ಭಾರತದ ವೀಸಾ ನಿಯಮ ಉಲ್ಲಂಘನೆ – 17 ಬಾಂಗ್ಲಾ ಪ್ರಜೆಗಳು ಅರೆಸ್ಟ್

Public TV
2 Min Read

ದಿಸ್ಪುರ್: ಪ್ರವಾಸಿ ವೀಸಾ ನಿಯಮ (Indian Visa Rules) ಉಲ್ಲಂಘಿಸಿ, ಅನುಮತಿ ಪಡೆಯದೇ ಧಾರ್ಮಿಕ ಬೋಧನೆ ನಡೆಸುತ್ತಿದ್ದ ಆರೋಪದ ಮೇಲೆ 17 ಮಂದಿ ಬಾಂಗ್ಲಾದೇಶದ (Bangladesh) ಪ್ರಜೆಗಳನ್ನು ಅಸ್ಸಾಂನ ಬಿಸ್ವನಾಥ್ ಚರಿಯಾಲಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಬಿಸ್ವನಾಥ್ ಜಿಲ್ಲೆಯ ಗಿಂಗಿಯಾ ಪ್ರದೇಶದ ದೂರದ ಬಾಗ್ಮರಿ ಪ್ರದೇಶದಲ್ಲಿ ಅವರನ್ನು ಬಂಧಿಸಲಾಗಿದೆ. ಅಸ್ಸಾಂಗೆ ಬರುವ ಮೊದಲು ಅವರು ರಾಜಸ್ಥಾನದ (Rajasthan) ಅಜ್ಮೀರ್ ಷರೀಫ್ ಮತ್ತು ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದು ಡಿಜಿಪಿ (DGP) ಭಾಸ್ಕರ್ ಜ್ಯೋತಿ ಮಹಾಂತ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ತನ್ನ ಖಾಸಗಿ ವೀಡಿಯೋ ಮಾತ್ರ ಬಾಯ್‌ಫ್ರೆಂಡ್‌ಗೆ ಹಂಚಿಕೊಂಡಿದ್ಲು – ವಿವಿ ಸ್ಪಷ್ಟನೆ

ಸೈಯದ್ ಅಶ್ರಫುಲ್ ಆಲಂ ಈ ಬಾಂಗ್ಲಾದೇಶಿಗರ ತಂಡದ ನೇತೃತ್ವ ವಹಿಸಿದ್ದರು. ಪ್ರವಾಸಿ ವೀಸಾದಲ್ಲಿ (Tourist Visas) ಅನುಮತಿಯಿಲ್ಲದೇ ಧಾರ್ಮಿಕ ಬೋಧನೆ (Religious Teaching), ಸಮಾರಂಭ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು. ಇದಕ್ಕೂ ಮುನ್ನ ಐದು ಜನರ ಬಾಂಗ್ಲಾದೇಶಿಗರ ತಂಡ ಕಳೆದ ಆಗಸ್ಟ್ 28ರಂದು ಅಸ್ಸಾಂನ ದಕ್ಷಿಣ ಸಲ್ಮಾರ ಮಂಕಚಾರ್ ಜಿಲ್ಲೆಯ ಮೂಲಕ ಅಕ್ರಮವಾಗಿ ಗಡಿ ಪ್ರವೇಶಿಸಿತ್ತು. ಐವರನ್ನೂ ಬಿಎಸ್‌ಎಫ್ (BSF) ಬಂಧಿಸಿತ್ತು. ಇದನ್ನೂ ಓದಿ: ಸಿನಿಮಾ ರಂಗದ ಪ್ರತಿಭಾವಂತ ಯುವ ನಟಿ ದೀಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ

ಅದಾದ ಬಳಿಕ ಪ್ರವಾಸಿ ನಿಯಮ ಉಲ್ಲಂಘಿಸಿ 17 ಮಂದಿ ಅಸ್ಸಾಂ ಪ್ರವೇಶಿಸಿದ್ದಾರೆ. ಬಾಗ್ಮರಿ ಪ್ರದೇಶದಲ್ಲಿ ಯಾವುದೇ ಪ್ರವಾಸಿ ಆಕರ್ಷಣೆ ಇಲ್ಲ. ಆದರೂ ಈ ವಿದೇಶಿಗರು ಏಕೆ ಇಲ್ಲಿಗೆ ಬಂದಿದ್ದಾರೆ ಎನ್ನುವ ರಹಸ್ಯ ಹುಡುಕಿ ಹೊರಟಾಗ ಅವರು ಧಾರ್ಮಿಕ ಉಪದೇಶ ಮತ್ತು ಧಾರ್ಮಿಕ ಚಟುವಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ವಿವಿಧ ದಿನಾಂಕಗಳಲ್ಲಿ ತಂಡೋಪತಂಡವಾಗಿ ಅಸ್ಸಾಂಗೆ ಪ್ರವೇಶಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಅವರನ್ನು ಬಂಧಿಸಲಾಗಿದೆ ಎಂದು ಭಾಸ್ಕರ್ ಜ್ಯೋತಿ ಮಹಾಂತ ತಿಳಿಸಿದ್ದಾರೆ.

ಕಳೆದ ಶನಿವಾರ ಬಂಧಿಸಿದ ಐವರಲ್ಲಿ ಇಬ್ಬರನ್ನು ಅಪರಾಧಿಗಳೆಂದು ತೀರ್ಮಾನಿಸಿ ಕ್ಷಿಣ ಸಲ್ಮಾರಾ ಮಂಕಚಾರ್ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇಬ್ಬರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ತಲಾ 10 ಸಾವಿರ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದಲ್ಲಿ ಇನ್ನೂ 6 ತಿಂಗಳಕಾಲ ಜೈಲು ಶಿಕ್ಷೆ ವಿಸ್ತರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *