161 ಮನೆ ನೆಲಸಮ ಆಗಿದೆ, 26 ಜನಕ್ಕೆ ಇವತ್ತೇ ಮನೆ ಕೊಡಬಹುದು: ಜಮೀರ್

1 Min Read

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿದ್ದ (Kogilu Layout) 161 ಮನೆ ನೆಲಸಮ ಆಗಿದೆ. ದಾಖಲಾತಿ ಪರಿಶೀಲನೆ ಆಗುತ್ತಿದೆ. 26 ಜನರಿಗೆ ಮನೆ ಕೊಡಬಹುದು ಎಂದು ಸಚಿವ ಜಮೀರ್ ಅಹ್ಮದ್ (Zameer Ahmed) ಹೇಳಿದ್ದಾರೆ.

ಕೋಗಿಲು ಲೇಔಟ್‌ನಲ್ಲಿ ನಿರಾಶ್ರಿತರಿಗೆ ಗೃಹ ಭಾಗ್ಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರ ದಾಖಲೆ ನೋಡಬೇಕು. ದಾಖಲಾತಿ ಪರಿಶೀಲನೆ ಆಗುತ್ತಿದೆ. ಕಂಡೀಷನ್ ಹಾಕಿ ಮನೆ ಕೊಡುತ್ತೇವೆ. ವಲಸಿಗರಿಗೆ ಯಾವ ಕಾರಣಕ್ಕೂ ಕೊಡಲ್ಲ. ಸ್ಥಳೀಯರು ಆಗಿರಬೇಕು, ಅವರಿಗೆ ಮಾತ್ರ ಮನೆ ಎಂದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯೇ ಬಟ್ಟೆ ಹರಿದುಕೊಂಡಿದ್ದಾಳೆ: ಸಂತೋಷ್ ಲಾಡ್

ಕ್ಯಾಬಿನೆಟ್‌ನಲ್ಲಿ ಯಾವುದೇ ಚರ್ಚೆ ಮಾಡಲ್ಲ, ಸಿಎಂ ಈಗಾಗಲೇ ಮೀಟಿಂಗ್ ಮಾಡಿ ಸೂಚನೆ ಕೊಟ್ಟಿದ್ದಾರೆ. 26 ಜನರ ದಾಖಲೆಗಳು ಕ್ಲಿಯರ್ ಆಗಿದೆಯಂತೆ. ಅವರಿಗೆ ಇವತ್ತು ಮನೆ ಕೊಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಸಹ ಸಿಬ್ಬಂದಿಯಿಂದ ಕಿರುಕುಳ – ಸಂಚಾರ ಪೊಲೀಸ್‌ ಠಾಣೆಯಲ್ಲೇ ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ

ಕೋಗಿಲು ಬಡಾವಣೆಯಲ್ಲಿರುವ ಒಟ್ಟು 119 ಕುಟುಂಬಗಳ ಪೈಕಿ 76 ಕುಟುಂಬಗಳು ವಾಸ ಮಾಡ್ತಿರೋದು ಕಳೆದ 6 ತಿಂಗಳಿನಿAದ. ಉಳಿದ 43 ಕುಟುಂಬಗಳಲ್ಲಿ 37 ಕುಟುಂಬಗಳು ಬೆಂಗಳೂರು ಮೂಲದವರೇ, ಇನ್ನುಳಿದ 6 ಕುಟುಂಬಗಳು ಕೆಲ ವರ್ಷಗಳ ಹಿಂದೆ ಕೋಗಿಲು ಲೇಔಟ್‌ಗೆ ಬಂದು ನೆಲೆಸಿದ್ದಾರೆ. ಹೀಗಾಗಿ 37 ಕುಟುಂಬಗಳು ಹೊರತುಪಡಿಸಿದ್ರೆ, ಉಳಿದೆಲ್ಲರು ವಲಸಿಗರು ಎಂದು ಪರಿಗಣಿಸಲಾಗಿದೆ. ಇದನ್ನೂ ಓದಿ: ರೈಲು ಹರಿದು ಕೈ ಕಟ್ – ಗಾಂಜಾ ಮತ್ತಿನಲ್ಲಿ ಚಿಕಿತ್ಸೆ ಬೇಡ ಅಂತ ಓಡಿದ ಭೂಪ

ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಇಂದು ಸಣ್ಣ ಲಿಸ್ಟ್ ಸಲ್ಲಿಕೆ ಆಗಲಿದೆ. ಸಚಿವ ಸಂಪುಟ ಸಭೆಯಲ್ಲೂ ಕೂಡ 37 ಅರ್ಹರ ಬಗ್ಗೆ ಚರ್ಚೆ ಆಗುವ ಸಾಧ್ಯತೆಯಿದೆ. 37 ಮಂದಿ ಅರ್ಹರಾಗಿದ್ದು, ದಾಖಲಾತಿಗಳನ್ನ ಪರಿಶೀಲಿಸಲಾಗುತ್ತಿದೆ. ಪೊಲೀಸ್ ವೆರಿಫಿಕೇಷನ್ ಆಗಿರುವ ಅರ್ಹರಿಗೆ ಮನೆ ಸಿಗಲಿದೆ. ಇದನ್ನೂ ಓದಿ: ಮೂಡಿಗೆರೆ | ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ

Share This Article