100 ಮರಗಳನ್ನು ನೆಟ್ಟು ಪರಿಸರ ದಿನ ಆಚರಣೆ

Public TV
2 Min Read

ತುಮಕೂರು/ ಚಿಕ್ಕೋಡಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ಹಾಗೂ ಪುರಸಭೆ ಹಾಗೂ ಸಂಕೇಶ್ವರ ಫೌಂಡೇಶನ್  100ಕ್ಕೂ ಹೆಚ್ಚು ಮರಗಳನ್ನೂ ನೆಡಲಾಯಿತ್ತು. ತುಮಕೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು ಸಸಿ ನೆಟ್ಟು ನೀರುಣಿಸಿದರು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಪರಿಸರ ದಿನದ ನಿಮಿತ್ತವಾಗಿ 100 ಕ್ಕೂ ಹೆಚ್ಚು ಮರಗಳನ್ನ ನೆಡಲಾಯಿತು. ಸಂಕೇಶ್ವರ ಪುರಸಭೆ ಮುಖ್ಯಾಧಿಕಾರಿ ಆದ ಜಗದೀಶ್ ಈಟಿ ಸಹಕಾರದೊಂದಿಗೆ ಸುಮಾರು 100 ಕ್ಕೂ ಹೆಚ್ಚು ಮರಗಳನ್ನ ಸಂಕೇಶ್ವರದ ದನಗಳ ಪೇಟೆ ಹಾಗೂ ಎಸ್ ಡಿ ವಿ ಎಸ್ ಶಾಲಾ ಮೈದಾನದಲ್ಲಿ ನೆಡಲಾಯಿತು. ಇದನ್ನೂ ಓದಿ: ಮೃಗಾಲಯಗಳನ್ನ ಉಳಿಸಿ ಬೆಳೆಸಿ: ದರ್ಶನ್ ಮನವಿ

ಕೊರೊನಾ ಸಂದರ್ಭದಲ್ಲಿ ಹಣ ನೀಡಿ ಆಕ್ಸಿಜನ್ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹೆಚ್ಚಿನ ಮರಗಳನ್ನ ನೆಟ್ಟರೇ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಆಕ್ಸಿಜನ್ ಸಿಗಲು ಸಾಧ್ಯ ಇಲ್ಲವಾದಲ್ಲಿ ಪರಿಸ್ಥಿತಿ ಸಾಕಷ್ಟು ಹದಗೆಡಲಿದೆ ಎಂದು ಪುರಸಭೆ ಸದಸ್ಯ ಹಾಗೂ ವೈದ್ಯರಾಗಿರುವ ಡಾ ಮಂದಾರ ಹಾವಳ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಎಸ್‍ಡಿವಿಎಸ್ ಕಾಲೇಜಿನ ಪ್ರಾಂಶುಪಾಲರಾದ ಮುನ್ನೊಳೀ ಕ್ರೀಡಾ ಪ್ರೇಮಿ ಅಮಿತ್ ಘಸ್ತಿ ಹಾಗೂ ಸಂಕೇಶ್ವರ ಫ್ರೆಂಡ್ಸ್ ಫೌಂಡೆಶನ ಸದಸ್ಯರಾದ ಉಮೇಶ್ ಗೊಟುರೆ ಲಾಡಜಿ ಮುಲ್ತಾನಿ,ಪ್ರಭಾಕರ ಪಾಟೀಲ್ ಕುಮಾರ ಸೌoಸುದ್ದಿ ,ದಯಾನಂದ್ ಆಲೂರೆ ವಿನಯ ಬಕಾಯಿ ಆನಂದ ಶಿರಕೋಳಿ, ರೋಹಿತ್,ಮಹೇಂದ್ರ ಮಾಳಗಿ ಅರಣ್ಯ ಇಲಾಖೆಯ ಮಲೀಕ್ ಮುಲ್ತಾನಿ ಉಪಸ್ಥಿತರಿದ್ದರು. ಇದನ್ನೂ ಓದಿ: ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರದಿಂದ ಪ್ಯಾಕೇಜ್ ಘೋಷಣೆ- ಸಿಎಂಗೆ ಬಸವರಾಜ ಹೊರಟ್ಟಿ ಅಭಿನಂದನೆ

ಕೋವಿಡ್ ಸೋಂಕು ಇರುವುದರಿಂದ ವಿಶ್ವ ಪರಿಸರ ದಿನಾಚರಣೆಯನ್ನು ತುಮಕೂರಿನಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಜಿಲ್ಲಾದ್ಯಂತ ಗಿಡಗಳನ್ನು ನೆಟ್ಟು ಹಸಿರನ್ನು ಬೆಳೆಸಿ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳಲ್ಲಿ ಮರಗಿಡಗಳನ್ನು ಬೆಳೆಸುವ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಲು ಸಾಧ್ಯ ವಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಕರೆ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಂಶಿಕೃಷ್ಣ, ಉಪ ವಿಭಾಗಾಧಿಕಾರಿ ಅಜಯ್, ತಹಶಿಲ್ದಾರ್ ಮೋಹನ್, ಮತ್ತಿತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *