125 ಯೂನಿಟ್ ಫ್ರೀ ವಿದ್ಯುತ್, ಆ.1ರಿಂದಲೇ ಜಾರಿ: ನಿತೀಶ್ ಕುಮಾರ್ ಘೋಷಣೆ

Public TV
1 Min Read

ಪಾಟ್ನಾ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ನಿತೀಶ್ ಕುಮಾರ್ (CM Nitish Kumar) ರಾಜ್ಯದ ಜನರಿಗೆ ಉಚಿತ ವಿದ್ಯುತ್ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ರಾಜ್ಯದಲ್ಲಿ ನಾವು ಆರಂಭದಿಂದಲೂ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸುತ್ತಿದ್ದೇವೆ. ಆದರೆ ಇದೀಗ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ರಾಜ್ಯದ ಜನರಿಗೆ 125 ಯೂನಿಟ್‌ವರೆಗೂ ಗೃಹಬಳಕೆ ಉಚಿತ ವಿದ್ಯುತ್ ನೀಡಲಾಗುವುದು. ಗ್ರಾಹಕರು 125 ಯೂನಿಟ್‌ವರೆಗೂ ಯಾವುದೇ ಹಣ ಪಾವತಿಸಬೇಕಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬೀದರ್ | ಶಾದಿಮಹಲ್ ನಿರ್ಮಾಣ ಹೆಸರಲ್ಲಿ ಹಗರಣ ಆರೋಪ – ಕೋಟ್ಯಂತರ ಹಣ ನುಂಗಿದ್ರಾ ಅಧಿಕಾರಿಗಳು?

ಉಚಿತ ವಿದ್ಯುತ್ ಯೋಜನೆಯ ಮೂಲಕ ರಾಜ್ಯದ 1.67 ಕೋಟಿ ಕುಟುಂಬಗಳು ಪ್ರಯೋಜನ ಪಡೆಯಲಿದ್ದು, ಮುಂದಿನ ಮೂರು ವರ್ಷಗಳವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ.

ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಈವರೆಗೂ ಚುನಾವಣಾ ಆಯೋಗ ಯಾವುದೇ ದಿನಾಂಕವನ್ನು ಪ್ರಕಟಿಸಿಲ್ಲ.ಇದನ್ನೂ ಓದಿ: ಡಿಗ್ರಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಇನ್ಮುಂದೆ ಸಿಸಿಟಿವಿ ಕಣ್ಗಾವಲು

Share This Article