ಅಕ್ರಮ ಸಾಗಾಟ – 4 ಲಕ್ಷ ಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ ಜಪ್ತಿ

Public TV
1 Min Read

ಬೀದರ್: ಅನ್ಯ ರಾಜ್ಯದ ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿದ್ದ ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿಯನ್ನು (PDS Rice) ಬೀದರ್ ಪೊಲೀಸರು (Bidar Police) ಭರ್ಜರಿ‌ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿಕೊಂಡಿದ್ದಾರೆ

ಬೀದರ್ ನಗರದ ಗೋಲೆಖಾನ್ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಒಟ್ಟು 4 ಲಕ್ಷ ರೂ. ಅಧಿಕ ಮೌಲ್ಯದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಹುಮ್ನಾಬಾದ್ ತಾಲೂಕಿನ ಚಿದ್ರಿಯಲ್ಲೂ ಅಕ್ರಮವಾಗಿ ಸಾಗಿಸುತ್ತಿದ್ದ 34 ಸಾವಿರ‌ ರೂ. ಮೌಲ್ಯದ 10 ಕ್ವಿಂಟಲ್ ಅಕ್ಕಿಯನ್ನು ಜಪ್ತಿ‌ ಮಾಡಲಾಗಿದೆ. ಇದನ್ನೂ ಓದಿ: ಮಂಡ್ಯದಿಂದ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ?

 


ಅಕ್ರಮಕ್ಕೆ ಬಳಸಿದ ಗೂಡ್ಸ್ ಗಾಡಿಯನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿದ ಆರೋಪದ ಅಡಿ ಇಬ್ಬರನ್ನು ಬಂಧಿಸಲಾಗಿದೆ. ಈ ಸಂಬಂಧ ಬೀದರ್ ನಗರ ಹಾಗೂ ಹುಮ್ನಾಬಾದ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಬಿಜೆಪಿ ಅಸಮಾಧಾನಿತರಿಗೆ ಕಾಂಗ್ರೆಸ್ ಗೇಟ್ ಬಂದ್ – ಸಿಎಂ ಹೇಳಿದ ಖಡಕ್‌ ಮಾತು ಏನು?

Share This Article