ವಿಧಾನಸಭೆಯಿಂದ ಟಿಡಿಪಿ ಪಕ್ಷದ 11 ಶಾಸಕರು ಅಮಾನತು

Public TV
1 Min Read

ಹೈದರಾಬಾದ್: ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಡಿ ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ ಪ್ರಮುಖ 11 ಸದಸ್ಯರನ್ನು ಇಂದು ಆಂಧ್ರಪ್ರದೇಶ ವಿಧಾನಸಭೆಯಿಂದ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಟಿಡಿಪಿ ಶಾಸಕರ ಮೇಲೆ ವಾಗ್ದಾಳಿ ನಡೆಸಿ, ನಾಗರಿಕರ ರೀತಿಯಲ್ಲಿ ವರ್ತಿಸುವಂತೆ ಮತ್ತು ಸದನದಲ್ಲಿ ತಮಗೆ ಮಾತನಾಡಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡರು. ಆದರೆ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ 11 ಜನರ ವಿಚಾರವಾಗಿ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರು ಘೋಷಣೆಯನ್ನು ಕೂಗಿದಾಗ, ಶಾಸಕಾಂಗ ವ್ಯವಹಾರಗಳ ಸಚಿವ ಬುಗ್ಗನ ರಾಜೇಂದ್ರನಾಥ್ ಟಿಡಿಪಿ ಶಾಸಕರ ಅಮಾನತು ಪ್ರಸ್ತಾಪವನ್ನು ಮಂಡಿಸಿದರು. ಅಮಾನತುಗೊಂಡ ಸದಸ್ಯರು ಸದನದಿಂದ ನಿರ್ಗಮಿಸಿದ ನಂತರ ಧ್ವನಿ ಮತದ ಮೂಲಕ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು.

ಸೋಮವಾರ ಕೂಡ ಇದೇ ವಿಚಾರವಾಗಿ ಬಜೆಟ್ ಅಧಿವೇಶನದ ವೇಳೆ ಗಲಾಟೆ ಮಾಡಿದ ಐದು ಟಿಡಿಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿತು. ಅಲ್ಲದೇ ಈ ಕುರಿತಂತೆ ಮಂಗಳವಾರ ಮತ್ತೊಮ್ಮೆ ಸದನದಲ್ಲಿ ಮಾತನಾಡಿದ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು, ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿ ಗುಡೆಮ್‍ನಲ್ಲಿ ಸಂಭವಿಸಿದ ಸಾವುಗಳು ಆಕಸ್ಮಿಕ ಕಾರಣಗಳಿಂದ ಸಂಭವಿಸಿವೆಯೇ ಹೊರತು ಟಿಡಿಪಿ ಆರೋಪಿಸಿದಂತೆ ಅಕ್ರಮ ಕಳ್ಳಬಟ್ಟಿಯಿಂದಲ್ಲ ಎಂದು ಸ್ಪಷ್ಟನೆ ನೀಡಿದರು. ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು: ಬಿ.ಸಿ. ನಾಗೇಶ್

ಈಗಾಗಲೇ ಹಲವು ಶವಗಳನ್ನು ಸುಟ್ಟು ಹಾಕಲಾಗಿದ್ದು, ಇಲ್ಲಿಯವರೆಗೂ ಈ ವಿಚಾರವಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಒಂದು ಪ್ರಕರಣದಲ್ಲಿ ಕೆಲವು ಅನುಮಾನ ವ್ಯಕ್ತವಾಗಿದ್ದರಿಂದ ಅಧಿಕಾರಿಗಳು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು. ಏನಾದರೂ ತಪ್ಪಾಗಿದ್ದರೆ ನಾವೇಕೆ ಹಾಗೆ ಮಾಡುತ್ತೇವೆ ಎಂದು ಪ್ರಶ್ನಿಸಿದರು.

ಪೊಲೀಸ್ ಠಾಣೆ, ವಾರ್ಡ್ ಸೆಕ್ರೆಟರಿಯೇಟ್ ಮತ್ತು ಮಹಿಳಾ ಪೊಲೀಸರಿರುವ ಅಂತಹ ಸ್ಥಳದಲ್ಲಿ ಅಕ್ರಮವಾಗಿ ಅರಕ್ ಭಟ್ಟಿ ಇಳಿಸಲು ಸಾಧ್ಯವೇ? ನಿಮ್ಮ ಮೆದುಳನ್ನು ಬಳಸಿ ಮತ್ತು ತಾರ್ಕಿಕವಾಗಿ ಯೋಚಿಸಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಫಿಟ್, ಆರೋಗ್ಯವಾಗಿರಲು ಕುದುರೆ ಸವಾರಿ ಮಾಡುತ್ತಾ ಆಫೀಸ್‍ಗೆ ತೆರಳ್ತಿದ್ದಾರೆ ಈ ವ್ಯಕ್ತಿ!

Share This Article
Leave a Comment

Leave a Reply

Your email address will not be published. Required fields are marked *