11 ಮದ್ವೆಯಾದ 23ರ ಯುವಕ – ಪತ್ನಿ ಎದುರೇ ಕೆಲಸದವಳ ಜೊತೆ ಸರಸ

Public TV
2 Min Read

– ಹಲವು ಯುವತಿಯರ ಜೊತೆ ದೈಹಿಕ ಸಂಪರ್ಕ
– ಯುವಕನ ಲವ್ ಕಹಾನಿ ಕೇಳಿ ಪೊಲೀಸರೇ ಶಾಕ್

ಚೆನ್ನೈ: 23 ವರ್ಷದ ಚಿಗುರು ಮೀಸೆಯ ಯುವಕ 11 ಮದುವೆಯಾಗಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮೋಸಗಾರನನ್ನು ಪೊಲೀಸರು ಬಂಧಿಸಿದ್ದಾರೆ.

ಚೆನ್ನೈನ ವಿಲ್ಲಿವಕ್ಕಮ್ ನಿವಾಸಿ ಗಣೇಶ್ ವಂಚಕ ಯುವಕ. ಡಿಸೆಂಬರ್ 5, 2020ರಂದು ಪ್ರೀತಿಸಿದ ಯುವತಿ ಜೊತೆ ಓಡಿ ಹೋಗಿ ಮದುವೆಯಾಗಿದ್ದನು. ಯುವತಿ ಪೋಷಕರು ಮಗಳ ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಗಣೇಶ್ ಅವರಿಗಿಂತ ಮೊದಲು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದನು. ಯುವತಿ ಪಾಲಕರ ಜೊತೆ ಹೋಗಲು ಒಪ್ಪದ ಕಾರಣ ಪೊಲೀಸರ ಗಣೇಶ್ ಜೊತೆಯಲ್ಲಿ ಆಕೆಯನ್ನ ಕಳುಹಿಸಿದ್ದರು.

ಕೆಲಸದಾಕೆ ಜೊತೆ ಪಲ್ಲಂಗದಾಟ: ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಯ ವಿರೋಧದ ನಡುವೆ 17 ವರ್ಷದ ಹುಡುಗಿಯನ್ನ ಮನೆ ಕೆಲಸಕ್ಕೆಂದು ಗಣೇಶ್ ಕರೆ ತಂದಿದ್ದಾನೆ. ದಿನದಿಂದ ದಿನಕ್ಕೆ ಕರೆ ತಂದ ಹುಡುಗಿ ಜೊತೆ ಸಲುಗೆ ಬೆಳೆಸಿಕೊಂಡ ಗಣೇಶ್ ಆಕೆಯ ಜೊತೆ ಸಂಬಂಧ ಹೊಂದಿದ್ದಾನೆ. ಗಂಡನ ಸರಸಕ್ಕೆ ವಿರೋಧಿಸಿದ ಪತ್ನಿಯನ್ನ ಕೋಣೆಯಲ್ಲಿ ಕೂಡಿ ಹಾಕಿ ಕಿರುಕುಳ ನೀಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ನೀಚ ಗಂಡ ಪುಂಡ ಗೆಳೆಯರನ್ನ ಮನೆಗೆ ಕರೆ ತಂದು ಪತ್ನಿ ಅನುಚಿತವಾಗಿ ವರ್ತಿಸಿದ್ದಾನೆ.

ಪತಿ ವಿರುದ್ಧ ದೂರು: ಗಣೇಶ್ ಕಿರುಕುಳ ತಾಳಲಾರದ ಪತ್ನಿ ತನ್ನ ಪೋಷಕರಿಗೆ ಕರೆ ಮಾಡಿ ತನ್ನನ್ನು ರಕ್ಷಿಸುವಂತೆ ಕೇಳಿಕೊಂಡಿದ್ದಾಳೆ. ಮಗಳನ್ನ ರಕ್ಷಿಸಿದ ಪೋಷಕರು ಅಳಿಯನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಶಾಕ್: ದೂರಿನ ಆಧಾರದ ಮೇಲೆ ಗಣೇಶ್ ನನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಆತನ ಮಾತುಗಳನ್ನ ಕೇಳಿ ಒಂದು ಕ್ಷಣ ಶಾಕ್ ಆಗಿದ್ದಾರೆ. ವಿಚಾರಣೆ ವೇಳೆ 11 ಮದುವೆಯಾಗಿದ್ದು, ಒಬ್ಬರಿಗೊಬ್ಬರಿಗೆ ತಿಳಿಯದಂತೆ ನೋಡಿಕೊಂಡಿದ್ದೆ. ಇನ್ನು ಹಲವು ಯುವತಿಯರ ಜೊತೆ ದೈಹಿಕ ಸಂಪರ್ಕ ಹೊಂದಿರೋದಾಗಿ ಗಣೇಶ್ ಹೇಳಿದ್ದಾನೆ ಎಂದು ವರದಿಯಾಗಿದೆ.

hindu wedding bride and groom celebrating wedding event with flower decorations

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಣೇಶ್ ನಿಂದ ವಂಚನೆಗೊಳಗಾದ ಯುವತಿಯರು ಧೈರ್ಯವಾಗಿ ದೂರು ದಾಖಲಿಸಬಹುದು. ಎಲ್ಲರಿಗೂ ರಕ್ಷಣೆ ಜೊತೆ ಗುರುತು ರಹಸ್ಯವಾಗಿರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *