1947ರಲ್ಲಿ ರಾಷ್ಟ್ರಧ್ವಜ ಖರೀದಿ- ಹಾಳಾಗಬಾರದೆಂದು ಬ್ಯಾಂಕ್ ಲಾಕರಿನಲ್ಲಿಡುವ ವೃದ್ಧ

Public TV
1 Min Read

– ಪ್ರತಿ ವರ್ಷ ಮನೆ ಮುಂದೆ ಹಾರುತ್ತೆ ಈ ರಾಷ್ಟ್ರಧ್ವಜ

ಧಾರವಾಡ: ಬ್ಯಾಂಕ್ ಲಾಕರಿನಲ್ಲಿ ಸಹಜವಾಗಿ ಚಿನ್ನದ ಒಡವೆ, ಹಣ ಅಥವಾ ಆಸ್ತಿ ದಾಖಲೆಗಳನ್ನು ಇಟ್ಟಿರುವುದನ್ನ ನೋಡಿದ್ದೆವೆ. ಆದರೆ ಧಾರವಾಡ ನಗರದ ಗಾಂಧಿನಗರ ನಿವಾಸಿಯೊರ್ವರು ರಾಷ್ಟ್ರಧ್ವಜವನ್ನು ತಮ್ಮ ಬ್ಯಾಂಕ್ ಲಾಕರಿನಲ್ಲಿ ಇಟ್ಟಿರುತ್ತಾರೆ.

ಗಂಗಾಧರ ಕುಲಕರ್ಣಿ(86) ಅವರು ತಮ್ಮ ಸಿಂಡಿಕೇಟ್ ಬ್ಯಾಂಕ್ ಲಾಕರಿನಲ್ಲಿ ಈ ರಾಷ್ಟ್ರಧ್ವಜವನ್ನು ಇಡುತ್ತಾರೆ. ಇದನ್ನು ಆಗಸ್ಟ್ 15 ಬಂದಾಗ ಮಾತ್ರ ಅಲ್ಲಿಂದ ತಂದು ಧ್ವಜಾರೋಹಣ ಮಾಡುತ್ತಾರೆ. ಕಳೆದ 7 ವರ್ಷಗಳಿಂದ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ. ಒಟ್ಟು 73 ವರ್ಷಗಳ ಹಿಂದೆ ಅಂದರೆ, 1947 ರಲ್ಲಿ ಭಾರತಕ್ಕೆ ಸ್ವತಂತ್ರ್ಯ ಸಿಕ್ಕಾಗ ಗಂಗಾಧರ ಅವರು 4ನೇ ತರಗತಿಯಲ್ಲಿ ಓದುತ್ತಿದ್ದರು. ಆಗ ಇವರ ಗುರುಗಳು ಈ ಧ್ವಜವನ್ನು ಖರೀದಿ ಮಾಡಲು ಹೇಳಿದ್ದರಂತೆ, ಹೀಗಾಗಿ ಇದನ್ನ ಖರೀದಿ ಮಾಡಿದ್ದರು.

ಆಗಿನಿಂದ 2006ರ ವರೆಗೆ ಗಂಗಾಧರ ಅವರ ತಾಯಿಯೇ ಧ್ವಜಾರೋಹಣ ಮಾಡುತಿದ್ದರು. ಆದರೆ ಅವರ ನಂತರ ಗಂಗಾಧರ ಅವರು ಇದನ್ನ ಇಟ್ಟುಕೊಂಡಿದ್ದಾರೆ. 1947ರಲ್ಲಿ ಇದನ್ನು ಖರೀದಿಸಿದ್ದು, ಹಾಗೂ ಇದರ ಹಿಂದೆ ನೆನಪಿನ ಬುತ್ತಿ ಇರುವುದರಿಂದ ಯಾರಾದರು ಮುಟ್ಟಿ ಅಗೌರವ ತೋರಬಾರದು ಹಾಗೂ ಹಾಳಾಗಬಾರದು ಎಂಬ ಉದ್ದೇಶದಿಂದ ಬ್ಯಾಂಕ್ ಲಾಕರ್‍ನಲ್ಲಿ ಇಡುತ್ತಾರೆ. ಇವರ ಈ ಅಭಿಮಾನ ಹಾಗೂ ರಾಷ್ಟ್ರ ಪ್ರೇಮ ನೋಡಿ ಸ್ಥಳೀಯರು ಸಂತಸ ವ್ಯಕ್ತ ಪಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *