ಕೇರಳ | SAI ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರು ನೇಣಿಗೆ ಶರಣು

1 Min Read

ತಿರುವನಂತಪುರಂ: ಕೇರಳದ (Kerala) ಕೊಲ್ಲಂನಲ್ಲಿರುವ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (Sports Authority Of India) ಹಾಸ್ಟೆಲ್‌ನಲ್ಲಿ ಇಬ್ಬರು ಹುಡುಗಿಯರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆತ್ಮಹತ್ಯೆಗೆ ಶರಣಾದ ಬಾಲಕಿಯರಲ್ಲಿ ಒಬ್ಬಳು ತಿರುವನಂತಪುರಂನವಳು ಹಾಗೂ ಮತ್ತೊಬ್ಬಳು ಕೋಯಿಕ್ಕೋಡ್ ಮೂಲದವಳಾಗಿದ್ದಳು. ಬಬ್ಬಳ ವಯಸ್ಸು 17 ಮತ್ತು ಮತ್ತೊಬ್ಬಳ ವಯಸ್ಸು 15 ವರ್ಷ ಎಂದು ತಿಳಿದು ಬಂದಿದೆ. ಇಬ್ಬರು ವಿದ್ಯಾರ್ಥಿನಿಯರು ಬೆಳಗಿನ ತರಬೇತಿಗೆ ತೆರಳಿಲ್ಲದೇ ಇದ್ದಿದ್ದನ್ನು ಹಾಸ್ಟೆಲ್‌ನ ಇತರೆ ವಿದ್ಯಾರ್ಥಿಗಳು ಗಮನಿಸಿ, ರೂಮ್‌ನ ಬಾಗಿಲು ಬಡಿದಿದ್ದಾರೆ. ಈ ವೇಳೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದನ್ನೂ ಓದಿ: 25 ಲಕ್ಷ ವಂಚನೆ – ತಂಗಿ ವಿರುದ್ಧವೇ ನಟಿ ಕಾರುಣ್ಯಾ ರಾಮ್‌ ದೂರು

ಈ ಬಗ್ಗೆ ಹಾಸ್ಟೆಲ್ ಸಿಬ್ಬಂದಿಗೆ ಉಳಿದ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಬಳಿಕ ಬಾಗಿಲು ಒಡೆದು ನೋಡಿದಾಗ ಇಬ್ಬರೂ ಹುಡುಗಿಯರ ಶವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 15 ವರ್ಷದ ಬಾಲಕಿ ಬೇರೆ ಕೋಣೆಯಲ್ಲಿ ವಾಸಿಸುತ್ತಿದ್ದಳು. ಬುಧವಾರ ರಾತ್ರಿ ಇನ್ನೊಂದು ಹುಡುಗಿಯ ಕೋಣೆಯಲ್ಲಿ ಬಂದು ತಂಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

17 ವರ್ಷದ ಬಾಲಕಿ 12ನೇ ತರಗತಿಯಲ್ಲಿ ಓದುತ್ತಿದ್ದು, ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಿದ್ದಳು. ಮತ್ತೊಬ್ಬಳು 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಕಬಡ್ಡಿ ತರಬೇತಿ ಪಡೆಯುತ್ತಿದ್ದಳು. ಕೊಠಡಿಯಿಂದ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 15 ರೂಪಾಯಿಗೆ ಸಿಕ್ತಾರೆ ಗರ್ಲ್‌ ಫ್ರೆಂಡ್‌ – ಆ್ಯಪ್‌ನಲ್ಲಿ ಮಹಿಳೆಯರ ಮಾನಹಾನಿ; ಕೊಡಗಿನ ವಿವಿಧ ಠಾಣೆಗಳಲ್ಲಿ ಕೇಸ್‌!

Share This Article