ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಆನೆ ಮಾನವನ ಸಂಘರ್ಷಕ್ಕೆ ಮೀತಿಯೇ ಇಲ್ಲದಂತೆ ಆಗಿದೆ. ಆನೆಗಳ ಚಲನವಲನದ ಬಗ್ಗೆ ಎಚ್ಚರಿಕೆ ನೀಡಲು ಎಐ ಆಧಾರಿತ ಸೈರನ್ (AI Siren) ವ್ಯವಸ್ಥೆ ರೂಪಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ದಿನ ಬೆಳಗಾದ್ರೆ ಸಾಕು ವನ್ಯಜೀವಿ (WildLife) ಕಾಡಾನೆಗಳ ಉಪಟಳ ಹೆಚ್ಚಾಗಿರುತ್ತದೆ. ಹೀಗಾಗಿ ವನ್ಯಜೀವಿಗಳ ಸಂಚಾರಕ್ಕೆ ಸಂಬಂಧಿಸಿದ ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ಕೊಡಗಿನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಹೊಸ ಯೋಜನೆ ಕೈಗೊಳ್ಳಲಾಗುತ್ತಿದೆ. ಈ ಕ್ರಮಕ್ಕೆ ಖಾಸಗಿ ಕಂಪನಿಯೊಂದು ಹಣಕಾಸು ಒದಗಿಸಿದ್ದು, ಸರ್ಕಾರೇತರ ಸಂಸ್ಥೆಯಿಂದ ಸೈರನ್ ವ್ಯವಸ್ಥೆ ಅಳವಡಿಸಲಾಗಿದೆ. ಕೊಡಗಿನ ವಿರಾಜಪೇಟೆಯಾದ್ಯಂತ (Virajapete) ವನ್ಯಜೀವಿಗಳ ಚಲನೆಯ ಬಗ್ಗೆ ನಿವಾಸಿಗಳಿಗೆ ಎಚ್ಚರಿಕೆ ನೀಡಲು ಸೈರನ್ ವ್ಯವಸ್ಥೆಯನ್ನ ಸ್ನೇಹ ಸಂಸ್ಥೆ ಪ್ರಾಯೋಗಿಕವಾಗಿ ಆರಂಭಿಸಿದೆ.
ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ, ಬಡಗ, ಬನಂಗಾಲ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಂಘರ್ಷ ವಲಯಗಳಲ್ಲಿ 12 ಅಂತಹ ಸೈರನ್‌ಗಳನ್ನ ಸ್ಥಾಪಿಸುವ ಎನ್‌ಜಿಓ ಕೆಲಸ ಮಾಡಿದೆ. ಈ ಯೋಜನೆ ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದರೂ, ಸ್ವಯಂಚಾಲಿತ ಎಚ್ಚರಿಕೆ ವ್ಯವಸ್ಥೆಗಳನ್ನ ಪರಿಚಯಿಸುವ ಮೂಲಕ ಸ್ನೇಹ ಸಂಸ್ಥೆ ಕೆಲಸ ಮಾಡ್ತಿದೆ.
ಈಗಾಗಲೇ ಈ ಗ್ರಾಮದಲ್ಲಿ ಆನೆ ಕಂದಕ ಸೋಲಾರ್ ವಿದ್ಯುತ್ ತಂತಿಬೇಲಿ ಅಳವಡಿಕೆ ಮಾಡಿದ್ರು ಕಾಡಾನೆಗಳ ಉಪಟಳ ಕಡಿಮೆ ಆಗಿರಲಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ಮನೆಯಿಂದ ಹೋರ ಬರಲು ಹಿಂದೆಟ್ಟು ಹಾಕುತ್ತಿದ್ರು. ಆದರೀಗ ಎಐ ಆಧಾರಿತ ಸೈರನ್ ಅಳವಡಿಕೆ ಮಾಡಿರುವುದರಿಂದ ಕಾಡಂಚಿನ ಜನರು ಓಡಾಟ ನಡೆಸುತ್ತಿದ್ದಾರೆ.
ಎಐ ಸೈರನ್ ಹೇಗೆ ಕೆಲಸ ಮಾಡುತ್ತೆ?
ಇನ್ನೂ ಎಐ ಆಧಾರಿತ ವ್ಯವಸ್ಥೆಯ ಮೂಲಕ, ಆನೆಯ ಚಲನೆಯನ್ನು ಪತ್ತೆಹಚ್ಚಲಾಗುತ್ತದೆ. ಅಲ್ಲದೇ, ಆನೆಯಿದ್ದ ಸ್ಥಳವನ್ನಾಧರಿಸಿ, ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ನಿವಾಸಿಗಳನ್ನ ಎಚ್ಚರಿಸಲು ಸೈರನ್ ಮೊಳಗುತ್ತದೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು, ಶಾಲಾ ಕಾಲೇಜು ಮಕ್ಕಳು ಯಾವುದೇ ಭಯ ಇಲ್ಲದೇ ಹೆಜ್ಜೆ ಹಾಕುತ್ತಿದ್ದಾರೆ. ನಿತ್ಯ ಕಾಫಿ ತೋಟಗಳಲ್ಲಿ ಕಾಡಾನೆ ಹಿಂಡುಗಳು ಕಂಡು ಬರುತ್ತಿದ್ದ ಹಿನ್ನೆಲೆಯಲ್ಲಿ ಶಾಲೆಗಳಿಗೆ ತಮ್ಮ ಮಕ್ಕಳನ್ನ ಕಳಿಸಲು ಪೋಷಕರು ಹಿಂದೆಟ್ಟು ಹಾಕುತ್ತಿದ್ರು. ಇದೀಗ ಆನೆಗಳ ಚಲನವಲನದ ಬಗ್ಗೆ ಎಚ್ಚರಿಕೆ ನೀಡಲು ಎಐ ಆಧಾರಿತ ಸೈರನ್ ವ್ಯವಸ್ಥೆ ರೂಪಿಸಿರುವ ಹಿನ್ನಲೆಯಲ್ಲಿ ಕಳೆದ ಕೆಲ ದಿನಗಳಿಂದ ಸರ್ಕಾರಿ ಶಾಲೆಗಳತ್ತ ಮಕ್ಕಳು ಹೆಜ್ಜೆ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಆಧಾರಿತ ವ್ಯವಸ್ಥೆಯ ಮೂಲಕ, ಆನೆಯ ಚಲನೆಯನ್ನು ಪತ್ತೆಹಚ್ಚಲಾಗುತ್ತಿದೆ. ಆನೆಯಿದ್ದ ಸ್ಥಳವನ್ನ ಆಧರಿಸಿ, ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ನಿವಾಸಿಗಳನ್ನು ಎಚ್ಚರಿಸಲು ಸೈರನ್ ಮೊಳಗಲಿದೆ.