ವಿಶ್ವಕಪ್‌ಗೆ ಅರ್ಹತೆ ಪಡೆಯದ ವಿಂಡೀಸ್‌ ವಿರುದ್ಧ ತಿಣುಕಾಡಿ ಗೆದ್ದ ಭಾರತ

Public TV
2 Min Read

ಬ್ರಿಡ್ಜ್‌ಟೌನ್‌: ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದ ನಡುವೆಯೂ ವಿಂಡೀಸ್‌ (West Indies) ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯವನ್ನು ಭಾರತ ತಿಣುಕಾಡಿ (Team India) 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ ಕೇವಲ 23 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಗುರಿಯನ್ನು ಬೆನ್ನಟ್ಟಿದ ಭಾರತ 22.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 118 ರನ್‌ ಗಳಿಸಿ ಗುರಿ ತಲುಪಿತು. ಏಕದಿನ ವಿಶ್ವಕಪ್ ಕ್ರಿಕೆಟ್‌ಗೆ ಅರ್ಹತೆ ಪಡೆಯದ ವಿಂಡೀಸ್‌ ವಿರುದ್ಧ ಟೀಂ ಇಂಡಿಯಾ 5 ವಿಕೆಟ್‌  ಕಳೆದುಕೊಂಡಿರುವುದರ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.

ಭಾರತದ ಪರ ಆರಂಭಿಕ ಆಟಗಾರ ಇಶನ್‌ ಕಿಶನ್‌ (Ishan Kishan) 4ನೇ ಅರ್ಧಶತಕ ಸಿಡಿಸಿ 52 ರನ್‌(46 ಎಸೆತ, 7 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು. ಸೂರ್ಯಕುಮಾರ್‌ ಯಾದವ್‌ (Suryakumar Yadav) 19 ರನ್‌ ಹೊಡೆದರು. ನಾಯಕ ರೋಹಿತ್‌ ಶರ್ಮಾ (Rohith Sharma) 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದು ವಿಶೇಷವಾಗಿತ್ತು. ರವೀಂದ್ರ ಜಡೇಜಾ ಔಟಾಗದೇ 16 ರನ್‌, ರೋಹಿತ್‌ ಶರ್ಮಾ ಔಟಾಗದೇ 12 ರನ್‌ ಹೊಡೆದರು. ಶುಭಮನ್‌ ಗಿಲ್‌ 7 ರನ್‌, ಹಾರ್ದಿಕ್‌ ಪಾಂಡ್ಯ 5, ಶಾರ್ದೂಲ್‌ ಠಾಕೂರ್‌ 1 ರನ್‌ ಗಳಿಸಿ ಔಟಾದರು. ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ಗೆ ಇಳಿದಿರಲಿಲ್ಲ.  ಇದನ್ನೂ ಓದಿ: ಟೀಂ ಇಂಡಿಯಾ ರೋಹಿತ್‌, ಕೊಹ್ಲಿಯನ್ನ ನೆಚ್ಚಿಕೊಂಡಿಲ್ಲ – ಶ್ರೀಲಂಕಾ ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ?

3 ವಿಕೆಟ್‌ ನಷ್ಟಕ್ಕೆ 88 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ವಿಂಡೀಸ್‌ 26 ರನ್‌ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡ ಪರಿಣಾಮ ಹೀನಾಯ ಸೋಲನ್ನು ಅನುಭವಿಸಿತು. ನಾಯಕ ಶಾಯ್ ಹೋಪ್ (Shai Hope) 43 ರನ್‌(45 ಎಸೆತ, 4 ಬೌಂಡರಿ, 1 ಸಿಕ್ಸರ್)‌, ಅಲಿಕ್ ಅಥಾನಾಜೆ 22 ರನ್‌(18 ಎಸೆತ, 3 ಬೌಂಡರಿ, 1 ಸಿಕ್ಸರ್)‌ ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

ಕುಲದೀಪ್‌ ಯಾದವ್‌ 4 ವಿಕೆಟ್‌ ಕಿತ್ತರೆ, ಜಡೇಜಾ 3 ವಿಕೆಟ್‌ ಪಡೆದರು. ಹಾರ್ದಿಕ್‌ ಪಾಂಡ್ಯ , ಮುಕೇಶ್‌ ಕುಮಾರ್‌, ಶಾರ್ದೂಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದರು.


Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್