24 ಗಂಟೆ ಅಂತರದಲ್ಲಿ ದೆಹಲಿ ವಿಧಾನಸಭೆಗೆ ಮತ್ತೆ ಬಾಂಬ್ ಬೆದರಿಕೆ – 16 ಆರ್‌ಡಿಎಕ್ಸ್ ಐಇಡಿ ಇರಿಸಲಾಗಿದೆ ಎಂದು ಮೇಲ್

1 Min Read

ನವದೆಹಲಿ: 24 ಗಂಟೆಗಳ ಅಂತರದಲ್ಲಿ ದೆಹಲಿ ವಿಧಾನಸಭೆಗೆ (Delhi Assembly) ಎರಡನೇ ಬಾರಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, 16 ಆರ್‌ಡಿಎಕ್ಸ್ ಐಇಡಿ ಇರಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ವಿಧಾನಸಭೆ ಅಧಿವೇಶನದ ನಡುವೆ ನಿರಂತರ ಬಾಂಬ್ ಬೆದರಿಕೆ (Bomb Threat) ಬರುತ್ತಿದ್ದು, ಇಂದು (ಮಾ.25) ಮತ್ತೆ ಬೆದರಿಕೆ ಮೇಲ್ ಬಂದಿದೆ. ಸ್ಪೀಕರ್ ಕಚೇರಿಗೆ ಇಮೇಲ್ ಕಳುಹಿಸಿದ್ದು, ಮೇಲ್‌ನಲ್ಲಿ 16 ಆರ್‌ಡಿಎಕ್ಸ್ ಐಇಡಿಗಳನ್ನು ಇರಿಸಲಾಗಿದೆ. ಮಧ್ಯಾಹ್ನ 1:40ಕ್ಕೆ ಬಾಂಬ್ ಬ್ಲಾಸ್ಟ್ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ವಿಶೇಷ ಕರ್ತವ್ಯಧಿಕಾರಿ ವಿಜೇಂದರ್ ಗುಪ್ತಾ ಅವರನ್ನು ಗುರಿಯಾಗಿಸಿಕೊಂಡು ಈ ಬೆದರಿಕೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅಂಕೋಲ | ಕಾಂಗ್ರೆಸ್‌ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ – ಹತ್ಯೆಗೆ ಯತ್ನ

ಸದ್ಯ ಬೆದರಿಕೆ ಮೇಲ್ ಬಂದ ಹಿನ್ನೆಲೆ ಭದ್ರತಾ ಸಂಸ್ಥೆಗಳು ವಿಧಾನಸಭೆ ಆವರಣ ಮತ್ತು ಸುತ್ತಮುತ್ತ ತಪಾಸಣೆ ಮಾಡುತ್ತಿವೆ. ಜೊತೆಗೆ ಬಾಂಬ್ ನಿಷ್ಕ್ರಿಯ ದಳಗಳು, ಶ್ವಾನ ದಳಗಳು ಮತ್ತು ಸ್ಥಳೀಯ ಪೊಲೀಸ್ ತಂಡಗಳು ತಪಾಸಣೆ ನಡೆಸಿದ್ದು, ಈವರೆಗೂ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

Share This Article