ಕೊನೆಯಲ್ಲಿ ಸ್ಯಾಮ್ಸನ್‌ ಸಿಕ್ಸರ್‌, ಬೌಂಡರಿ ಆಟ – ಭಾರತಕ್ಕೆ ವಿರೋಚಿತ ಸೋಲು, ಆಫ್ರಿಕಾಗೆ 9 ರನ್‌ ಜಯ

Public TV
2 Min Read

ಲಕ್ನೋ: ಕೊನೆಯಲ್ಲಿ ಸಂಜು ಸ್ಯಾಮ್ಸನ್‌ (Sanju Samson) ಅವರ ಸ್ಫೋಟಕ ಬ್ಯಾಟಿಂಗ್‌ ಹೊರತಾಗಿಯೂ ಮೊದಲ ಏಕದಿನ ಪಂದ್ಯದಲ್ಲಿ ಭಾರತದ(India) ವಿರುದ್ಧ ದಕ್ಷಿಣ ಆಫ್ರಿಕಾ(South Africa) 9 ರನ್‌ಗಳ ರೋಚಕ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮಳೆಯಿಂದಾಗಿ(Rain) ನಡೆದ 40 ಓವರ್‌ಗಳ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 4 ವಿಕೆಟ್‌ ನಷ್ಟಕ್ಕೆ 249 ರನ್‌ ಗಳಿಸಿತು. ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ 40 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 240 ರನ್‌ ಗಳಿಸಿತು.

ಸಂಜು ಸ್ಯಾಮ್ಸನ್‌ ಮತ್ತು ಶಾರ್ದೂಲ್‌ ಠಾಕೂರ್‌ 6ನೇ ವಿಕೆಟಿಗೆ 66 ಎಸೆತಗಳಿಗೆ 93 ರನ್‌ ಜೊತೆಯಾಟವಾಡಿದಾಗ ಭಾರತದ ಗೆಲುವಿನ ಆಸೆ ಚಿಗುರಿತ್ತು. ಆದರೆ ಕೊನೆಯಲ್ಲಿ ಶಾರ್ದೂಲ್‌ ಠಾಕೂರ್‌, ಕುಲದೀಪ್‌ ಯಾದವ್‌, ಆವೀಶ್‌ ಖಾನ್‌ ಔಟಾದರೂ ಸ್ಯಾಮ್ಸನ್‌ ಸ್ಫೋಟಕ ಆಟ ಆಡಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು.

ಕೊನೆಯ ಓವರ್‌ನಲ್ಲಿ 31 ರನ್‌ ಬೇಕಿತ್ತು. ತಬ್ರೈಜ್ ಶಮ್ಸಿ ಎಸೆದ ಓವರ್‌ನಲ್ಲಿ 1 ಸಿಕ್ಸ್‌, 3 ಬೌಂಡರಿಯನ್ನು ಸ್ಯಾಮ್ಸನ್‌ ಹೊಡೆದರು. ಅಂತಿಮವಾಗಿ ಈ ಓವರ್‌ನಲ್ಲಿ 20 ರನ್‌ ಬಂತು. 38 ಮತ್ತು 39 ಓವರ್‌ನಲ್ಲಿ ಕ್ರಮವಾಗಿ 8, 7 ರನ್‌ ಬಂದಿತ್ತು. ಈ ಓವರ್‌ನಲ್ಲಿ ಜಾಸ್ತಿ ರನ್‌ ಬಂದಿದ್ದರೆ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚಿತ್ತು.

ಶಾರ್ದೂಲ್‌ ಠಾಕೂರ್‌ 33 ರನ್‌(31 ಎಸೆತ, 6 ಬೌಂಡರಿ) ಹೊಡೆದು ಔಟಾದರೆ ಸ್ಯಾಮ್ಸನ್‌ ಔಟಾಗದೇ 86 ರನ್‌(63 ಎಸೆತ, 9 ಎಸೆತ, 3 ಸಿಕ್ಸರ್‌) ಹೊಡೆದರು. 38ನೇ ಓವರ್‌ನಲ್ಲಿ ರಬಡಾ ಶಾರ್ದೂಲ್‌ ಠಾಕೂರ್‌ ಮತ್ತು ಕುಲದೀಪ್‌ ಯಾದವ್‌ ಅವರನ್ನು ಔಟ್‌ ಮಾಡಿದ್ದರಿಂದ ಪಂದ್ಯ ದಕ್ಷಿಣ ಆಫ್ರಿಕಾದ ಕಡೆ ವಾಲಿತು.

ಆರಂಭದಲ್ಲೇ ಕುಸಿತ:
ಆರಂಭಿಕ ಆಟಗಾರರಾದ ನಾಯಕ ಶಿಖರ್‌ ಧವನ್‌ ಮತ್ತು ಶುಭಮನ್‌ ಗಿಲ್‌ ತಂಡದ ಮೊತ್ತ 8 ರನ್‌ ಗಳಿಸುವಷ್ಟರಲ್ಲಿ ಔಟಾದರು. ಋತುರಾಜ್‌ ಗಾಯಕ್‌ವಾಡ್‌ 19 ರನ್‌(42 ಎಸೆತ, 1 ಬೌಂಡರಿ) ಇಶನ್‌ ಕಿಶನ್‌ 20 ರನ್‌(37 ಎಸೆತ, 3 ಬೌಂಡರಿ) ಹೊಡೆದು ಸ್ವಲ್ಪ ಚೇತರಿಕೆ ನೀಡಿದರು.

ಶ್ರೇಯಸ್‌ ಅಯ್ಯರ್‌ ಬಿರುಸಿನ ಬ್ಯಾಟ್‌ ಮಾಡಿ 50 ರನ್‌(37 ಎಸೆತ, 8 ಬೌಂಡರಿ) ಚಚ್ಚಿದ್ದರು. ಲುಂಗಿ ಎನ್‌ಗಿಡಿ ಮೂರು, ರಬಡಾ ಎರಡು ವಿಕೆಟ್‌ ಕಿತ್ತರು.

ಮಿಲ್ಲರ್‌, ಕ್ಲಾಸೆನ್ ಕ್ಲಾಸಿಕ್‌ ಆಟ:
ಟಿ20ಯಲ್ಲಿ ಶತಕ ಸಿಡಿಸಿದ ಡೇವಿಡ್‌ ಮಿಲ್ಲರ್‌ ಮತ್ತೆ ತಂಡಕ್ಕೆ ನೆರವಾದರು. ಮಿಲ್ಲರ್‌ ಮತ್ತು ಹೆನ್ರಿಕ್ ಕ್ಲಾಸೆನ್ ಮುರಿಯದ 5ನೇ ವಿಕೆಟ್‌ಗೆ 106 ಎಸೆತಗಳಲ್ಲಿ 139 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 240 ರ ಗಡಿ ದಾಟಿಸಿದರು.

ಮಿಲ್ಲರ್‌ 75 ರನ್‌(63 ಎಸೆತ, 5 ಬೌಂಡರಿ, 3 ಸಿಕ್ಸರ್‌), ಹೆನ್ರಿಕ್ ಕ್ಲಾಸೆನ್ 74 ರನ್‌(65 ಎಸೆತ, 6 ಬೌಂಡರಿ, 2 ಸಿಕ್ಸರ್‌) ಹೊಡೆದರು. ಕೀಪರ್‌ ಕ್ವಿಂಟಾನ್‌ ಡಿಕಾಕ್‌ 48 ರನ್‌(54 ಎಸೆತ, 5 ಬೌಂಡರಿ) ಹೊಡೆದು ಸ್ವಲ್ಪದರಲ್ಲೇ ಅರ್ಧಶತಕ ತಪ್ಪಿಸಿಕೊಂಡರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *