ಮೆಕ್ಸಿಕೋ ಸಿಟಿ: ದಕ್ಷಿಣ ಮೆಕ್ಸಿಕೋದ (South Mexico) ಓಕ್ಸಾಕದಲ್ಲಿ (Oaxaca) ಇಂಟರ್ ಓಷಿಯಾನಿಕ್ ರೈಲು ಹಳಿ ತಪ್ಪಿದೆ. ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ.
ಈ ಕುರಿತು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಒಂಬತ್ತು ಸಿಬ್ಬಂದಿ ಹಾಗೂ 241 ಪ್ರಯಾಣಿಕರು ಸೇರಿದಂತೆ ಒಟ್ಟು 250 ಜನರಿದ್ದ ರೈಲು ಸಲೀನಾ ಕ್ರೂಜ್ ಬಂದರುನಿಂದ ಕೋಟ್ಜಾಕೋಲ್ಕೋಸ್‌ಕ್ಕೆ ತೆರಳುತ್ತಿತ್ತು. ಈ ವೇಳೆ ನಿಜಾಂಡಾ ಪಟ್ಟಣದ ಬಳಿ ತೆರಳುತ್ತಿದ್ದಾಗ ರೈಲು ಹಳಿ ತಪ್ಪಿದೆ. ಪರಿಣಾಮ 13 ಜನರು ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ. ಈಗಾಗಲೇ 36 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 193 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 7 ಗನ್, 5 ಜನ, 4 ನಿಮಿಷ, ಕೆಜಿ ಕೆಜಿ ಚಿನ್ನ ದರೋಡೆ
ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಎಕ್ಸ್‌ನಲ್ಲಿ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ಅಗತ್ಯ ಸಹಾಯ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಮೆಕ್ಸಿಕೋದ ಅಟಾರ್ನಿ ಜನರಲ್ ಕಚೇರಿ ಈಗಾಗಲೇ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ ಎಂದು ಹೇಳಿದ್ದಾರೆ.
Me informa la Secretaría de Marina que en el accidente del Tren Interoceánico lamentablemente fallecieron 13 personas; 98 están lesionadas, cinco de ellas de gravedad. Los heridos se encuentran en hospitales del IMSS en Matías Romero y Salina Cruz, así como de IMSS-Bienestar en…
— Claudia Sheinbaum Pardo (@Claudiashein) December 29, 2025
ಅಪಘಾತಕ್ಕೀಡಾದ ಇಂಟರ್ ಓಷಿಯಾನಿಕ್ ರೈಲು 2023ರಲ್ಲಿ ಉದ್ಘಾಟನೆಯಾಗಿತ್ತು. ಇದು ವಿಶಾಲವಾದ ಇಂಟರ್ ಓಷಿಯಾನಿಕ್ ಕಾರಿಡಾರ್ ಯೋಜನೆಯ ಭಾಗವಾಗಿದೆ. ಈ ರೈಲು ಮೆಕ್ಸಿಕೋದ ಪೆಸಿಫಿಕ್ ಬಂದರು ಸಲೀನಾ ಕ್ರೂಜ್ ಅನ್ನು ಗಲ್ಫ್ ಕರಾವಳಿಯ ಕೋಟ್ಜಾಕೋಲ್ಕೋಸ್‌ಗೆ ಸಂಪರ್ಕಿಸುತ್ತದೆ.ಇದನ್ನೂ ಓದಿ: ಬೆಂಗಳೂರಿಂದ ಜೋಧಪುರ್‌ಗೆ ತೆರಳುತ್ತಿದ್ದ ಬಸ್ಸಿನ ಎಂಜಿನ್‌ನಲ್ಲಿ ಹೊಗೆ

