ಭಾರೀ ಮಳೆಗೆ ತತ್ತರಿಸಿದ ನೇಪಾಳ – ಪ್ರವಾಹ, ಭೂಕುಸಿತದಿಂದ 112 ಮಂದಿ ಸಾವು

Public TV
1 Min Read

– 200ಕ್ಕೂ ಹೆಚ್ಚು ಕಡೆಗಳಲ್ಲಿ ಭೂಕುಸಿತ
– 54 ವರ್ಷಗಳ ಬಳಿಕ ದಾಖಲೆಯ ಮಳೆ

ಕಠ್ಮಂಡು: 54 ವರ್ಷಗಳ ಬಳಿಕ ನೇಪಾಳದಲ್ಲಿ ಈ(Nepal) ಭಾರೀ ಮಳೆಯಾಗಿದ್ದು, ಮಳೆಯ (Rain) ಅವಾಂತರಕ್ಕೆ 112 ಮಂದಿ ಸಾವಿಗೀಡಾಗಿದ್ದಾರೆ.

ಮಳೆಯ ಆರ್ಭಟಕ್ಕೆ ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮ ನಗರಗಳಿಗೆ ನೀರು ನುಗ್ಗಿದೆ, 200 ಕ್ಕೂ ಅಧಿಕ ಕಡೆ ಭೂ ಕುಸಿತ (Landslide) ಸಂಭವಿಸಿದೆ. ನೇಪಾಳದಲ್ಲಿ 24 ಗಂಟೆಗಳ ಒಳಗೆ 323 ಮಿಲಿಮೀಟರ್ ಮಳೆ ದಾಖಲಾಗಿದೆ. ರಾಜಧಾನಿ ಕಠ್ಮಂಡುವಿನ ಸುತ್ತಮುತ್ತಲಿನ ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿವೆ. ಏಕಾಏಕಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆ, ಜನರು ಜೀವ ಉಳಿಸಿಕೊಳ್ಳಲು ಕಟ್ಟಡಗಳ ಮೇಲೆ ನಿಂತಿದ್ದಾರೆ. ಇನ್ನೂ ಕೆಲ ಜನರು ನೀರಿನಲ್ಲಿ ನಡೆಯುತ್ತಾ ಸುರಕ್ಷಿತ ಸ್ಥಳಗಳನ್ನು ಹುಡುಕುತ್ತಿದ್ದಾರೆ. ಭಾರಿ ನೀರಿನ ಹರಿವಿನ ನಡುವೆ ಮನೆಯೊಂದು ಕುಸಿದು ಬೀಳುವ ವಿಡಿಯೋ ಸಹ ವೈರಲ್‌ ಆಗಿದೆ. ಇದನ್ನೂ ಓದಿ: ಇಸ್ರೇಲಿ ದಾಳಿ; ಒಂದೇ ದಿನ 33 ಮಂದಿ ಸಾವು, 195 ಮಂದಿಗೆ ಗಾಯ

ವಿಪತ್ತಿನಲ್ಲಿ ಕಾಣೆಯಾದ 68 ಜನರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎರಡು ದಿನಗಳಲ್ಲಿ ಪ್ರವಾಹ ಮತ್ತು ಭೂಕುಸಿತದ 200 ಘಟನೆಗಳು ವರದಿಯಾಗಿವೆ ಈ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಇಲ್ಲಿಯವರೆಗೂ 4,12,000 ಕುಟುಂಬಗಳು ಪರಿಣಾಮ ಬೀರುವ ನಿರೀಕ್ಷೆ ಇತ್ತು. ಹೆಲಿಕಾಪ್ಟರ್‌ಗಳು ಮತ್ತು ಮೋಟಾರ್‌ಬೋಟ್‌ಗಳೊಂದಿಗೆ ರಕ್ಷಣಾ ಕಾರ್ಯಚರಣೆಗಾಗಿ 3,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಸ್ ನಿರಾಕರಿಸಿದ್ದಕ್ಕೆ ಕೊಡಲಿಯಿಂದ ಕೊಚ್ಚಿ ಪತ್ನಿಯನ್ನು ಭೀಕರವಾಗಿ ಕೊಲೆಗೈದ ಪತಿ

Share This Article