ಡೆಹ್ರಾಡೂನ್‌ನಲ್ಲಿ 10ನೇ ವಿಶ್ವ ಆಯುರ್ವೇದ, ಆರೋಗ್ಯ Expo – ಪ್ರಹ್ಲಾದ್‌ ಜೋಶಿ ಮಾಹಿತಿ

Public TV
2 Min Read

– ಡಿ.12-15ರವರೆಗೆ 50 ರಾಷ್ಟ್ರ, 5,000 ಆಯುರ್ವೇದ ತಜ್ಞರು ಭಾಗವಹಿಸುವ ನಿರೀಕ್ಷೆ

ಹುಬ್ಬಳ್ಳಿ: ಕೇಂದ್ರ ಆಯುಷ್ ಸಚಿವಾಲಯ ಡೆಹ್ರಾಡೂನ್‌ನಲ್ಲಿ (Dehradoon) 10ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಆಂಡ್ ಆರೋಗ್ಯ ಎಕ್ಸ್ಪೋ (Health Expo) ಆಯೋಜಿಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ (Prahlad Joshi) ತಿಳಿಸಿದರು.

ಹುಬ್ಬಳ್ಳಿಯ (Hubballi) ಆಯುರ್ವೇದ ಸೇವಾ ಸಮಿತಿಯ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ಭಾನುವಾರ ಕೆಎಲ್ಇ ಟೆಕ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಸ್ಯಾಟೆಲೈಟ್ ಸೆಮಿನಾರ್ ಉದ್ಘಾಟಿಸಿ ಮಾತನಾಡಿದರು.ಇದನ್ನೂ ಓದಿ: ಹರಾಜಿನಲ್ಲಿ ಆಯ್ಕೆಯಾಗಿ ಅಲಭ್ಯರಾಗುವ ಆಟಗಾರರಿಗೆ ಖಡಕ್‌ ವಾರ್ನಿಂಗ್‌; ನಿಯಮ ಕಡೆಗಣಿಸಿದ್ರೆ 2 ವರ್ಷ ಬ್ಯಾನ್‌

ಕೇಂದ್ರದ ಆಯುಷ್ ಸಚಿವಾಲಯ ಡಿ. 12ರಿಂದ 15ರವರೆಗೆ ಉತ್ತರಾಖಂಡದ ಡೆಹ್ರಾಡೂನಿನಲ್ಲಿ 10ನೇ ವರ್ಲ್ಡ್ ಆಯುರ್ವೇದ- ಆರೋಗ್ಯ ಎಕ್ಸ್ಪೋ ನಡೆಸುತ್ತಿದೆ. ಈ ಎಕ್ಸ್ಪೋದಲ್ಲಿ 50 ರಾಷ್ಟ್ರಗಳು, 5000 ಆಯುರ್ವೇದ ತಜ್ಞರು ಭಾಗವಹಿಸುವ ನಿರೀಕ್ಷೆಯಿದೆ. ಇದರ ಅಂಗವಾಗಿ ದೇಶದೆಲ್ಲೆಡೆ 20 ಸ್ಯಾಟಲೈಟ್ ಸೆಮಿನಾರ್ ಗಳನ್ನು ನಡೆಸಲಾಗುತ್ತಿದ್ದು, ಇಂದಿನ ಕಾರ್ಯಕ್ರಮವೂ ಇದರ ಅಂಗವಾಗಿದೆ ಎಂದು ಹೇಳಿದರು.

ಆಯುರ್ವೇದವು ಭಾರತದ ಅತ್ಯಂತ ಪ್ರಾಚೀನ ಸಂಸ್ಕೃತಿ ಮತ್ತು ಔಷಧಿ ಪದ್ಧತಿ ಕೂಡ ಹೌದು. ಇಂತಹ ಆಯುರ್ವೇದವನ್ನು ಉತ್ತೇಜಿಸಿ, ಉಳಿಸಿ ಬೆಳೆಸುವ ಕಾರ್ಯವನ್ನು ಭಾರತ ಸರ್ಕಾರ ಆಯುಷ್ ಸಚಿವಾಲಯದ ಮೂಲಕ ಮಾಡುತ್ತಿದೆ. ಜೊತೆಗೆ ಆಯುರ್ವೇದದ ಬಗ್ಗೆ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಾ ಬಂದಿದೆ. ಪರಿಣಾಮ ನಮ್ಮ ಭಾರತದ (India) ಆಯುರ್ವೇದ ಜಗತ್ತಿನಲ್ಲೆಲ್ಲಾ ಪಸರಿಸುತ್ತಿದೆ ಎಂದರು.

ಆಯುರ್ವೇದ ಔಷಧಿಗೆ ಹೆಚ್ಚು ಉತ್ತೇಜನ:
2014ರಲ್ಲಿ ಆಯುರ್ವೇದಕ್ಕೆ ಅಷ್ಟು ಮಹತ್ವ ಇರಲಿಲ್ಲ. ಆಯುರ್ವೇದ ಔಷಧಿ ಕೇವಲ 24,000 ಕೋಟಿ ವಹಿವಾಟು ಇತ್ತು. ನಮ್ಮ ಸರ್ಕಾರ ಬಂದ ಮೇಲೆ ಈಗ 1.40 ಲಕ್ಷ ಕೋಟಿ ದಾಟಿದೆ. 500 ಕೋಟಿ ಇದ್ದ ಬಜೆಟ್ ಈಗ 3,000 ಕೋಟಿ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ, ಕಾರ್ಯದರ್ಶಿ ಸಂಜೀವ್ ಜೋಶಿ, ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎ.ಎಸ್.ಪ್ರಶಾಂತ್, ಆಯುರ್ವೇದ ಮಹಾವಿದ್ಯಾಲಯದ ಪ್ರಮುಖರಾದ ಡಾ.ಜೆ.ಆರ್.ಜೋಶಿ, ಡಾ. ಪ್ರಮೋದ್ ಕಟ್ಟಿ ಹಾಗೂ ಆಡಳಿತ ವರ್ಗ ಉಪಸ್ಥಿತರಿದ್ದರು.ಇದನ್ನೂ ಓದಿ: ಚಿತ್ರದುರ್ಗ| ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೇ ಹೊತ್ತಿ ಉರಿದ ಟ್ಯಾಂಕರ್ – ಚಾಲಕ, ನಿರ್ವಾಹಕ ಪಾರು

 

Share This Article