ಮದ್ವೆಗಾಗಿ ಪೊಲೀಸರ ಮೊರೆ ಹೋದ 2 ಅಡಿ 3 ಇಂಚು ಉದ್ದದ ವ್ಯಕ್ತಿ!

Public TV
2 Min Read

ಲಕ್ನೋ: 2 ಅಡಿ 3 ಇಂಚು ಉದ್ದದ 26 ವರ್ಷದ ವ್ಯಕ್ತಿಯೊಬ್ಬರು ತನಗೆ ಹುಡುಗಿಯನ್ನು ಹುಡುಕಿ ಮದುವೆ ಮಾಡಿಕೊಡಿ ಎಂದು ಪೊಲೀಸರ ಮೊರೆ ಹೋದ ವಿಚಿತ್ರ ಪ್ರಸಂಗವೊಂದು ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಹೌದು. ಅಜೀಮ್ ಮನ್ಸೂರಿ ತನಗೆ ತುರ್ತಾಗಿ ಸಂಗಾತಿಯನ್ನು ಹುಡುಕಿಕೊಡಿ ಎಂದು ಪೊಲೀಸ್ ಅಧಿಕಾರಿ ಅಮಿತ್ ಪಾಲ್ ಶರ್ಮಾ ಬಳಿ ದೂರು ನೀಡುವುದರ ಜೊತೆಗೆ ಮನವಿ ಮಾಡಿಕೊಂಡಿದ್ದಾರೆ.

ಅಜೀಮ್ 5ನೇ ಕ್ಲಾಸಿನಲ್ಲಿ ತನ್ನ ಓದು ನಿಲ್ಲಿಸಿದ್ದಾರೆ. ಆದರೆ ಇದೀಗ ನನ್ನ ಪೋಷಕರು ನನಗೆ ಹುಡುಗಿ ಹುಡುಕಿ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಅಜೀಮ್ ನೊಂದಿದ್ದರಿಂದ ಕೊತ್ವಾಲಿ ಪೊಲೀಸ್ ಠಾಣೆಯಿಂದ ಎಸ್‍ಡಿಎಂ ತಂಡವೊಂದು ಚೌಕ್ ಬಜಾರ್ ನಲ್ಲಿರುವ ಆತನ ಮನೆಗೆ ತೆರಳಿ, ಪೋಷಕರ ಜೊತೆ ಮಾತುಕತೆ ನಡೆಸಿದೆ.

ಪೊಲೀಸ್ ಅಧಿಕಾರಿಗಳು ಮನೆಗೆ ಬಂದು ಮದುವೆ ಬಗ್ಗೆ ಮಾತನಾಡಿದಾಗ ಪೋಷಕರು ಎರಡು ತಿಂಗಳು ಸಮಯಾವಕಾಶ ಕೊಡಿ ಎಂದು ಹೇಳಿದ್ದರು. ಆದರೆ ಮಾತು ಕೊಟ್ಟಿದ್ದ ಪೋಷಕರು ಇದುವರೆಗೂ ನನಗೆ ಸಂಗಾತಿಯನ್ನು ಹುಡುಕಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಒಂದು ವೇಳೆ ಮನೆಯವರು ಎರಡು ತಿಂಗಳೊಳಗೆ ಹುಡುಗಿ ಹುಡುಕಿ ಕೊಡದಿದ್ದರೆ ನಾವು ಸಹಾಯ ಮಾಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಅಜೀಮ್ ಹೇಳಿದ್ದಾರೆ.

ಅಜೀಮ್ ಮನವಿ ಮಾಡಿಕೊಂಡ ಬಳಿಕ ನಾವು ಆತನ ಮನೆಯವರು ಯಾಕೆ ಅಜೀಮ್ ಮದುವೆಗೆ ನಿರಾಕರಿಸುತ್ತಾರೆ ಎಂದು ತನಿಖೆ ನಡೆಸಿದ್ದೇವೆ. ಈ ವೇಳೆ ಆತನ ತಂದೆ ಹಾಗೂ ಸಂಬಂಧಿಕರು ಅಜೀಮ್ ಮದುವೆಯಿಂದ ದೂರ ಉಳಿದಿರುವುದು ಬೆಳಕಿಗೆ ಬಂತು. ಈ ಹಿನ್ನೆಲೆಯಲ್ಲಿ ನಾವು ಆತನ ಮದುವೆಗೆ ಸಹಾಯ ಮಾಡುವುದಾಗಿ ಹೇಳಿದ್ದೇವೆ ಎಂದು ಪೊಲೀಸ್ ಅಧಿಕಾರಿ ರಾಜೇಂದ್ರ ಕುಮಾರ್ ನಗರ್ ತಿಳಿಸಿದ್ದಾರೆ.

ಈ ವರ್ಷದ ರಂಜಾನ್ ಹಬ್ಬವನ್ನು ತನ್ನ ಪತ್ನಿ ಜೊತೆ ಆಚರಿಸಬೇಕೆಂಬ ಕನಸು ಹೊಂದಿದ್ದಾರೆ. ಹಾಗೆಯೇ ತಾನು ಮದುವೆಯಾಗಿ ಕುಟುಂಬವನ್ನು ಸಾಕುತ್ತೇನೆ ಎಂಬ ವಿಶ್ವಾಸ ಹೊಂದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಅಜೀಮ್ ತಂದೆ ನಸೀಮ್ ಮನ್ಸೂರಿ ಜನರಲ್ ಸ್ಟೋರ್ ಒಂದು ನಡೆಸುತ್ತಿದ್ದಾರೆ. ಅಲ್ಲದೆ ಬಡ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡುವ ಎನ್‍ಜಿಓ ಒಂದರ ಅಧ್ಯಕ್ಷರಾಗಿದ್ದಾರೆ. ಆದರೆ ಇದೀಗ ತಾನು ಮಗನ ಮದುವೆ ಮಾಡುವಲ್ಲಿ ನಿಸ್ಸಾಹಯಕನಾಗಿದ್ದೇನೆ. ವಯಸ್ಸಿನ ಹೊರತಾಗಿ ಆತ ಇನ್ನೂ ಮುಗ್ಧ ಮಕ್ಕಳಂತೆ ಕಾಣುತ್ತಾನೆ. ಹೀಗಾಗಿ ಆತನಿಗೆ ಸಂಗಾತಿ ಹುಡುಕಲು ಕಷ್ಟವಿದೆ ಎಂದು ನಸೀಮ್ ಹೇಳಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಸಂಬಂಧಿಕರ ಮದುವೆಗೆ ಲಕ್ನೋಗೆ ತೆರಳಿದ್ದ ಸಂದರ್ಭದಲ್ಲಿ ಅಜೀಮ್, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ತುರ್ತು ಮನವಿ ಮಾಡಿ ಭೇಟಿ ಮಾಡಿದ್ದರು. ಈ ವೇಳೆ ಅವರು ಕೂಡ ಅಜೀಮ್ ಗೆ ಭರವಸೆ ನೀಡಿದ್ದರು ಎಂಬುದಾಗಿ ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *