154 ವರ್ಷ ಹಳೆಯ ಫೋಟೋ ಪತ್ತೆ – ಜ್ಞಾನವಾಪಿಯಲ್ಲಿ ಇದೆಯಾ ಹನುಮಂತನ ವಿಗ್ರಹ?

Public TV
1 Min Read

ನವದೆಹಲಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆಯಾಗಿ ಇದೀಗ ಭಾರೀ ವಿವಾದ ಎದ್ದಿದ್ದು, ಪ್ರಕರಣದ ನಡುವೆಯೇ ಹೊಸ ಬೆಳವಣಿಗೆ ನಡೆದಿದೆ. 154 ವರ್ಷ ಹಳೆಯ ಪೋಟೋವೊಂದು ಪತ್ತೆಯಾಗಿದ್ದು ಅದನ್ನು ಜ್ಞಾನವಾಪಿ ಮಸೀದಿಯ ಸಂಕೀರ್ಣದ್ದು ಎನ್ನಲಾಗುತ್ತಿದೆ. ಇದೀಗ ಅಲ್ಲಿ ಹನುಮಂತನ ವಿಗ್ರಹವೂ ಇದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ.

1868ರಲ್ಲಿ ಬ್ರಿಟಿಷ್ ಛಾಯಾಗ್ರಾಹಕ ಸ್ಯಾಮುಯೆಲ್ ಬೌರ್ನ್ ಸರೆಹಿಡಿದಿರುವ ಪೋಟೋವನ್ನು ಖಾಸಗಿ ಸುದ್ದಿವಾಹಿನಿಯೊಂದು ಪತ್ತೆಹಚ್ಚಿದ್ದು, ಇದು ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿರುವ ಗೋಡೆಯ ಭಾಗ ಎಂದು ತಿಳಿಸಿದೆ. ಈ ಚಿತ್ರವನ್ನು ಅಮೆರಿಕದ ಹೂಸ್ಟನ್‌ನಲ್ಲಿರುವ ದ ಮ್ಯೂಸಿಯಂ ಆಫ್ ಫೈನ್ ಆರ್ಟ್ಸ್‌ನಲ್ಲಿ ಸಂರಕ್ಷಿಸಲಾಗಿದೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ

ಜ್ಞಾನವಾಪಿ ಮಸೀದಿಯ ಸಂಕೀರ್ಣ ಹಿಂದೆ ಹೇಗಿತ್ತು ಎಂಬುದು ಫೋಟೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಅದರಲ್ಲಿ ನಂದಿ, ಹನುಮಂತನ ವಿಗ್ರಹ, ಕಂಬಗಳ ಮೇಲೆ ಹಿಂದೂ ಕಲಾಕೃತಿ ಹಾಗೂ ಗಂಟೆಗಳನ್ನೂ ನೋಡಬಹುದು. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ- 19 ವಿಮಾನಗಳ ಮಾರ್ಗ ಬದಲಾವಣೆ

ಜ್ಞಾನವಾಪಿ ಮಸೀದಿ ಆವರಣದಲ್ಲಿ ಹಿಂದೂ ಚಿಹ್ನೆಗಳು, ದೇವತೆಗಳ ವಿಗ್ರಹಗಳಿವೆ ಎಂಬ ಹಿಂದೂ ಸಮುದಾಯದವರ ಹೇಳಿಕೆಗೆ ಈ ಚಿತ್ರಗಳು ಮತ್ತಷ್ಟು ಬಲ ನೀಡುತ್ತಿವೆ. ಆದರೆ ಈ ಫೋಟೋ ನಿಜವಾಗಿಯೂ ಜ್ಞಾನವಾಪಿಯದ್ದೇ ಎಂಬುದು ಇನ್ನೂ ದೃಢವಾಗಿಲ್ಲ.

ಇದೀಗ ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಜ್ಞಾನವಾಪಿ ಮಸೀದಿ ವಿಚಾರಣೆ ನಡೆಯಲಿದೆ. ಇತ್ತೀಚೆಗೆ ಮಸೀದಿಯಲ್ಲಿ ಇನ್ನೊಂದು ಶಿವಲಿಂಗ ಇರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *