ಪಾಕ್‍ನಲ್ಲಿ 13ರ ಹಿಂದೂ ಬಾಲಕಿಗೆ ಮದ್ಯ ಕುಡಿಸಿ ಗ್ಯಾಂಗ್ ರೇಪ್

Public TV
1 Min Read

ಇಸ್ಲಮಾಬಾದ್: ಅಪ್ರಾಪ್ತ ಹಿಂದೂ ಬಾಲಕಿಗೆ ಮದ್ಯ ಕುಡಿಸಿ ಇಬ್ಬರು ಕಾಮುಕರು ಸಾಮುಹಿಕ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಪಾಕಿಸ್ತಾನದ ಸಿಂಧ್ ನ ತಾಂಡೋ ಮೊಹಮ್ಮದ್ ಖಾನ್ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಾಂಡೋ ಮೊಹಮ್ಮದ್ ಖಾನ್’ನಲ್ಲಿ ಜೂನ್ 7 ರಂದು 13 ವರ್ಷದ ಹಿಂದೂ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಆದರೆ ಘಟನೆ ನಡೆದು ಒಂದು ದಿನದ ಬಳಿಕ ಈ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯನ್ನು ಅಪಹರಿಸಿ, ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಇಬ್ಬರು ಆರೋಪಿಗಳು ಈ ದುಷ್ಕೃತ್ಯ ಎಸೆಗಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಟದ ಮೈದಾನದಲ್ಲಿ ಎಸೆದು ಹೋಗಿದ್ದಾರೆ.

ಶುಕ್ರವಾರದಂದು ನಮ್ಮ ಮಗಳು ಕೆಲವು ದಿನಸಿ ಸಾಮಾಗ್ರಿಗಳನ್ನು ತರಲು ಅಂಗಡಿಗೆ ತೆರಳಿದ್ದಳು. ಈ ವೇಳೆ ಅಂಗಡಿ ಬಳಿ ಇದ್ದ ಯುವಕರು ಆಕೆಯನ್ನು ಕರೆದು ಅಪಹರಿಸಿದ್ದಾರೆ. ಬಳಿಕ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ, ಅತ್ಯಾಚಾರ ಮಾಡಿದ್ದಾರೆ. ಕತ್ತಲಾದರೂ ಮಗಳು ಮನೆಗೆ ವಾಪಾಸ್ ಬರದಿದ್ದಾಗ ನಾನು ಗಾಬರಿಯಾಗಿ ನನ್ನ ಮಗನ ಜೊತೆ ಆಕೆಯನ್ನು ಹುಡುಕಲು ಹೋದೆ. ಆಗ ಸಕ್ಕರೆ ಮಿಲ್ ಬಳಿಯ ಮೈದಾನದಲ್ಲಿ ಪ್ರಜ್ಞೆ ಇಲ್ಲದ ಸ್ಥಿಯಲ್ಲಿ ಬಿದ್ದಿದ್ದಳು. ತಕ್ಷಣ ನಾವು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದೆವು ಎಂದು ಬಾಲಕಿ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಬಾಲಕಿಗೆ ಎಚ್ಚರವಾದ ಬಳಿಕ ಆಕೆ ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ. ನಂತರ ಆಕೆಯನ್ನು ಹೈದಾರಬಾದ್‍ನ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಬಾಲಕಿಗೆ ವಿವಿಧ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿದ ಬಳಿಕ ಅತ್ಯಾಚಾರ ನಡೆದಿರುವ ಬಗ್ಗೆ ಸ್ಪಷ್ಟವಾಗಿದೆ. ತದನಂತರ ಬಾಲಕಿ ತುಸು ಚೇತರಿಸಿಕೊಂಡ ಮೇಲೆ ಆರೋಪಿಗಳನ್ನು ಗುರುತಿಸಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಸದ್ಯ ಇಬ್ಬರೂ ಆರೋಪಿಗಳನ್ನು ಸ್ಥಳೀಯ ನ್ಯಾಯಲಯವೂ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *