3 ಬೈಕ್‍ನಲ್ಲಿ 14 ಮಂದಿ- ಸ್ಟಂಟ್ ಮಾಡುತ್ತಿದ್ದ ಯುವಕರಿಗೆ ಕಾದಿತ್ತು ಪೊಲೀಸರಿಂದ ಶಾಕ್

Public TV
1 Min Read

ಲಕ್ನೋ: ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ ಹಲವಾರು ಮಂದಿ ಬೈಕ್‍ಗಳಲ್ಲಿ ಸ್ಟಂಟ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

ಈ ಘಟನೆ ಬರೇಲಿಯ ಡಿಯೋರಾನಿಯಾ ಪಿಎಸ್ ಪ್ರದೇಶದಲ್ಲಿ ನಡೆದಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆ 3 ಬೈಕ್ ಅನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

14 ಜನರು 3 ಬೈಕ್‍ನಲ್ಲಿ (Bike) ಓಡಿಸುತ್ತಿರುವುದನ್ನು ನೋಡಬಹುದು. ಒಂದು ಬೈಕ್‍ನಲ್ಲಿ 6 ಮತ್ತೊಂದು ಬೈಕ್‍ನಲ್ಲಿ 4 ಮಂದಿ, ಇನ್ನೊಂದು ಬೈಕ್‌ನಲ್ಲಿ 4 ಯುವಕರು ಸ್ಟಂಟ್‌ ಮಾಡಿಕೊಂಡು ಹೋಗುತ್ತಿರುವ ವೀಡಿಯೋವೊಂದು ವೈರಲ್‌ ಆಗಿದೆ. ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರ; ವೀಡಿಯೋ ಲೀಕ್‌ ಮಾಡೋದಾಗಿ ಬೆದರಿಕೆ ಹಾಕಿದ್ದ IAS ಅಧಿಕಾರಿ, ಮಾಜಿ ಶಾಸಕ ವಿರುದ್ಧ ಕೇಸ್‌

ಈ ಬಗ್ಗೆ ಬರೇಲಿಯ ಹಿರಿಯ ಪೊಲೀಸ್ ಅಧಿಕಾರಿ ಅಖಿಲೇಶ್ ಕುಮಾರ್ ಚೌರಾಸಿಯಾ ಮಾತನಾಡಿ, ಮಾಹಿತಿ ಬಂದ ನಂತರ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ 8 ಕಿ.ಮೀ. ಶವ ಹೊತ್ತು ನಡೆದ ಗ್ರಾಮಸ್ಥರು!

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *