15ರ ಬಾಲಕನ ಅಂಗಾಂಗ ದಾನ ಮಾಡಿ 4 ಜನರ ಪ್ರಾಣ ಉಳಿಸಿದ ಕುಟುಂಬ

Public TV
1 Min Read

– ಕೊರೊನಾ ಸಂದರ್ಭದಲ್ಲಿ ಅಂಗಾಂಗ ಕಸಿ ಯಶಸ್ವಿ

ಜೈಪುರ: ಮೆದುಳಿನ ಸಮಸ್ಯೆ ಕಾಣಿಸಿಕೊಂಡಿದ್ದ 15 ವರ್ಷದ ಬಾಲಕನ ಹೃದಯ, ಕಿಡ್ನಿ, ಲಿವರ್ ಸೇರಿದಂತೆ ಇತರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ನಾಲ್ಕು ಜನರ ಪ್ರಾಣ ಉಳಿಸಿದ ಅಪರೂಪದ ಘಟನೆ ನಡೆದಿದೆ.

ಜೈಪುರದ ಸವಾಯ್ ಮ್ಯಾನ್ ಸಿಂಗ್(ಎಸ್‍ಎಂಎಸ್) ವೈದ್ಯಕೀಯ ಕಾಲೇಜಿನಲ್ಲಿ ಮೆದುಳಿಗೆ ಸಂಬಂಧಿಸಿದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಈ ಮೂಲಕ ನಾಲ್ವರ ಪ್ರಾಣವನ್ನು ಉಳಿಸಲಾಗಿದೆ. ಕೊರೊನಾ ನಡುವೆ ರಾಜಸ್ಥಾನದಲ್ಲಿ ನಡೆದ ಅಂಗಾಂಗ ಕಸಿ ಚಿಕಿತ್ಸೆಯ 38ನೇ ಯಶಸ್ವಿ ಪ್ರಕರಣ ಇದಾಗಿದೆ.

ಟೋಂಕ್ ಜಿಲ್ಲೆಯ ಬಾಲಕನಿಗೆ ಅಪಘಾತವಾಗಿದ್ದು, ನವೆಂಬರ್ 3ರಂದು ಜೈಪುರದ ಎಸ್‍ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸತತ ಪ್ರಯತ್ನಗಳ ನಡುವೆಯೂ ಬಾಲಕನನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗಲಿಲ್ಲ. ನವೆಂಬರ್ 7ರಂದು ಬಾಲಕನ ಮೆದುಳು ನಿಷ್ಕ್ರಿಯವಾಯಿತೆಂದು ಸೊಟ್ಟೊದ ವೈದ್ಯ ಡಾ.ಮನೀಶ್ ಶರ್ಮಾ ತಿಳಿಸಿದರು.

ಬಾಲಕನನ್ನು ಬದುಕಿಸಲು ಸಾಧ್ಯವಿಲ್ಲ ಎಂಬುದು ತಿಳಿಯುತ್ತಿದ್ದಂತೆ ಅಂಗಾಂಗ ದಾನ ನೀಡಲು ಪೋಷಕರ ಬಳಿ ವೈದ್ಯರು ಕೇಳಿಕೊಂಡರು. ಬಳಿಕ ಪೋಷಕರ ಮನವೊಲಿಸಲಾಗಿದ್ದು, ವೈದ್ಯರು ಬಾಲಕನ ಹೃದಯ, ಮೂತ್ರಪಿಂಡ ಹಾಗೂ ಯಕ್ರುತ್‍ನ್ನು ಸುರಕ್ಷಿತವಾಗಿ ತೆಗೆದು, ಅಗತ್ಯವಿದ್ದವರಿಗೆ ಯಶಸ್ವಿಯಾಗಿ ಕಸಿ ಮಾಡಿದರು.

ಬಾಲಕನ ಕಿಡ್ನಿ, ಲಿವರ್ ಗಳನ್ನು ಜೈಪುರದ ಎಸ್‍ಎಂಎಸ್ ಆಸ್ಪತ್ರೆಯ ಮೂವರು ರೋಗಿಗಳಿಗೆ ಕಸಿ ಮಾಡಲಾಗಿದ್ದು, ಹೃದಯ ಜೈಪುರದ ರೋಗಿಗಳಿಗೆ ಹೊಂದಾಣಿಕೆಯಾಗದ ಕಾರಣ ದೆಹಲಿಯ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *