮ್ಮುವಿನಲ್ಲಿ ಗ್ಯಾಂಗ್ ವಾರ್ ನಲ್ಲಿ ಭಾಗಿಯಾಗಿದ್ದು, ಅವರ ಸೇವಾ ಶಸ್ತ್ರಾಸ್ತ್ರಗಳನ್ನು ಕೃತ್ಯಕ್ಕೆ ಬಳಸಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಜಮ್ಮು ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್‍ಎಸ್‍ಪಿ ಚಂದನ್ ಕೊಹ್ಲಿ ಈ ಕುರಿತು ಮಾತನಾಡಿದ್ದು, ನಾವು ಅವರನ್ನು ಶೀಘ್ರದಲ್ಲೇ ಪತ್ತೆ ಹಚುತ್ತೇವೆ. ಆರೋಪಿಗಳಲ್ಲಿ ಓರ್ವ ಪೊಲೀಸ್ ಅನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಮೃತರನ್ನು ಸಬೀರ್ ಚೌಧರಿ ಮತ್ತು ಆರಿಫ್ ಚೌಧರಿ ಎಂದು ಗುರುತಿಸಲಾಗಿದೆ. ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಿಂಗ್ ಈ ಕುರಿತು ಮಾತನಾಡಿ, ಹತ್ಯೆಗೀಡಾದವರಲ್ಲಿ ಒಬ್ಬರು ಮಾದಕ ವ್ಯಸನಿಯಾಗಿದ್ದು, ಅವರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದ ಪೂರ್ತಿ ವಿವರ ಆರೋಪಿಗಳನ್ನು ಬಂಧಿಸಿದ ನಂತರ ತಿಳಿಯುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಜಾನುವಾರುಗಳ ಬಲಿ

ಅಧಿಕೃತ ಮೂಲಗಳ ಪ್ರಕಾರ ಆರೋಪಿಗಳಾದ ಬೂಪಿಂದರ್ ಸಿಂಗ್ ಮತ್ತು ಸುದಿಕ್ ಅವರನ್ನು ಜಮ್ಮುವಿನ ರಿಸರ್ವ್ ಪೊಲೀಸ್ ಬೆಟಾಲಿಯನ್‍ನಲ್ಲಿ ನಿಯೋಜಿಸಲಾಗಿತ್ತು. ಅಪರಾಧಗಳು ಮತ್ತು ಗ್ಯಾಂಗ್ ವಾರ್‍ಗಳಲ್ಲಿ ಸೇವಾ ಶಸ್ತ್ರಾಸ್ತ್ರಗಳ ಬಳಕೆಯು ಭದ್ರತಾ ಪರಿಸ್ಥಿತಿಗೆ ಗಂಭೀರ ಸವಾಲನ್ನು ಒಡ್ಡುತ್ತಿದೆ. ಈ ಹಿನ್ನೆಲೆ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *