ಆಪರೇಷನ್ ಸಿಂಧೂರ ವೇಳೆ ಯೋಧರಿಗೆ ಸಹಾಯ – 10ರ ಬಾಲಕನ ಶಿಕ್ಷಣ ವೆಚ್ಚ ಭರಿಸಲು ಮುಂದಾದ ಸೇನೆ

Public TV
2 Min Read

ನವದೆಹಲಿ: ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ʻಆಪರೇಷನ್‌ ಸಿಂಧೂರʼ (Operation Sindoor) ಪ್ರತೀಕಾರದ ದಾಳಿಯ ಕುರಿತು ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದೆ. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ಉದ್ವಿಗ್ನತೆಯ ಭೀತಿ ಲೆಕ್ಕಿಸದೇ ಯೋಧರಿಗೆ ಸಹಾಯ ಮಾಡಿದ್ದ 10 ವರ್ಷದ ಬಾಲಕನ ಸಂಪೂರ್ಣ ಶಿಕ್ಷಣ ವೆಚ್ಚ ಭರಿಸಲು ಸೇನೆ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಮೂಲಗಳ ಪ್ರಕಾರ, ಸೇನೆಯ ಗೋಲ್ಡನ್ ಆರೋ ವಿಭಾಗವು ಶವನ್‌ ಸಿಂಗ್‌ನ ತ್ಯಾಗ, ಉತ್ಸಾಹವನ್ನ ಮೆಚ್ಚಿಕೊಂಡಿದೆ. ಹೀಗಾಗಿ ಬಾಲಕನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನ ತೆಗೆದುಕೊಳ್ಳಲು ನಿರ್ಧರಿಸಿದೆ. ಇದನ್ನೂ ಓದಿ: ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಗೇಮ್‌ ಆಡಿದ ಕೃಷಿ ಸಚಿವ – ವಿಪಕ್ಷಗಳಿಂದ ಭಾರಿ ಟೀಕೆ

ಶನಿವಾರ ಫಿರೋಜ್‌ಪುರ ಕಂಟೋನ್ಮೆಂಟ್‌ನಲ್ಲಿ ನಡೆದ ಸಮಾರಂಭದಲ್ಲಿ ಪಶ್ಚಿಮ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್ ಅವರು ಶವನ್‌ನ ಸನ್ಮಾನಿಸಿದರು. ಇದನ್ನೂ ಓದಿ: ಬೆಂಗಳೂರು-ಸೇಲಂ ಹೈವೆಯಲ್ಲಿ ಸರಣಿ ಅಪಘಾತ – 7 ವರ್ಷದ ಮಗು ಸೇರಿ ಮೂವರು ಸಾವು

10ರ ಬಾಲಕನಿಂದ ಸಿಕ್ಕ ಸಹಾಯ ಏನು?
ಏಪ್ರಿಲ್‌ 22ರಂದು ಜಮ್ಮು ಮತ್ತು ಕಾಶ್ಮೀರದ ಬೈಸರನ್‌ ಕಣಿವೆ ಪ್ರದೇಶದಲ್ಲಿರುವ ಪಹಲ್ಗಾಮ್‌ನಲ್ಲಿ ನಾಲ್ವರು ಉಗ್ರರು ಅಟ್ಟಹಾಸ ಮೆರೆದಿದ್ದರು. ಓರ್ವ ವಿದೇಶಿಗ ಸೇರಿ 26 ಮಂದಿಯನ್ನ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಶುರು ಮಾಡಿತು. ಮೇ 7ರ ಮಧ್ಯರಾತ್ರಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ 9 ಅಡಗು ತಾಣಗಳನ್ನ ಧ್ವಂಸಗೊಳಿಸಿತ್ತು. ಇದನ್ನೂ ಓದಿ: Tamil Nadu | ಪತಿಯೊಂದಿಗೆ ಜಗಳ – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯನ್ನು ಇರಿದು ಕೊಂದ ಗಂಡ

ಪಾಕಿಸ್ತಾನ ಕೂಡ ಪ್ರತಿದಾಳಿಗೆ ಮುಂದಾಗಿ ಭಾರತದ ಕೆಲ ನಗರಗಳ ಮೇಲೆ ಶೆಲ್‌ ದಾಳಿ ನಡೆಸಲು ಮುಂದಾಯಿತು. ಆದ್ರೆ ಪಾಕ್‌ನ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿತು. ಈ ವೇಳೆ ಭಾರತ ಪಾಕ್‌ ಗಡಿ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಏರ್ಪಟ್ಟಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಫಿರೋಜ್‌ಪುರದ ಮಾಮ್‌ಡೋಟ್ ಪ್ರದೇಶದ ತಾರಾ ವಾಲಿ ಗ್ರಾಮ ಶವಣ್‌ ಸಿಂಗ್‌ ಸೈನಿಕರಿಗೆ ನೀರು, ಐಸ್, ಚಹಾ, ಹಾಲು ಮತ್ತು ಲಸ್ಸಿಯನ್ನ ಖುದ್ದಾಗಿ ತಲುಪಿಸುತ್ತಿದ್ದ. ಗುಂಡು, ಶೆಲ್‌ಗಳ ಶಬ್ಧ, ಉದ್ವಿಗ್ನತೆಗೂ ಜಗ್ಗದೇ ನಿರ್ಭೀತಿಯಿಂಧ ಸೈನಿಕರ ಸೇವೆ ಮಾಡಿದ್ದ. 4ನೇ ತರಗತಿ ಓದುತ್ತಿರುವ ಶವನ್‌ನ ಈ ಸೇವೆ ಯೋಧರ ಹೃದಯ ಗೆದ್ದಿದೆ.

ಈತನ ಸೇವೆಯನ್ನ ಭಾರತೀಯ ಸೇನೆ ಶ್ಲಾಘಿಸಿದೆ. ಆದ್ದರಿಂದ ಶವನ್‌ ಸಿಂಗ್‌ನ ಶಿಕ್ಷಣದ ಸಂಪೂರ್ಣ ವೆಚ್ಚವನ್ನ ಸೇನೆಯೇ ನೋಡಿಕೊಳ್ಳುವುದಾಗಿ ಘೋಷಿಸಿದೆ. ಇದನ್ನೂ ಓದಿ: ಜಸ್ಟಿಸ್ ವರ್ಮಾ ಪದಚ್ಯುತಿಗೆ 100 ಸಂಸದರ ಸಹಿ: ಕಿರಣ್ ರಿಜಿಜು

ಸೈನಿಕನಾಗುವ ಕನಸು
ಇನ್ನೂ ಈ ಕುರಿತು ಮಾತನಾಡಿರುವ ಶವನ್‌ ಸಿಂಗ್‌, ಯೋಧನಾಗುವ ಕನಸು ಕಂಡಿರುವುದಾಗಿ ಹೇಳಿಕೊಂಡಿದ್ದಾನೆ. ಯೋಧನಾಗಿ ಮುಂದೆ ದೇಶಸೇವೆ ಮಾಡಲು ಬಯಸುವುದಾಗಿ ಹೇಳಿಕೊಂಡಿದ್ದಾನೆ.

Share This Article