ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 13 ಕೋಟಿ ಮೌಲ್ಯದ ವಜ್ರ, ಫಾರಿನ್ ಕರೆನ್ಸಿ ಸೀಜ್

By
1 Min Read

ಬೆಂಗಳೂರು: ಡಿಆರ್‌ಐ (ಡೈರೆಕ್ಟೊರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್) ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿ ಎರಡು ಏರ್‌ಪೋರ್ಟ್‌ಗಳಲ್ಲಿ (Bengaluru Airport) 13 ಕೋಟಿ ಮೌಲ್ಯದ ವಜ್ರ (Diamond) ಹಾಗೂ ವಿದೇಶಿ ಕರೆನ್ಸಿಯನ್ನ ವಶಕ್ಕೆ ಪಡೆದಿದ್ದಾರೆ.

ದುಬೈಗೆ ಹೊರಟಿದ್ದ ನಾಲ್ವರು ಪ್ರಯಾಣಿಕರ ತಪಾಸಣೆ ವೇಳೆ ಕೋಟ್ಯಂತರ ಮೌಲ್ಯದ ವಜ್ರ ಹಾಗೂ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಬೆಂಗಳೂರು ಹಾಗೂ ಹೈದರಾಬಾದ್ ಏರ್‌ಪೋರ್ಟ್‌ನಿಂದ ನಾಲ್ವರು ಪ್ರಯಾಣಿಕರು ದುಬೈಗೆ ಹೊರಟಿದ್ದರು. ಇದನ್ನೂ ಓದಿ: 4 ಮಕ್ಕಳ ತಂದೆ, 5 ಮಕ್ಕಳಿದ್ದ ಅತ್ತಿಗೆಯೊಂದಿಗೆ ಜೂಟ್‌ – ಆರೋಪಿ ಪತ್ನಿ 5ನೇ ಬಾರಿಗೆ ಗರ್ಭಿಣಿ

ಪ್ರಯಾಣಿಕರ ಬಳಿ ಸ್ವಾಭಾವಿಕವಾಗಿ ಹಾಗೂ ಲ್ಯಾಬ್‌ನಲ್ಲಿ ತಯಾರಿಸಿದ ವಜ್ರಗಳು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 7.77 ಕೋಟಿ ಮೌಲ್ಯದ 8,053 ಕ್ಯಾರೆಟ್ ತೂಕದ ವಜ್ರಗಳು ಹಾಗೂ 4.62 ಲಕ್ಷ ವಿದೇಶಿ ಕರೆನ್ಸಿ ಪತ್ತೆ‌ಯಾಗಿದೆ.

ಹೈದರಾಬಾದ್‌ನಲ್ಲಿ 6.03 ಕೋಟಿ ಮೌಲ್ಯದ 5569 ಕ್ಯಾರೆಟ್ ತೂಕದ ವಜ್ರಗಳು ಹಾಗೂ 9.83 ಲಕ್ಷ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಚಾಕ್ಲೇಟ್‌ ಪಾಕೇಟ್‌ಗಳಲ್ಲಿ ಸೀಲ್ ಮಾಡಿ ವಜ್ರಗಳ ಸಾಗಾಟ ಮಾಡುತ್ತಿದ್ದರು. ಪ್ರಯಾಣಿಕರನ್ನ ವಶಕ್ಕೆ ಪಡೆದು ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್‌

Share This Article