ಗೌರಿ ಹಬ್ಬಕ್ಕೆ ಪೂಜೆಗೆ ತೆರಳಿದ್ದ ಬಾಲಕಿ ಹಾವು ಕಡಿದು ಸಾವು

By
1 Min Read

ತುಮಕೂರು: ಗೌರಿ ಹಬ್ಬದ ಹಿನ್ನೆಲೆಯಲ್ಲಿ ಪೋಷಕರೊಂದಿಗೆ ಪೂಜೆಗೆ ತೆರಳಿದ್ದ ಬಾಲಕಿ (Girl) ಹಾವು ಕಡಿತದಿಂದ (Snake Bite) ಮೃತಪಟ್ಟ ಧಾರುಣ ಘಟನೆ ಕುಣಿಗಲ್ (Kunigal) ಪಟ್ಟಣದ 22ನೇ ವಾರ್ಡ್‌ನಲ್ಲಿ ಶುಕ್ರವಾರ ನಡೆದಿದೆ.

ಸ್ಪಂದನ (13) ಮೃತಪಟ್ಟ ಬಾಲಕಿ. ಈಕೆ 22ನೇ ವಾರ್ಡ್‌ನ ಮಲ್ಲಿಪಾಳ್ಯದಲ್ಲಿ ವಾಸವಾಗಿರುವ ಪುರಸಭೆ ವಾಟರ್ ಮ್ಯಾನ್ ಕುಮಾರ್ ಎಂಬುವರ ಮಗಳು.

ಶುಕ್ರವಾರ ಮನೆಯವರೊಂದಿಗೆ ಗೌರಿ ಹಬ್ಬದ ನಿಮಿತ್ತ ಪಟ್ಟಣದ ವೈಕೆ ಆರ್ ಪಾರ್ಕ್ ಬಳಿ ಇರುವ ಮುಳ್ಳುಕಟ್ಟಮ್ಮ ದೇವಾಲಯಕ್ಕೆ ಪೂಜೆಗೆ ತೆರಳಿದ್ದಳು. ಬಾಲಕಿ ದೇವಾಲಯ ಸಮೀಪದಲ್ಲಿದ್ದ ಬೆಂಚ್ ಮೇಲೆ ಕುಳಿತ್ತಿದ್ದಾಗ ಹಾವು ಕಡಿತಕ್ಕೆ ಒಳಗಾಗಿದ್ದಾಳೆ. ಇದನ್ನೂ ಓದಿ: 2026-27 ರೊಳಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವ ವಿಶ್ವಾಸ: ಸಿದ್ದರಾಮಯ್ಯ

 

ಪೂಜೆ ಮುಗಿಸಿಕೊಂಡು ಕುಟುಂಬದವರೊಂದಿಗೆ ಮನೆಗೆ ಬಂದ ಬಾಲಕಿ, ಕೆಲಕಾಲ ಆಟ ಆಡಿದ್ದಾಳೆ. ನಂತರ ತೀವ್ರ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾಳೆ. ಮನೆಯವರು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಮತ್ತಷ್ಟು ಚಿಕಿತ್ಸೆಗೆ ಚಿಕಿತ್ಸೆಗೆ ಬೆಳ್ಳೂರ್ ಕ್ರಾಸ್ ಬಳಿ ಇರುವ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ.

Share This Article