ಹರಿಯಾಣದ ಪ್ರತ್ಯೇಕ 3 ಕಡೆ ಭೀಕರ ಅಪಘಾತ – 17 ಮಂದಿ ದುರ್ಮರಣ

Public TV
1 Min Read

ಚಂಡೀಗಢ: ಹರಿಯಾಣದ (Haryana Accidents) ಪ್ರತ್ಯೇಕ ಮೂರು ಕಡೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 17 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.

ಅಂಬಾಲಾದ ಶಹಜಾದ್‌ಪುರದ ಕಕ್ಕರ್ ಮಜ್ರಾ ಗ್ರಾಮದ ಬಳಿ ಖಾಸಗಿ ಬಸ್ ಅಪಘಾತಕ್ಕೀಡಾಗಿ 8 ಜನರು ಮೃತಪಟ್ಟಿದ್ದಾರೆ. ಬಸ್ ಉತ್ತರ ಪ್ರದೇಶದ ಬರೇಲಿಯಿಂದ ಹಿಮಾಚಲ ಪ್ರದೇಶದ ಬಡ್ಡಿಗೆ ತೆರಳುತ್ತಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ನನ್ನ ಕ್ರೀಡಾ ಜೀವನದ ಆರಂಭ ಸುಖಕರವಾಗಿರಲಿಲ್ಲ- ಬೆಳ್ಳಿ ಗೆದ್ದ ಸಹಾನಿ

ಶುಕ್ರವಾರ ನಸುಕಿನಲ್ಲಿ ಎನ್‌ಎಚ್-44 ರ ಸಮಲ್ಖಾದ ಜತಿಪುರ್ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಝಾ ಗ್ರಾಮದ ನಿವಾಸಿಗಳು ಟ್ರ್ಯಾಕ್ಟರ್‌ನಲ್ಲಿ ಸಮಲ್ಖಾದ ಚುಲ್ಕಾನಾ ಗ್ರಾಮದ ಖತು ಶ್ಯಾಮ್ ಧಾಮಕ್ಕೆ ಭೇಟಿ ನೀಡಿ ಊರಿಗೆ ವಾಪಸ್‌ ಆಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಮತ್ತೊಂದು ಪ್ರಕರಣದಲ್ಲಿ, ಫರಿದಾಬಾದ್-ಗುರುಗ್ರಾಮ್ ಹೆದ್ದಾರಿಯ ಮಾಂಗರ್ ಚೌಕ್ ಬಳಿ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಮೃತರು ಪಲ್ವಾಲ್ ಮೂಲದವರಾಗಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಗುರುಗ್ರಾಮದಿಂದ ವಾಪಸಾಗುತ್ತಿದ್ದರು. ಇದನ್ನೂ ಓದಿ: ಮರ್ಮಾಂಗ ಕತ್ತರಿಸಿ ಪತಿಯನ್ನೇ ಕೊಂದ್ಳು – 5ನೇ ಹೆಂಡತಿಯಿಂದಲೇ ಗಂಡನಿಗೆ ಗಂಡಾಂತರ

ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *