ಕಾಡಿನಲ್ಲಿ ಇರೋದು ಒಬ್ಬನೇ ವ್ಯಕ್ತಿ – ಕೇವಲ ಒಂದೇ ವೋಟ್‌ನಿಂದ 100% ಮತದಾನ

Public TV
1 Min Read

– ಏಷ್ಯಾಟಿಕ್‌ ಸಿಂಹಗಳ ಆವಾಸಸ್ಥಾನದಲ್ಲಿದ್ದ ಒಬ್ಬನೇ ಮತದಾರ
– ಒಂದು ಮತಕ್ಕಾಗಿ ಅರಣ್ಯದಲ್ಲಿ 2 ದಿನ ಪ್ರಯಾಣ ಮಾಡಿದ್ದ ಅಧಿಕಾರಿಗಳು

ಗಾಂಧೀನಗರ: ಗುಜರಾತ್‌ನ (Gujarat) ಅರಣ್ಯವೊಂದರಲ್ಲಿ (Gir Forest) ಇರುವುದು ಒಬ್ಬರೇ ವ್ಯಕ್ತಿ. ಅವರ ಒಂದು ಮತದಿಂದ 100% ಮತದಾನ ಪ್ರಮಾಣ ದಾಖಲಾಗಿದೆ.

ಅಳಿವಿನಂಚಿನಲ್ಲಿರುವ ಏಷ್ಯಾಟಿಕ್ ಸಿಂಹಗಳ ಆವಾಸಸ್ಥಾನವಾದ ಗಿರ್ ಅರಣ್ಯದ ಮೂಲಕ ತೆರಳಿ ಬನೇಜ್‌ನಲ್ಲಿ ಅಧಿಕಾರಿಗಳು ಮತಗಟ್ಟೆ ಸ್ಥಾಪಿಸಿದ್ದರು. ಅಲ್ಲಿ ಮಹಂತ್ ಹರಿದಾಸ್ ಉದಾಸೀನ್ ಹೆಸರಿನ ಏಕೈಕ ನಿವಾಸಿ ಮತ ಚಲಾಯಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ತಾಯಿ ಸ್ವರ್ಗದಿಂದಲೇ ಆಶೀರ್ವಾದ ಮಾಡುತ್ತಿರಬಹುದು: ಪ್ರಧಾನಿ ಸಹೋದರ ಭಾವುಕ

ಕೇವಲ ಒಬ್ಬ ಮತದಾರನಿಗಾಗಿ 10 ಜನರ ಅಧಿಕಾರಿಗಳ ತಂಡವು ಕಾಡಿಗೆ ತೆರಳಿದ್ದರು. ಉದಾಸೀನ್‌ ಅವರು ಮತ ಚಲಾಯಿಸಿದ್ದಾರೆ. ಮತದಾನದ ಬಳಿಕ ಶಾಹಿ ಹಾಕಿರುವ ಬೆರಳನ್ನು ತೋರಿಸಿ ಹಕ್ಕು ಚಲಾಯಿಸಿದ್ದೇನೆಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

ಕಾಡಿನಲ್ಲಿದ್ದ ಅರ್ಚಕ ಉದಾಸೀನ್‌ ಅವರ ಒಂದು ವೋಟಿಗಾಗಿ ಗುಜರಾತ್‌ನ ಅಧಿಕಾರಿಗಳು ಅರಣ್ಯ ಮಾರ್ಗದಲ್ಲಿ ಸುಮಾರು 2 ದಿನಗಳ ಕಾಲ 40% ಸೆಲ್ಸಿಯಸ್‌ ತಾಪಮಾನದ ಸುಡು ಬಿಸಿಲಿನಲ್ಲಿ ಪ್ರಯಾಸದ ಪ್ರಯಾಣ ಮಾಡಿದ್ದರು. ಮತದಾನದ ದಿನ ಉದಾಸೀನ್, ಕೇಸರಿ ಬಟ್ಟೆ ಧರಿಸಿ, ಹಣೆಗೆ ಶ್ರೀಗಂಧ ಹಾಕಿದ್ದರು. ಇದನ್ನೂ ಓದಿ: ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ವಕ್ತಾರೆ ರಾಧಿಕಾ ಖೇರಾ

ಮತಗಟ್ಟೆ ಮತ್ತು ವ್ಯಕ್ತಿ ಇರುವ ಸ್ಥಳವು ಮೈಲುಗಳಷ್ಟು ದೂರವಿತ್ತು. ಒಬ್ಬರೇ ಮತದಾರ ಇದ್ದರೂ, ಅವರು ಬಂದು ಮತ ಚಲಾಯಿಸುವವರೆಗೂ ಬೂತ್‌ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಕಾನೂನಿನ ಪ್ರಕಾರ ಪ್ರತಿ ಮತಗಟ್ಟೆಗೆ ಕನಿಷ್ಠ ಆರು ಮಂದಿ ಮತಗಟ್ಟೆ ಸಿಬ್ಬಂದಿ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ನೇತೃತ್ವ ವಹಿಸಬೇಕು.

Share This Article