ಮಂಗಳೂರು| ಲವ್, ಸೆಕ್ಸ್, ದೋಖಾ – ಇಲಿ ಪಾಷಾಣ ಸೇವಿಸಿ ಅಪ್ರಾಪ್ತೆ ಆತ್ಮಹತ್ಯೆ

Public TV
1 Min Read

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವ್, ಸೆಕ್ಸ್, ದೋಖಾ ಪ್ರಕರಣವೊಂದು ವರದಿಯಾಗಿದೆ. ಅಪ್ರಾಪ್ತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಘಟನೆ ನಡೆದಿದ್ದು, 17ರ ಅಪ್ರಾಪ್ತೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯಿಂದ ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನ.20 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ. ಪುತ್ರಿಯ ಸಾವಿಗೆ ಸಂಬಂಧಿ ಪ್ರವೀಣ್ ಚಾರ್ಮಾಡಿ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಹುಡುಗಿಗೆ ಸಂಬಂಧಿ ಪ್ರವೀಣ್ ಚಾರ್ಮಾಡಿ ಲವ್ ಆಗಿತ್ತು. ಮದುವೆ ಆಗುವುದಾಗಿ ಆಕೆ ಜೊತೆ ಲೈಂಗಿಕ ಸಂಪರ್ಕ ಕೂಡ ನಡೆಸಿದ್ದಾನೆ. ಬಳಿಕ ಮದುವೆ ಆಗುವುದಿಲ್ಲ ಎಂದು ದೋಖಾ ಮಾಡಿದ್ದಾನೆ. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕುಟುಂಬಸ್ಥರು ದೂರಿದ್ದಾರೆ.

ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: ಉದ್ಯಮಿ ಜೀವಾ ಆತ್ಮಹತ್ಯೆ ಕೇಸ್‌ – ಡೆತ್‌ನೋಟ್‌ FSLಗೆ ಕಳುಹಿಸಲು ಸಿಸಿಬಿ ತಯಾರಿ

Share This Article