1970ರ ಪ್ರೀತಿಗೆ ಮರುಜೀವ- 50 ವರ್ಷದ ನಂತರ ಸಿಕ್ಕಳು ಪ್ರಿಯತಮೆ

Public TV
2 Min Read

ನವದೆಹಲಿ: ಪ್ರಿಯತಮೆಗಾಗಿ ಕಾದು ಕುಳಿತಿದ್ದ ಪ್ರೇಮಿಗೆ 50 ವರ್ಷದ ನಂತರ ಪ್ರೀತಿ ಸಿಕ್ಕಿರುವ ಘಟನೆ ನಡೆದಿದೆ.

70ರ ದಶಕದಲ್ಲಿ ಭಾರತ ಪ್ರವಾಸಕ್ಕಾಗಿ ಆಸ್ಟ್ರೇಲಿಯಾದಿಂದ ಮರೀನಾ ಎಂಬ ಹುಡುಗಿಯೊಬ್ಬಳು ಬಂದಿದ್ದಳು. ಮರೀನಾ ರಾಜಸ್ಥಾನಕ್ಕೆ ಬಂದಾಗ ಜೈಸಲ್ಮೇರ್ ಜಿಲ್ಲೆಯ ಕುಲ್ದಾರಾ ಎಂಬ ಹಳ್ಳಿಯ ಯುವಕ ಮರೀನಾಗೆ ಸುತ್ತಮುತ್ತಲಿನ ಪ್ರದೇಶವನ್ನು ತೋರಿಸಿದ್ದನು. ಹಾಗೇ ಸುತ್ತಾಡುವಾಗ ಅವರಿಬ್ಬರ ಮಧ್ಯೆ ಪ್ರೀತಿಯಾಗಿತ್ತು. ಮರೀನಾ ತನ್ನ ದೇಶಕ್ಕೆ ವಾಪಾಸ್ ಆಗುವಾಗ ಐ ಲವ್ ಯೂ ಎಂದು ಹೇಳಿ ಹೋಗಿದ್ದಳು.

ಆ ಒಂದು ಮಾತಿಗಾಗಿ ತನ್ನ ಜೀವನವನ್ನೇ ಹಿಡಿದು ಆಕೆಗಾಗಿ ಕಾಯುತ್ತಾ ಇದ್ದನು. ಆಕೆ ಒಂದಲ್ಲಾ ಒಂದು ದಿನ ಬರುತ್ತಾಳೆ ಎಂದು ಕಾದು ಕುಳಿತ. ಬರಗಾಲದಿಂದ ಇಡೀ ಹಳ್ಳಿಯೆ ಖಾಲಿಯಾದರೂ ತಾನೊಬ್ಬನೇ ಅಲ್ಲಿಯೇ ಕಾಯುತ್ತಾ ಕುಳಿತುಕೊಂಡಿದ್ದನು.

ನಾನು ಮೊದಲ ಬಾರಿಗೆ ಮರೀನಾಳನ್ನು ಭೇಟಿಯಾದಾಗ 30ರ ಹರೆಯದಲ್ಲಿದ್ದೆ. ಅವಳು ಆಸ್ಟ್ರೇಲಿಯಾದಿಂದ ಜೈಸಲ್ಮೇರ್‍ಗೆ ಮರುಭೂಮಿ ಸಫಾರಿಗಾಗಿ ಬಂದಿದ್ದಳು. 5 ದಿನಗಳ ಪ್ರವಾಸವಾಗಿತ್ತು. ನಾನು ಅವಳಿಗೆ ಒಂಟೆ ಸವಾರಿ ಮಾಡಲು ಕಲಿಸಿದೆ. 1970ರ ದಶಕವಾಗಿತ್ತು ಆಗ ನಮ್ಮಿಬ್ಬರಿಗೂ ಮೊದಲ ನೋಟದಲ್ಲೇ ಪ್ರೇಮವಾಗಿತ್ತು. ಪ್ರವಾಸದುದ್ದಕ್ಕೂ, ನಮ್ಮ ಕಣ್ಣುಗಳು ಪರಸ್ಪರ ಇಬ್ಬರನ್ನು ನೋಡಿಕೊಳ್ಳುತ್ತಿದ್ದವು. ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಳು. ಆಗ ನನಗೆ ಆ ಒಂದು ಮಾತಿಗೆ ಪ್ರತಿಕ್ರಿಯೆಯಾಗಿ ಒಂದು ಪದವನ್ನು ಉಚ್ಚರಿಸಲು ಸಾಧ್ಯವಾಗಲಿಲ್ಲ.

ಆದರೆ ನನ್ನ ಭಾವನೆಯನ್ನು ಅವಳು ಅರ್ಥಮಾಡಿಕೊಂಡಳು, ನಾವು ಸಂಪರ್ಕದಲ್ಲಿದ್ದೇವು. ಮರೀನಾ ಪ್ರತಿ ವಾರ ನನಗೆ ಪತ್ರ ಬರೆಯುತ್ತಿದ್ದಳು. ಶೀಘ್ರದಲ್ಲೇ, ಅವಳು ನನ್ನನ್ನು ಆಸ್ಟ್ರೇಲಿಯಾಕ್ಕೆ ಆಹ್ವಾನಿಸಿದಳು. ಆಗ ನಾನು ನನ್ನ ಕುಟುಂಬಕ್ಕೆ ತಿಳಿಸದೆ, ನಾನು ರೂ.30,000 ಸಾಲವನ್ನು ತೆಗೆದುಕೊಂಡು ಟಿಕೆಟ್ ಖರೀದಿಸಿದ್ದೇನು. ಅವಳು ನನಗೆ ಇಂಗ್ಲಿಷ್ ಕಲಿಸಿದ್ದಳು. ನಾವಿಬ್ಬರು ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸೋಣ ಎಂದಿದ್ದಳು. ನನ್ನ ತಾಯಿನಾಡನ್ನು ಬಿಡಲು ನಾನು ಸಿದ್ಧವಾಗಿರಲಿಲ್ಲ. ಹೀಗೆ ಇನ್ನಿತರ ಹಲವು ಕಾರಣಗಳಿಂದ ನಾವು ದೂರವಾದೆವು.

ಕೆಲವು ವರ್ಷಗಳ ನಂತರ ಕುಟುಂಬದ ಒತ್ತಡದಿಂದಾಗಿ, ನಾನು ಮದುವೆಯಾಗಬೇಕಾಯಿತು. ನನ್ನ ಕುಟುಂಬಕ್ಕಾಗಿ ಕೆಲಸ ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದೇನು. ಆದರೆ ನಾನು ಆಗಾಗ್ಗೆ ಮರೀನಾ ಬಗ್ಗೆ ಯೋಚಿಸುತ್ತೇನೆ. ಅವಳು ಮದುವೆಯಾಗಿರಬಹುದೇ?, ನಾನು ಅವಳನ್ನು ಮತ್ತೆ ನೋಡಬಹುದೇ? ಎಂದು ಆದರೆ ಅವಳಿಗೆ ಪತ್ರ ಬರೆಯಲು ನನಗೆ ಧೈರ್ಯವಿರಲಿಲ್ಲ.

ಸಮಯ ಕಳೆದಂತೆ ನೆನಪುಗಳು ಮರೆಯಾಗುತ್ತಿದ್ದವು. ನಾನು ಕುಟುಂಬದ ಜವಾಬ್ದಾರಿಗಳಲ್ಲಿ ನಿರತನಾಗಿದ್ದೇನು. 2 ವರ್ಷಗಳ ಹಿಂದೆ ನನ್ನ ಹೆಂಡತಿ ತೀರಿಕೊಂಡಳು. ನನ್ನ ಎಲ್ಲಾ ಮಕ್ಕಳು ಮದುವೆಯಾದರು. ಇಲ್ಲಿ ನಾನು 82 ವರ್ಷದ ವ್ಯಕ್ತಿಯಾಗಿದ್ದೇನೆ ಎಂದು ಹೇಳಿದ್ದರು ಇದಾಗಿ ಬರೊಬ್ಬರಿ 50 ವರ್ಷಗಳೆ ಕಳೆದಿದೆ. ಈತನ ಪ್ರೇಮ ಕಥೆಯನ್ನು ಕೇಳಿದ ಪ್ರವಾಸಿಗರೊಬ್ಬರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡು ಫೋಟೋವನ್ನು ಹಂಚಿಕೊಂಡಿದ್ದರು.

ಈ ಪ್ರೇಮ ಕಥೆಯನ್ನು ಮರೀನಾ ಓದಿದ್ದಾರೆ. ನಂತರ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯನ್ನು ಸಂಪರ್ಕಿಸಿ ತನ್ನ ಪ್ರೇಮಿಯ ವಿಳಾಸವನ್ನು ಮರೀನಾ ತಿಳಿದುಕೊಂಡಿದ್ದಾರೆ. ನಂತರ ತನ್ನ ಪ್ರೇಮಿಗೆ ಮರೀನಾ ನಾನು ಆದಷ್ಟು ಬೇಗ ಬರುತ್ತೇನೆ, ನನಗೂ ಇನ್ನೂ ವಿವಾಹವಾಗಿಲ್ಲ ಎಂದು ಪತ್ರವನ್ನು ಬರೆದಿದ್ದಾರೆ.

ನಾನು ಮತ್ತೆ 21 ವರ್ಷದವನಾಗಿದ್ದೇನೆ. ಭವಿಷ್ಯವು ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ, ಆದರೆ ನನ್ನ ಮೊದಲ ಪ್ರೀತಿ ನನ್ನ ಜೀವನದಲ್ಲಿ ಮರಳಿದೆ. ಈ ಸಂತೋಷವನ್ನು ನನಗೆ ವಿವರಿಸಲು ಸಾಧ್ಯವಿಲ್ಲ ಎಂದು ಪ್ರೇಮಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *