ಯೋಧರ ಮೇಲೆ ಹಲ್ಲೆಗೆ ಯತ್ನ – ಬಾಂಗ್ಲಾ ಮೂಲದ ಇಬ್ಬರು ಸ್ಮಗ್ಲರ್‌ಗಳು ಗುಂಡೇಟಿಗೆ ಬಲಿ

Public TV
1 Min Read

ಕೋಲ್ಕತ್ತಾ: ಸೇನಾ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾದ ಇಬ್ಬರು ಸ್ಮಗ್ಲರ್‌ಗಳನ್ನು ಬಿಎಸ್‍ಎಫ್ ಯೋಧರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯಲ್ಲಿ ಇಬ್ಬರು ಬಾಂಗ್ಲಾ (Bangladesh) ಸ್ಮಗ್ಲರ್‌ಗಳು ಹೊಸದಾಗಿ ನಿರ್ಮಿಸಿದ್ದ ಮುಳ್ಳು ಬೇಲಿಯನ್ನು ತುಂಡು ಮಾಡಿ ಒಳನುಸುಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಗಸ್ತು ತಿರುಗುತ್ತಿದ್ದ ಬಿಎಸ್‍ಎಫ್ (BSF) ಯೋಧರು ಗಾಳಿಯಲ್ಲಿ ಗುಂಡು ಹಾರಿಸಿದಾಗ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಸ್ಮಗ್ಲ್‍ರ್‍ಗಳು ಏಕಾಏಕಿ ಯೋಧರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಹಾರಿಸಿದ ಗುಂಡಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಹಿಳೆ ನಿಗೂಢ ಸಾವಿಗೆ ಟ್ವಿಸ್ಟ್- ತಾಯಿ ಹತ್ಯೆಗೈದು ಮಗಳನ್ನು ಅಪಹರಿಸಿದ್ನಾ ಪ್ರಿಯಕರ?

ಈ ಬಗ್ಗೆ ಬಿಎಸ್‍ಎಫ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಮೃತದೇಹಗಳನ್ನು ಅವರಿಗೆ ಹಸ್ತಾಂತರಿಸಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಕ್ತಿನಗರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಹತ್ಯೆಗೀಡಾದ ಇಬ್ಬರನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: JSW ಗ್ರೂಪ್‍ನ ಅಧ್ಯಕ್ಷನ ಮೇಲೆ ಅತ್ಯಾಚಾರ ಆರೋಪ- ಸಜ್ಜನ್ ಜಿಂದಾಲ್ ಹೇಳಿದ್ದೇನು..?

Share This Article