ಇನ್ಮುಂದೆ ಚಿನ್ನಸ್ವಾಮಿಯಲ್ಲಿ ನಡೆಯುವ ಎಲ್ಲಾ ಪಂದ್ಯಗಳಲ್ಲಿಯೂ ಮೃತರ ನೆನಪಿಗೆ 11 ಸೀಟ್ ಮೀಸಲು

1 Min Read

ಬೆಂಗಳೂರು: ಚಿನ್ನಸ್ವಾಮಿಯಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ (Chinnaswamy Stampede) ಸಂಬಂಧಿಸಿದಂತೆ ಮೃತ 11 ಜನರ ನೆನಪಿಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಸೀಟುಗಳನ್ನು ಮೀಸಲಿಡಲಾಗುವುದು ಎಂದು ಕೆಎಸ್‌ಸಿಎ (KSCA) ತಿಳಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stadium) ಹೊರಗೆ ಅಭಿಮಾನಿಗಳ ನಡುವೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಈ ಅವಘಡದಲ್ಲಿ 11 ಜನರು ಸಾವನ್ನಪ್ಪಿದ್ದರು. ಹೀಗಾಗಿ ಈ 11 ಜನರ ನೆನಪಿಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಸೀಟು ಮೀಸಲಿಡಲು ಕೆಎಸ್‌ಸಿಎ ನಿರ್ಧರಿಸಿದೆ. ಇದನ್ನೂ ಓದಿ: ತುಮಕೂರು, ಮೈಸೂರು ಸೇರಿ 15 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ – ಎಲ್ಲಿ, ಯಾವಾಗ?

ಚಿನ್ನಸ್ವಾಮಿಯಲ್ಲಿ ನಡೆಯುವ ಪ್ರತಿಯೊಂದು ಪಂದ್ಯಕ್ಕೂ 11 ಸೀಟುಗಳನ್ನು ಮೀಸಲಿಡಲಾಗುವುದು ಹಾಗೂ ಈ 11 ಸೀಟುಗಳನ್ನು ಮಾರಾಟ ಮಾಡುವುದಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ಸಂದರ್ಭದಲ್ಲಿಯೂ ಸಹ 11 ಸೀಟುಗಳನ್ನು ಮೃತರ ಹೆಸರಿನಲ್ಲಿ ಮೀಸಲಿಡಲಾಗುವುದು. ಜೊತೆಗೆ ಮುಖ್ಯ ದ್ವಾರದ ಭಾಗದಲ್ಲಿ ಬೋರ್ಡ್ ಅಳವಡಿಕೆ ಮಾಡಿ, ಅದರಲ್ಲಿ ಮೃತರ ಹೆಸರನ್ನ ನಮದು ಮಾಡಲಿದೆ.

ಇನ್ನೂ ಆಟಗಾರರು ಪ್ರ್ಯಾಕ್ಟೀಸ್‌ ಮಾಡುವಾಗ 11 ನಂಬರ್‌ನ ಜೆರ್ಸಿಯನ್ನು ಧರಿಸುತ್ತಾರೆ. 11 ಜನರಿಗೆ ಗೌರವಾರ್ಥವಾಗಿ 11 ಖಾಲಿ ಚೇರ್‌ಗಳನ್ನು ಬಿಡಲಾಗುತ್ತೆ. ಹೀಗಾಗಿ ಆ 11 ಟಿಕೆಟ್‌ಗಳನ್ನು ಮಾರಾಟ ಮಾಡುವುದಿಲ್ಲ ಎಂದಿದೆ.

19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಕೆಎಸ್‌ಸಿಎ & ಆರ್‌ಸಿಬಿ ಮ್ಯಾನೇಜ್ಮೆಂಟ್ ಮೃತರಿಗೆ 1 ನಿಮಿಷ ಮೌನಚಾರಣೆ ಮಾಡಲಿದೆ.ಇದನ್ನೂ ಓದಿ: ಐಪಿಎಲ್ ಟಿಕೆಟ್ ಮಾರಾಟಕ್ಕೆ ಆರ್‌ಸಿಬಿ ಸಜ್ಜು – ಇನ್ನೆರೆಡು ದಿನದಲ್ಲಿ ಮಾರಾಟ ಪ್ರಕ್ರಿಯೆ ಶುರು

Share This Article