ಮೈಸೂರು: ನಗರದಲ್ಲಿ 10 ವರ್ಷದ ಬಾಲಕಿ ಮೇಲೆ ರೇಪ್ ಅಂಡ್ ಮರ್ಡರ್ (Rape And Murder) ಆಗಿದೆ. ವಿರೂಪಗೊಂಡ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಬಿದ್ದಿದ್ದ ಹಿನ್ನೆಲೆ ಇದು ರೇಪ್ ಅಂಡ್ ಮರ್ಡರ್ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ದಸರಾ (Dasara) ವೇಳೆ ಬಲೂನ್ ವ್ಯಾಪಾರಕ್ಕಾಗಿ ಕಲಬುರಗಿ ಕಡೆಯಿಂದ ಮೈಸೂರಿಗೆ ಹಕ್ಕಿಪಿಕ್ಕಿ ಜನಾಂಗದ 50ಕ್ಕೂ ಹೆಚ್ಚು ಕುಟುಂಬಗಳು ಬಂದಿವೆ. ಬುಧವಾರ ತಡರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಅಪ್ರಾಪ್ತೆಯ ಹತ್ಯೆಯಾಗಿದೆ. ಇದನ್ನೂ ಓದಿ: ವಿಜಯಪುರ | SBI ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು ಅರೆಸ್ಟ್
ಕೇವಲ ಎರಡೇ ದಿನಗಳ ಅಂತರದಲ್ಲಿ ಒಂದೇ ಜಾಗದಲ್ಲಿ ಎರಡು ಮರ್ಡರ್ ಆದಂತಾಗಿದೆ. ಎರಡು ದಿನಗಳ ಹಿಂದೆ ಇದೇ ಜಾಗದಲ್ಲಿ ರೌಡಿ ಶೀಟರ್‌ನ ಸಹರ್ವತಿಯ ಬರ್ಬರ ಹತ್ಯೆ ಆಗಿತ್ತು. ಅದೇ ಜಾಗದಲ್ಲಿ ನೆನ್ನೆ ರಾತ್ರಿ ಅಪ್ರಾಪ್ತ ಬಾಲಕಿ ಮರ್ಡರ್ ಆಗಿದೆ. ಸದ್ಯ ವಿಚಾರಣೆಗಾಗಿ ವ್ಯಾಪಾರಕ್ಕೆ ಆಗಮಿಸಿದ್ದ 50 ಹಕ್ಕಿಪಿಕ್ಕಿ ಕುಟುಂಬಸ್ಥರನ್ನ ಪೊಲೀಸರು ಕರೆದೊಯ್ದಿದ್ದಾರೆ. ನಜರಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಲೆ ಆರೋಪಿ ಗುರುತು ಪತ್ತೆ
ಘಟನೆ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ನಜರಬಾದ್ ಠಾಣಾ ಪೊಲೀಸರು ಆರೋಪಿಯ ಗುರುತು ಪತ್ತೆಹಚ್ಚಿದ್ದಾರೆ. ರೆಡ್ ಶರ್ಟ್, ಜೀನ್ಸ್ ಪ್ಯಾಂಡ್ ಧರಸಿದ್ದ ಕೊಲೆ ಆರೋಪಿಯ ಫೋಟೋ ಸಿಸಿಟಿವಿಯಲ್ಲಿ ಲಭ್ಯವಾಗಿದೆ. ಕೃತ್ಯ ಎಸಗುವ ವೇಳೆ ಆರೋಪಿ ಕಾಲಿಗೆ ಚಪ್ಪಲಿ ಕೂಡ ಧರಿಸಿರಲಿಲ್ಲ ಎಂಬುದೂ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಗೊತ್ತಾಗಿದೆ. ಇದನ್ನೂ ಓದಿ: ದಾವಣಗೆರೆ | ರಾಮಜ್ಯೋತಿ ರಥಯಾತ್ರೆ ದುರಂತಕ್ಕೆ 35 ವರ್ಷ – ಫೈರಿಂಗ್‌ನಲ್ಲಿ ಮೃತಪಟ್ಟವರ ಬ್ಯಾನರ್ ತೆರವಿಗೆ ಭಾರೀ ವಿರೋಧ
ಫೋಟೋ ಲಭ್ಯವಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯ ಹಿನ್ನೆಲೆಯನ್ನು ಪತ್ತೆಹಚ್ಚಿದ್ದಾರೆ. ಆರೋಪಿಯನ್ನ ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ (31) ಎಂದು ಗುರುತಿಸಲಾಗಿದೆ. 2 ವರ್ಷ ಜೈಲು ವಾಸ ಅನುಭವಿಸಿದ್ದ ಕಾರ್ತಿಕ್ 4 ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಊರು ಸೇರದೇ ಎಲ್ಲೆಂದರಲ್ಲಿ ಕುಡಿದು ಅಲೆಯುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.