16ರ ಹುಡುಗಿ ಮೇಲೆ ಅತ್ಯಾಚಾರ- ಕಾಂಡೋಮ್ ಬಳಸಿದ್ದಕ್ಕಾಗಿ ಜಾಮೀನು ಕೊಟ್ಟ ಹೈಕೋರ್ಟ್

Public TV
2 Min Read

ಮುಂಬೈ: 16 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯೊಬ್ಬನಿಗೆ ಕಾಂಡೋಮ್ ಬಳಸಿದ್ದಾನೆ ಹಾಗೂ ಕೃತ್ಯದ ಪರಿಣಾಮ ಆಕೆಗೆ ಅರಿವಿತ್ತು ಎಂಬ ಅಂಶಗಳನ್ನು ಗುರುತಿಸಿ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

2019ರ ಸೆಪ್ಟೆಂಬರ್ 9 ರಂದು ಕೊಲ್ಲಾಪುರ ಪೊಲೀಸರು ಬಂಧನದಲ್ಲಿರಿಸಿದ್ದ ಆರೋಪಿಯ ಜಾಮೀನು ಅರ್ಜಿಯನ್ನು ಏಕ-ನ್ಯಾಯಾಧೀಶ ಪೀಠದ ಸಿ.ವಿ.ಭದಂಗ್ ವಿಚಾರಣೆ ನಡೆಸಿ, ಜಾಮೀನು ನೀಡಲು ಮುಂದಾಗಿದ್ದಾರೆ. ಆರೋಪಿಯು 2 ವರ್ಷಕ್ಕಿಂತ ಹೆಚ್ಚು ಕಾಲ ಪೊಲೀಸ್ ಬಂಧನದಲ್ಲಿದ್ದಾನೆ ಎಂಬುದನ್ನು ಪರಿಗಣಿಸಿ 25,000 ರೂ. ಶ್ಯೂರಿಟಿಯೊಂದಿಗೆ ಅವರಿಗೆ ಜಾಮೀನು ನೀಡಲಾಗಿದೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ

STOP RAPE

ಸಂತ್ರಸ್ತೆಗೆ 16 ವರ್ಷ 6 ತಿಂಗಳ ವಯಸ್ಸಾಗಿದ್ದರಿಂದ ಮತ್ತು ಆಕೆಗೆ ಕ್ರಿಯೆಯ ಪರಿಣಾಮಗಳ ಬಗ್ಗೆ ಅರಿವಿದೆ ಎಂದು ಗಮನಿಸುವುದು ಅವಶ್ಯವಾಗಿದೆ. ಇದರಲ್ಲಿ ಯಾವುದೇ ಬಲವಂತದ ಅಂಶಗಳಿಲ್ಲ ಎಂದು ಸೂಚಿಸುವ ಸಂದರ್ಭಗಳಿವೆ. ಅಲ್ಲದೆ ವೈದ್ಯಕೀಯ ವರದಿಯ 15 (F)ರ ಪ್ರಕಾರ ಅರ್ಜಿದಾರರು ಸಂಭೋಗದ ವೇಳೆ ರಕ್ಷಣೆ (ಕಾಂಡೋಮ್) ಸಹ ಬಳಸಿದ್ದಾರೆಂಬುದನ್ನು ಎಂಬಿತ್ಯಾದಿ ಅಂಶಗಳನ್ನು ನ್ಯಾಯಾಲಯ ಗುರುತಿಸಿದೆ.

ಸಂತ್ರಸ್ತೆ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಆರ್.ಕಪಾಡ್ನಿಸ್ ಪ್ರಕಾರ, ಸಂತ್ರಸ್ತೆಯ ತಂದೆ ಎಫ್‌ಐಆರ್ ದಾಖಲಿಸಿದಾಗ ಆಕೆಗೆ 16 ವರ್ಷ 6 ತಿಂಗಳ ವಯಸ್ಸು. ಆರೋಪಿಯು ಆಕೆಗೆ ಮುಂಚೆಯೇ ಪರಿಚಯವಿದ್ದರಿಂದ 2019ರ ಮೇ ತಿಂಗಳಲ್ಲಿ ಹುಡುಗಿಯನ್ನು ತನ್ನ ಮನೆಯ ಹಿಂದೆ ಕರೆದೊಯ್ದಿದ್ದಾನೆ. ಆಕೆಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ವಾದಿಸಿದ್ದರು. ಆಕೆಯನ್ನು ಪೋಕ್ಸೊ ಕಾಯ್ದೆ ಅಡಿಯಲ್ಲಿ ಅಪ್ರಾಪ್ತೆ ಎಂದೂ ಉಲ್ಲೇಖಿಸಿದ್ದರು. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು

crime

ಇದು ಕೆಲವು ತಿಂಗಳ ಕಾಲ ಮುಂದುವರಿಯಿತು. ಅಂತಿಮವಾಗಿ ಸಂತ್ರಸ್ತೆಯ ತಂದೆ ಸಂಬಂಧದ ಬಗ್ಗೆ ತಿಳಿದುಕೊಂಡು ಆರೋಪಿಯ ವಿರುದ್ಧ FIR ದಾಖಲಿಸಿದರು. ಆರೋಪಿ ಪರ ವಾದ ಮಂಡಿಸಿದ ವಕೀಲ ಪರಸ್ ಯಾದವ್, ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವಳಾಗಿದ್ದರೂ ಆಕೆಗೆ ವಯಸ್ಸಾಗಿರುವುದರಿಂದ ಕೃತ್ಯದ ಸ್ವರೂಪ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ. ಈ ಸಂಬಂಧವು ಒಮ್ಮತದಿಂದ ಕೂಡಿದೆ ಎಂದು ಸೂಚಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ವಿಶ್ವಾಸಮತ ಗಳಿಸುವಲ್ಲಿ ವಿಫಲ- ಅಧಿಕಾರ ಕಳೆದುಕೊಂಡ ಇಮ್ರಾನ್ ಖಾನ್

ವಾದ – ಪ್ರತಿವಾದಗಳನ್ನು ಪರಿಶೀಲಿಸಿದ ನ್ಯಾಯಾಲಯವು ಆರೋಪಿಯ ಪರ ವಾದವನ್ನು ಸ್ವೀಕರಿಸಿ ಅವರಿಗೆ ಜಾಮೀನು ಮಂಜೂರು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *