ವಿದ್ಯಾರ್ಥಿನಿಯನ್ನು ಜೀವಂತ ಸುಟ್ಟ 16 ಮಂದಿಗೆ ಗಲ್ಲು ಶಿಕ್ಷೆ

Public TV
3 Min Read

ಡಾಕಾ: ಏಪ್ರಿಲ್‍ನಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಪೊಲೀಸರಿಗೆ ದೂರ ಸಲ್ಲಿಸಿದ್ದ 19 ವರ್ಷದ ವಿದ್ಯಾರ್ಥಿನಿಯನ್ನು ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಸಜೀವವಾಗಿ ಸುಟ್ಟು ಕೊಲೆಗೈದಿದ್ದ ಪ್ರಕರಣ ಇಲ್ಲರನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ 16 ಮಂದಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ನುಸ್ರತ್ ಜಹಾನ್ ರಫಿ(19) ಮದರಸಾ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಆ ದೂರನ್ನು ವಾಪಸ್ ಪಡೆಯುವಂತೆ ಬೆದರಿಕೆ ಹಾಕಲಾಗಿತ್ತು. ಇದಕ್ಕೆ ನಿರಾಕರಿಸಿದ ವಿದ್ಯಾರ್ಥಿನಿಯನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಕಳೆದ ಏಪ್ರಿಲ್ ಈ ಘಟನೆ ನಡೆದಿತ್ತು.

ತನ್ನ ಮೇಲೆ ಆದ ಲೈಂಗಿಕ ಕಿರುಕುಳವನ್ನು ವಿರೋಧಿಸಿ, ನ್ಯಾಯ ಹೋರಾಟಕ್ಕೆ ನಿಂತು ಬಲಿಯಾದ ವಿದ್ಯಾರ್ಥಿನಿ ಪರ ಸಾಕಷ್ಟು ಸರ್ಕಾರೇತರ ಸಂಸ್ಥೆಗಳು, ವಿದ್ಯಾರ್ಥಿ ಸಂಘಗಳು ಹಾಗೂ ಸಾರ್ವಜನಿಕರು ಧ್ವನಿ ಎತ್ತಿದ್ದರು. ಆ ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸಂಬಂಧ ಒಟ್ಟು 18 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ವಿಚಾರಣೆ ಬಳಿಕ ಅವರಲ್ಲಿ 16 ಮಂದಿ ದೋಷಿಗಳು ಎಂದ ಘೋಷಿಸಿ, ನ್ಯಾಯಾಲಯ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಈ ಮೂಲಕ ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಿಸಿಕೊಟ್ಟಿದೆ.

ಈ ಪ್ರಕರಣ ನಡೆದ ಬಳಿಕ ಬಾಂಗ್ಲಾದೇಶ ಸರ್ಕಾರ ದೇಶದ ಸುಮಾರು 27 ಸಾವಿರ ಶಾಲೆಗಳಿಗೆ ವಿದ್ಯಾರ್ಥಿಗಳ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಸಮಿತಿಯನ್ನು ರಚಿಸುವಂತೆ ಆದೇಶಿಸಿದೆ.

ಏನಿದು ಪ್ರಕರಣ?
ಮೃತ ನುಸ್ರತ್‍ಳನ್ನು ಮಾರ್ಚ್ 27ರಂದು ಹೆಡ್‍ಮಾಸ್ಟರ್ ತನ್ನ ಕಚೇರಿಗೆ ಕರೆಸಿಕೊಂಡಿದ್ದನು. ಅಲ್ಲಿ ವಿದ್ಯಾರ್ಥಿನಿಯನ್ನು ಅಸಭ್ಯವಾಗಿ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದನು. ಇದನ್ನು ಅರಿತ ನುಸ್ರತ್ ತಕ್ಷಣ ಆತನಿಂದ ತಪ್ಪಿಸಿಕೊಂಡು ಕಚೇರಿಯಿಂದ ಓಡಿಹೋಗಿದ್ದಳು. ನಂತರ ನುಸ್ರತ್ ನಡೆದ ಘಟನೆಯ ಬಗ್ಗೆ ಪೋಷಕರಿಗೆ ವಿವರಿಸಿದ್ದಾಳೆ. ನಂತರ ಪೋಷಕರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಹೆಡ್‍ಮಾಸ್ಟರ್ ವಿರುದ್ಧ ದೂರು ನೀಡಿದ್ದಳು. ಆದರೆ ಪೊಲೀಸರು ವಿದ್ಯಾರ್ಥಿನಿಯ ದೂರನ್ನು ದಾಖಲಿಸಿಕೊಳ್ಳದೆ ಆಕೆಯ ಜೊತೆಯೇ ಅಸಭ್ಯವಾಗಿ ವರ್ತಿಸಿದ್ದರು.

ಈ ವೇಳೆ ನುಸ್ರತ್ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಳು. ಪೊಲೀಸ್ ಅಧಿಕಾರಿಯೊಬ್ಬ ಇದೇನು ದೊಡ್ಡ ವಿಷಯವಲ್ಲ ಎಂದು ನಿರ್ಲಕ್ಷ್ಮದಿಂದ ಹೇಳಿದ್ದರು. ಅಷ್ಟೇ ಅಲ್ಲದೇ ನುಸ್ರತ್ ತನ್ನ ಕೈಗಳಿಂದ ಮುಖವನ್ನು ಮುಚ್ಚಿಕೊಂಡಿದ್ದರೆ, ಮುಖದಿಂದ ಕೈಗಳನ್ನು ಸರಿಸು ಎಂದು ದೌರ್ಜನ್ಯ ನಡೆಸಿರುವುದು ವಿಡಿಯೋದಲ್ಲಿ ಕಂಡುಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಹೆಡ್‍ಮಾಸ್ಟರ್ ವಿರುದ್ಧ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದರು. ಆದರೆ ಕೆಲವು ವಿದ್ಯಾರ್ಥಿಗಳು ಮತ್ತು ರಾಜಕಾರಣಿಗಳು ಪೊಲೀಸ್ ಠಾಣೆಯ ಮುಂದೆ ಬಂದು ಹೆಡ್‍ಮಾಸ್ಟರ್ ಅನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆಯನ್ನು ನಡೆಸಿದ್ದರು.

ಇತ್ತ ನುಸ್ರತ್ ಈ ಘಟನೆ ನಡೆದು 11 ದಿನಗಳ ನಂತರ ಅಂದರೆ ಏಪ್ರಿಲ್ 6 ರಂದು ಪರೀಕ್ಷೆಗೆಂದು ಶಾಲೆಗೆ ಹೋಗಿದ್ದಳು. ಆಗ ಕ್ಲಾಸ್‍ಮೇಟ್‍ಗೆ ಶಾಲೆಯ ಛಾವಣಿಯ ಮೇಲೆ ಹೊಡೆಯುತ್ತಿದ್ದಾರೆ ಎಂದು ಯಾರೋ ಹೇಳಿದ್ದರು. ತಕ್ಷಣ ನುಸ್ರತ್ ಮೇಲೆ ಹೋಗಿದ್ದಾಗ, ಅಲ್ಲಿ ಐವರು ಬುರ್ಖಾ ಧರಿಸಿ ಆಕೆಯನ್ನು ಸುತ್ತುವರಿದು, ಹೆಡ್‍ಮಾಸ್ಟರ್ ವಿರುದ್ಧ ನೀಡಿರುವ ದೂರನ್ನು ವಾಪಾಸ್ ತೆಗೆದುಕೊಳ್ಳುವಂತೆ ಹೇಳಿದ್ದರು. ಇದಕ್ಕೆ ನುಸ್ರತ್ ನಿರಾಕರಿಸಿದಾಗ, ನುಸ್ರತ್ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.

ಇದೇ ವೇಳೆ ಆಕೆ ತನ್ನ ಸಹೋದರನ ಮೊಬೈಲ್‍ನಲ್ಲಿ ತನ್ನ ಮೇಲೆ ದಾಳಿ ನಡೆಸಿದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಳು. ಜೊತೆಗೆ ದಾಳಿಗೂ ಮುನ್ನ ಕೆಲವರನ್ನು ಗುರುತಿಸಿದ್ದಳು. ವಿಡಿಯೋದಲ್ಲಿ `ಶಿಕ್ಷಕ ನನ್ನನ್ನು ಮುಟ್ಟಿದ. ನನ್ನ ಕೊನೆಯ ಉಸಿರು ಇರುವತನಕ ಈ ದೌರ್ಜನ್ಯದ ವಿರುದ್ಧ ಹೋರಾಡುತ್ತೇನೆ’ ಎಂದು ನುಸ್ರತ್ ಹೇಳಿದ್ದಳು.

ಈ ಘಟನೆ ಸಂಬಂಧಿಸಿದಂತೆ 18 ಮಂದಿಯನ್ನು ಬಂಧಿಸಲಾಗಿತ್ತು. ಆರೋಪಿಗಳಲ್ಲಿ ಮೂವರು ನುಸ್ರತ್ ಕ್ಲಾಸ್‍ಮೇಟ್ ಸೇರಿದಂತೆ ಐವರು ಆಕೆಗೆ ಬೆಂಕಿ ಹಚ್ಚುವ ಮೊದಲು ಸ್ಕಾರ್ಫ್ ನಿಂದ ಕೈ ಮತ್ತು ಕಾಲು ಕಟ್ಟಿದ್ದರು. ಬೆಂಕಿ ಹಚ್ಚಿದ ನಂತರ ಆ ಸ್ಕಾರ್ಫ್ ಸುಟ್ಟು ಹೋಗಿದೆ. ಇದರಿಂದ ಅವಳು ಛಾವಣಿಯಿಂದ ತಪ್ಪಿಸಿಕೊಂಡು ಕೆಳಗೆ ಬಂದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ನುಸ್ರತ್ ದೇಹ 80% ಸುಟ್ಟು ಹೋಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಏಪ್ರಿಲ್ 10 ರಂದು ನುಸ್ರತ್

Share This Article
Leave a Comment

Leave a Reply

Your email address will not be published. Required fields are marked *