ಚಿಕ್ಕಮಗಳೂರಲ್ಲಿ ಭಾರೀ ಗಾಳಿ ಮಳೆ – ಸಿಡಿಲಿಗೆ ಬಾಲಕ ಬಲಿ

1 Min Read

ಚಿಕ್ಕಮಗಳೂರು: ಜಿಲ್ಲೆಯ (Chikkamagaluru) ಕಳಸ (Kalasa) ಸುತ್ತಮುತ್ತಾ ಭಾರೀ ಗಾಳಿ ಮಳೆಯಾಗುತ್ತಿದ್ದು, ಸಿಡಿಲಿಗೆ (Lightning) ಬಾಲಕನೊಬ್ಬ ಬಲಿಯಾಗಿದ್ದಾನೆ.

- Advertisement -

ಮೃತ ಬಾಲಕನನ್ನು ಅಸ್ಸಾಂ ಮೂಲದ ಮೌರುದ್ದಿನ್ (16) ಎಂದು ಗುರುತಿಸಲಾಗಿದೆ. ಕಳಸದ ಗುಮ್ಮನಖಾನ್ ಎಸ್ಟೇಟ್‍ನ ಲೈನ್ ಮನೆಯಲ್ಲಿ ಮಲಗಿದ್ದಾಗ ಸಿಡಿಲು ಬಡಿದಿದೆ. ಬಾಲಕ ಕಾಫಿ ತೋಟದ ಕೆಲಸಕ್ಕೆ ಕುಟುಂಬದೊಂದಿಗೆ ಬಂದಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಬೆಂಗಳೂರಲ್ಲಿ ಬೀದಿ ನಾಯಿ ಮೇಲೆ ಗ್ಯಾಂಗ್‌ ರೇಪ್‌; ನಶೆಯಲ್ಲಿದ್ದ ಕಾಮುಕರಿಂದ ಪೈಶಾಚಿಕ ಕೃತ್ಯ

- Advertisement -

- Advertisement -

ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕನ ಮೃತದೇಹವನ್ನು ಕಳಸದ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ವೈದ್ಯೆ ಕೃತಿಕಾ ಹತ್ಯೆ ಕೇಸ್ – 11 ತಿಂಗಳಿಂದ ಪತ್ನಿ ಹತ್ಯೆಗೆ ಸ್ಕೆಚ್ ಹಾಕಿದ್ದ ಕಿಲ್ಲರ್ ಪತಿ

- Advertisement -

Share This Article