ಸುಡಾನ್‌ನಲ್ಲಿ ರಾಕೆಟ್‌ ಗುಂಡಿನ ದಾಳಿ – 16 ಮಂದಿ ಸಾವು

By
1 Min Read

ಖಾರ್ತೌಮ್: ಡಾರ್ಫರ್ ಪ್ರದೇಶದಲ್ಲಿ ಸುಡಾನ್ (Sudan) ಸೇನೆ ಮತ್ತು ಅರೆಸೇನಾ ಪಡೆಗಳ (ಆರ್‌ಎಸ್‌ಎಫ್) ನಡುವಿನ ರಾಕೆಟ್ ಗುಂಡಿನ ವೇಳೆ 16 ಜನರು ಸಾವನ್ನಪ್ಪಿದ್ದಾರೆ.

ದಕ್ಷಿಣ ಡಾರ್ಫುರ್ ರಾಜ್ಯದ ರಾಜಧಾನಿ ನ್ಯಾಲಾದಲ್ಲಿ ಈ ಘಟನೆ ನಡೆದಿದೆ. ಸಾವಿರಾರು ಜನರು ಪಶ್ಚಿಮ ಡಾರ್ಫರ್‌ ಪ್ರದೇಶದಿಂದ ಪಲಾಯನ ಮಾಡುತ್ತಿದ್ದಾರೆ. ನೆರೆಯ ಚಾಡ್‌ ಪ್ರದೇಶದ ಗಡಿಗೆ ಸೇರಲು ಪ್ರಯತ್ನಿಸುತ್ತಿದ್ದಾರೆ. ಈ ನಿರಾಶ್ರಿತರು ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನೂ ಓದಿ: ಓವರ್‌ಲೋಡ್‌ನಿಂದ ಕೊಳಕ್ಕೆ ಉರುಳಿದ ಬಸ್ – 17 ಮಂದಿ ಸಾವು, 35 ಮಂದಿಗೆ ಗಾಯ

ಜನಾಂಗೀಯತೆ ಕಾರಣಕ್ಕಾಗಿ ಆರ್‌ಎಸ್‌ಎಫ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಮಿಲಿಷಿಯಾಗಳು ನಿರಾಶ್ರಿತರನ್ನು ಗುರಿಯಾಗಿಸಿಕೊಂಡಿದ್ದಾರೆ. ಹಲವು ದಿನಗಳಿಂದ ಸುಡಾನ್‌ ಸೇನೆ ಮತ್ತು ಅರೆಸೇನೆಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇಲ್ಲಿಯವರೆಗೆ ಸುಡಾನ್‌ನಾದ್ಯಂತ ಸುಮಾರು 3,000 ಜನರು ಹತ್ಯೆಯಾಗಿದ್ದಾರೆ.

ಗೆಜಿರಾ ರಾಜ್ಯದ ಉತ್ತರದಲ್ಲಿರುವ ಹಳ್ಳಿಗಳ ಮೇಲೆ ಸೈನ್ಯದಿಂದ ವಾಯುದಾಳಿಯಾಗಿರುವುದನ್ನು ಸ್ಥಳೀಯರು ತಿಳಿಸಿದ್ದರು. ಈಚೆಗೆ ನಡೆದಿದ್ದ ವಾಯುದಾಳಿಯಿಂದ ಸುಡಾನ್ ನಗರದ ಓಮ್‌ಡುರ್‌ಮನ್‌ನ ವಸತಿ ಪ್ರದೇಶದಲ್ಲಿ ಹತ್ತಾರು ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಸುಡಾನ್‌ನಲ್ಲಿ ಸಂಘರ್ಷ ಹೆಚ್ಚಾಗಿದೆ. ಇದನ್ನೂ ಓದಿ: ಶಾಪಿಂಗ್ ಮಾಲ್‍ನಲ್ಲಿ ಬಿಸಿನೀರಿನ ಪೈಪ್ ಬ್ಲಾಸ್ಟ್- ನಾಲ್ವರು ಸಾವು

ಜುಲೈ 8 ರಂದು ನಡೆದಿದ್ದ ಶೆಲ್ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದರು ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್