ಹಾಸನ: ಬೆಂಗಳೂರಿನ ಜೆಪಿ ನಗರದಲ್ಲಿ ಹಾಸನ (Hassana) ಮೂಲದ ಯುವಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಿಶಾಂತ್ (19) ಮೃತಪಟ್ಟ ಯುವಕ. ಹೊಳೆನರಸೀಪುರ (Holenarispura) ಪಟ್ಟಣದ ಚನ್ನಕೇಶವ ಹಾಗೂ ಜ್ಯೋತಿ ದಂಪತಿ ಪುತ್ರ ನಿಶಾಂತ್ ಡಿಪ್ಲೋಮಾ ಮುಗಿಸಿ ಕೈಗಾರಿಕಾ ತರಬೇತಿ ಸಲುವಾಗಿ 15 ದಿನದ ಹಿಂದೆ ಬೆಂಗಳೂರಿಗೆ (Bengaluru) ತೆರಳಿದ್ದರು. ಇದನ್ನೂ ಓದಿ: ಹಳಬರು ಜಿಡ್ಡು ಹಿಡಿದು ಹೋಗಿದ್ದಾರೆ, ಹೊಸಬರಿಗೆ ಸಚಿವ ಸ್ಥಾನ ಕೊಟ್ರೆ ಕೆಲಸ ಮಾಡ್ತಾರೆ: ಶಿವಗಂಗಾ ಬಸವರಾಜ್
ಇಂದು ರೂಂನಲ್ಲಿದ್ದಾಗ ತೀವ್ರ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಮೃತದೇಹವನ್ನು ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಹಾಸನಕ್ಕೆ ತರಲಾಗುತ್ತದೆ. ಇದನ್ನೂ ಓದಿ: ಇಡಿ ತನಿಖೆಯಿಂದ ವಾಲ್ಮೀಕಿ ನಿಗಮ ಹಗರಣದ ಹಿಂದಿನ ಮಹಾನಾಯಕರ ಮುಖವಾಡ ಕಳಚಲಿದೆ: ಶ್ರೀರಾಮುಲು
ಎರಡು ತಿಂಗಳ ಅಂತರದಲ್ಲಿ ಹಾಸನ ಮೂಲದ ನಾಲ್ವರು ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ. ಹೊಳೆನರಸೀಪುರ ಪಟ್ಟಣದ ಓರ್ವ ಯುವಕ, ಯುವತಿ, ಅರಕಲಗೂಡು ತಾಲ್ಲೂಕಿನ ಓರ್ವ ಯುವಕ, ಹಾಸನ ತಾಲ್ಲೂಕಿನ ಓರ್ವ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದರು.