2 ಲಡಾಖ್ ಪರ್ವತವನ್ನು ಹತ್ತಿದ 13 ವರ್ಷದ ಪೋರ

Public TV
2 Min Read

ಹೈದರಾಬಾದ್: 2 ಲಡಾಖ್ ಪರ್ವತವನ್ನು ಹೈದರಾಬಾದ್ ಮೂಲದ 13 ವರ್ಷದ ಹುಡುಗ ಹತ್ತುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾನೆ.

ವಿಶ್ವನಾಥ್ ಕಾರ್ತಿಕಿ, ಲಡಾಖ್ ಪ್ರದೇಶದ ಮರ್ಖಾ ಕಣಿವೆಯಲ್ಲಿರುವ ಕಾಂಗ್ ಯಾಟ್ಸೆ ಮತ್ತು ಜೊ ಜೊಂಗೊ ಪರ್ವತವನ್ನು ಏರುವಲ್ಲಿ ಯಶಸ್ವಿಯಾಗಿದ್ದಾನೆ. ಈತ ಹೈದರಾಬಾದ್‍ನ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಫಿಟ್‍ನೆಸ್ ಫ್ರೀಕ್ ಮತ್ತು ಟ್ರೆಕ್ಕಿಂಗ್ ಆನಂದಿಸುವ ಸಹೋದರಿಯಿಂದ ವಿಶ್ವನಾಥ್ ಸ್ಫೂರ್ತಿ ಪಡೆದು ಟ್ರೆಕ್ಕಿಂಗ್‍ಗೆ ಹೋಗಲು ಆಸಕ್ತಿಯನ್ನು ಬೆಳೆಸಿಕೊಂಡೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: 3 ಶಾಂತಿಪಾಲಕರು, 12 ನಾಗರಿಕರು ಮೃತ 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್, ನಾನು ಟ್ರೆಕ್ಕಿಂಗ್‍ನ್ನು ಜುಲೈ 9 ರಂದು ಕಾಂಗ್ ಯಾಟ್ಸೆ ಮತ್ತು ಜೊಂಗೊ ಏರಲು ಪ್ರಾರಂಭಿಸಿದೆ. ಜುಲೈ 22 ರಂದು ಕೊನೆಗೊಳಿಸಿದೆ. ನಾವು ಕ್ರಾಂಪನ್ ಪಾಯಿಂಟ್ ತಲುಪಿದಾಗ ಬೇಸ್ ಕ್ಯಾಂಪ್‍ನಿಂದ ಶಿಖರದವರೆಗಿನ ಪ್ರಯಾಣವು ಅಷ್ಟು ಸುಲಭವಾಗಿರಲಿಲ್ಲ. ಆದರೂ ನಾನು ಬಿಡಲಿಲ್ಲ. ನನಗೆ ಕಷ್ಟವಾದಗಲೆಲ್ಲ ನಾನು ಈ ಸಾಧನೆಯನ್ನು ಸಾಧಿಸಲು ಪಟ್ಟ ಶ್ರಮವನ್ನು ನೆನಪಿಸಿಕೊಳ್ಳುತ್ತಿದೆ. ಈಗ ಅದು ನಿಜವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾನೆ.

ನಾನು ಪರ್ವತದ ಶಿಖರವನ್ನು ಏರಿದ ಮೇಲೆ ಹಿಂದಕ್ಕೆ ಎಳೆಯುತ್ತಿತ್ತು. ಗಾಳಿಯಲ್ಲಿ ತೇವಾಂಶದ ಕೊರತೆಯಿಂದಾಗಿ ನಾನು ಬಹಳಷ್ಟು ಉಸಿರಾಟದ ತೊಂದರೆಗಳನ್ನು ಎದುರಿಸಿದೆ. ನನ್ನ ಬಾಯಿ ಒಣಗಿತು ಮತ್ತು ದೀರ್ಘಾವಧಿಯವರೆಗೆ ನಡೆಯುವುದರಿಂದ ನನಗೆ ದಣಿವು ಮತ್ತು ಹಸಿವುಂಟಾಯಿತು ಎಂದು ಸಾಧನೆಯ ಹಾದಿಯನ್ನು ಹೇಳಿಕೊಂಡಿದ್ದಾನೆ.

ಈ ಟ್ರೆಕ್ಕಿಂಗ್‍ಗೂ ಮುನ್ನ ವಿಶ್ವನಾಥ್ ಜೀವನದಲ್ಲಿ ಹಲವಾರು ಬಾರಿ ಪರ್ವತಗಳನ್ನು ಏರಿ ವಿಫಲಗೊಂಡಿರುವ ಕುರಿತು ಮಾತನಾಡಿದ್ದು, ನಾನು ಗಂಗೋತ್ರಿ ಬಳಿಯ ಮೌಂಟ್ ರುಡುಗೈರಾ ಮತ್ತು ರಷ್ಯಾದ ಮೌಂಟ್ ಎಲ್ಬ್ರಸ್‍ನಲ್ಲಿ ಟ್ರೆಕಿಂಗ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ನೆನಪಿಸಿಕೊಂಡಿದ್ದಾನೆ. ಇದನ್ನೂ ಓದಿ:  ‘ಎಗ್ ಬೋಂಡಾ’ ಮಾಡುವ ಸರಳವಾದ ವಿಧಾನ – ಟ್ರೈ ಮಾಡಿ 

ಮೌಂಟ್ ಎಲ್ಬ್ರಸ್ ಹತ್ತಲು ಯಶಸ್ವಿಯಾಗಲಿಲ್ಲ. ನಿರಂತರ ಅಭ್ಯಾಸ ಮತ್ತು ಸರಿಯಾದ ಫಿಟ್ನೆಸ್ ತರಬೇತಿಯೊಂದಿಗೆ, ನಾನು ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್(ಇಬಿಸಿ) ಮತ್ತು ಮನಾಲಿಯ ಪರ್ವತದ ಶಿಖರಕ್ಕೆ ನನ್ನ ಟ್ರೆಕ್ಕಿಂಗ್ ಪೂರ್ಣಗೊಳಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾನೆ.

ನನ್ನ ಮೊದಲ ಟ್ರೆಕ್ಕಿಂಗ್ ಮೌಂಟ್ ರುಡುಗೈರಾ, ಅಲ್ಲಿ ನಾನು ಪರ್ವತದ ಬೇಸ್‍ಕ್ಯಾಂಪ್‍ಗೆ ತಲುಪಲು ಸಾಧ್ಯವಾಗಲಿಲ್ಲ. ನಂತರ, ನಾನು ತರಬೇತಿಗಾಗಿ 10 ದಿನಗಳ ಕಾಲ NIM(ನೆಹರು ಇನ್‍ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್) ಗೆ ಹೋದೆ. ನಾನು ಅಲ್ಲಿಯೂ ವಿಫಲನಾದೆ. ಮತ್ತೆ ನಾನು ತರಬೇತಿ ಪಡೆದೆ ಎಂದು ತಿಳಿಸಿದ್ದಾನೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *