ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಡ್ರೋನ್ ಮೂಲಕ ಕೋವಿಡ್ ಲಸಿಕೆ ಟ್ರಯಲ್

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಡ್ರೋನ್ ಮೂಲಕ ಕೋವಿಡ್ ಲಸಿಕೆಯನ್ನು ವಿತರಣೆ ಮಾಡುವ ಕಾರ್ಯ ನಡೆದಿದೆ.

ಆನೇಕಲ್ ತಾಲೂಕಿನ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್ ಲಸಿಕೆಯನ್ನು ಪ್ರಪ್ರಥಮ ಬಾರಿಗೆ ಡ್ರೋನ್ ಮೂಲಕ ವಿತರಣೆ ಮಾಡುವ ಕಾರ್ಯ ಯಶಸ್ವಿಯಾಗಿ ನಡೆಯಿತು. ಚಂದಾಪುರದ ಆರೋಗ್ಯ ಕೇಂದ್ರದಿಂದ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 14 ಕಿಲೋಮೀಟರ್ ನಷ್ಟು ದೂರವಿದ್ದು ವಾಹನದಲ್ಲಿ ಸಂಚರಿಸಿದರೆ ಸುಮಾರು 40 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. ಆದರೆ ಈ ಡ್ರೋನ್ ಮೂಲಕ ಮೇಲೆ ಹಾರಿದಾಗ ಕೇವಲ 7 ಕಿಲೋಮೀಟರ್ ನಷ್ಟು ಅಂತರವಿದ್ದು, 7 ನಿಮಿಷಗಳಲ್ಲಿ ತಲುಪಬಲ್ಲ ಸಾಮರ್ಥ್ಯ ಹಾಗೂ 15 ಕೆಜಿಯಷ್ಟು ತೂಕವನ್ನ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ನನ್ನ ಕುಟುಂಬಕ್ಕೆ ಭದ್ರತೆ ಕೊಡಿ ಎಂದು ಮೋದಿಗೆ ಮನವಿ ಸಲ್ಲಿಸಿದ ಪಾಕ್ ಕ್ರಿಕೆಟಿಗನ ಪತ್ನಿ

ಇದನ್ನು ಕೌನ್ಸಿಲ್ ಆಫ್ ರಿಸರ್ಚ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಹಾಗೂ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಸ್ (CSIR-NAL) ನಿಂದ ಈ ಪ್ರಯೋಗವು ನಡೆದಿದ್ದು, ನಾಗರಿಕ ವಿಮಾನಯಾನ ಸಚಿವಾಲಯವು ನಿಯಂತ್ರಕ ಅನುಸರಣೆಯೊಂದಿಗೆ ಡ್ರೋನ್ ಪ್ರಯೋಗಗಳನ್ನು ನಡೆಸಲು ಷರತ್ತುಬದ್ಧ ಅನುಮತಿಯನ್ನು ನೀಡಿದ್ದು, ಈ ಪ್ರಯೋಗವನ್ನ ವೈದ್ಯರು, ವಿಜ್ಞಾನಿಗಳು ಹಾಗೂ ಡ್ರೋನ್ ಆಪರೇಟರ್ ಗಳು ಯಶಸ್ವಿಯಾಗಿ ನಡೆಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಪೊಲ್ಯೂಷನ್ ಲಾಕ್‍ಡೌನ್ – 1 ವಾರ ಆನ್‌ಲೈನ್‌ ಕ್ಲಾಸ್‌, ವರ್ಕ್‌ ಫ್ರಂ ಹೋಂ

Share This Article
Leave a Comment

Leave a Reply

Your email address will not be published. Required fields are marked *