ಹಿಮಾಚಲ – ಭಾರೀ ಮಳೆಗೆ ಒಂದು ತಿಂಗಳಲ್ಲಿ 109 ಮಂದಿ ಸಾವು

Public TV
1 Min Read

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಜೂ.20 ರಿಂದ ಜು.16ರ ವರೆಗೆ ಮಳೆಯ (Rain) ಅವಂತಾರಗಳಿಂದ ಒಟ್ಟು 109 ಜನ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ತಿಳಿಸಿದೆ.

ಈ ಪೈಕಿ 64 ಜನ ಮಳೆ ಸಂಬಂಧಿತ ಅವಾಂತರಗಳಿಂದ ಸಾವನ್ನಪ್ಪಿದ್ದು, 45 ಜನ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಹಠಾತ್ ಪ್ರವಾಹ, ಮೇಘ ಸ್ಫೋಟ, ವಿದ್ಯುತ್ ಆಘಾತ, ಹಾವು ಕಡಿತ ಇನ್ನಿತರ ಅವಂತರಗಳಿಂದ ಸಾವುಗಳು ಸಂಭವಿಸಿವೆ. ಮಂಡಿ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ ತಲಾ (16) ಸಾವು, ಹಮೀರ್‌ಪುರ (8), ಕುಲ್ಲು (4), ಮತ್ತು ಚಂಬಾ (3) ಸಾವುಗಳಾಗಿವೆ. ಇದನ್ನೂ ಓದಿ: India’s Cleanest City: ದೇಶದ ‘ಸ್ವಚ್ಛ ನಗರ’ ಪಟ್ಟಿಯಲ್ಲಿ ಇಂದೋರ್‌ ನಂ.1 – ಮೈಸೂರಿಗೆ 3ನೇ ಸ್ಥಾನ

ರಾಜ್ಯದಲ್ಲಿ ರಸ್ತೆ ಅಪಘಾತಗಳಲ್ಲಿ 45 ಸಾವುಗಳಾಗಿವೆ. ಕುಲ್ಲು ಮತ್ತು ಸೋಲನ್ (ತಲಾ 7), ಚಂಬಾ (6) ಮತ್ತು ಶಿಮ್ಲಾ, ಕಾಂಗ್ರಾ, ಕಿನ್ನೌರ್ ಮತ್ತು ಮಂಡಿ ಜಿಲ್ಲೆಗಳಲ್ಲೂ ಹಲವರು ಸಾವನ್ನಪ್ಪಿದ್ದಾರೆ. ಉತ್ತರಿ ಬಳಿಯ ರಾಷ್ಟ್ರೀಯ ಹೆದ್ದಾರಿ 707 ಸೇರಿದಂತೆ 226 ರಸ್ತೆಗಳಲ್ಲಿ ಭೂಕುಸಿತ ಸಂಭವಿಸಿದೆ.

ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ವ್ಯಾಪಕ ಹಾನಿಯಾಗಿದ್ದು, ಒಟ್ಟು 883 ಕೋಟಿ ರೂ.ಗೂ ಹೆಚ್ಚಿನ ನಷ್ಟ ಸಂಭವಿಸಿದೆ. ಸುಮಾರು 1,228 ಜಾನುವಾರುಗಳು ಮತ್ತು 21,500 ಕೋಳಿಗಳು ಸಾವನ್ನಪ್ಪಿವೆ. 2023 ರಿಂದ ಇಲ್ಲಿಯವರೆಗೆ ನೈಸರ್ಗಿಕ ವಿಕೋಪಗಳಿಂದ 21,000 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ.

ರಾಜ್ಯದ ಹಲವು ಭಾಗಗಳಲ್ಲಿ ಹವಾಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಇದನ್ನೂ ಓದಿ: ಬೇಲ್‌ ನೀಡುವಾಗ ಹೈಕೋರ್ಟ್ ತನ್ನ ವಿವೇಚನೆ ಬಳಸಿಲ್ಲ – ನ್ಯಾ.ಪರ್ದಿವಾಲಾ ಅಭಿಪ್ರಾಯ

Share This Article