ಮಗಳ ಸಾವಿನ ನೋವಿನಲ್ಲೂ ಅಂಗಾಂಗ ದಾನ- ಸಾರ್ಥಕತೆ ಮೆರೆದ ಪೋಷಕರು

Public TV
1 Min Read

ತುಮಕೂರು: ಅಂಗಾಂಗ ದಾನ (Organ Donation) ಮಾಡುವ ಮೂಲಕ ಮಗಳ ಸಾವಿನ ನೋವಿನಲ್ಲೂ ಪೋಷಕರು (Parents) ಸಾರ್ಥಕತೆ ಮರೆದು ಮತ್ತೊಂದು ಜೀವಕ್ಕೆ ಬೆಳಕಾಗಿದ್ದಾರೆ. ಇದನ್ನೂ ಓದಿ:ದರ್ವೇಶ್ ಗ್ರೂಪ್‌ನಿಂದ ವಂಚನೆ – ಸಿಐಡಿ ದಾಳಿ ವೇಳೆ ಕೋಟ್ಯಂತರ ರೂ. ಪತ್ತೆ

ತಿಪಟೂರು ನಗರದ ಹಳೇಪಾಳ್ಯದ ನಿವಾಸಿ 12 ವರ್ಷದ ಚಂದನ ಜು.23ರಂದು ಶಾಲೆ ಮುಗಿಸಿ ಬರುವಾಗ ಲಾರಿ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಚಂದನ (Chandana) ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು. ಕೂಡಲೇ ಹಾಸನದ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಂದನ ಸಾವನಪ್ಪಿದ್ದಳು.

ಇದೀಗ ಸಾವನ್ನಪ್ಪಿದ ಮಗಳ ಅಂಗಾಂಗ ದಾನ ಮಾಡಿ ಚಂದನ ಪೋಷಕರು ಮಾದರಿಯಾಗಿದ್ದಾರೆ. ಪೋಷಕರ ದಿಟ್ಟ ನಿರ್ಧಾರಕ್ಕೆ ಆಸ್ಪತ್ರೆಯ ಸಿಬ್ಬಂದಿ ಗೌರವ ಸಲ್ಲಿಸಿದ್ದಾರೆ. ಚಂದನಾಳ ಅಂಗಾಂಗವನ್ನು ಮೈಸೂರು ಮತ್ತು ಬೆಂಗಳೂರಿನ 6 ಮಕ್ಕಳಿಗೆ ಜೋಡಣೆ ಮಾಡಿಸಲಾಗಿದೆ. ಇಂದು ಸಂಜೆ ತಿಪಟೂರಿನ ಹಳೆಪಾಳ್ಯದಲ್ಲಿ ಚಂದನ ಅಂತ್ಯಸಂಸ್ಕಾರ ನೆರವೇರಲಿದೆ.

Share This Article