ಇಸ್ರೇಲ್‌ ವೈಮಾನಿಕ ದಾಳಿಗೆ 10 ತಿಂಗಳ ಮಗು ಬಲಿಯಾಗಿದೆ: ಹಮಾಸ್‌ ಆರೋಪ

Public TV
1 Min Read

ಟೆಲ್‌ ಅವೀವ್: ಗಾಜಾದ (Gaza) ಮೇಲೆ ಇಸ್ರೇಲ್ (Israel) ನಡೆಸಿದ ವೈಮಾನಿಕ ದಾಳಿಯಲ್ಲಿ ಒತ್ತೆಯಾಳಾಗಿದ್ದ 10 ತಿಂಗಳ ಮಗು ಸಾವಿಗೀಡಾಗಿದೆ ಎಂದು ಹಮಾಸ್‌ (Hamas) ಆರೋಪ ಮಾಡಿದೆ.

ಕೆಫೀರ್ ಬಿಬಾಸ್ (9 ತಿಂಗಳು) ಮಗುವನ್ನು ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿರುವ ಮನೆಯಿಂದ ಸೆರೆ ಹಿಡಿಯಲಾಗಿತ್ತು. ಹಠಾತ್ ದಾಳಿಯ ಸಂದರ್ಭದಲ್ಲಿ ಆತನ ತಾಯಿ ಮತ್ತು ನಾಲ್ಕು ವರ್ಷದ ಸಹೋದರನನ್ನು ಸಹ ಒತ್ತೆಯಾಳಾಗಿ ಇರಿಸಲಾಗಿತ್ತು. ಬುಧವಾರ ಮೂವರೂ ಗಾಜಾದಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್ ಹೇಳಿದೆ. ಈ ಬಗ್ಗೆ ಇಸ್ರೇಲಿ ಸೇನೆಯು ತನಿಖೆ ನಡೆಸುತ್ತಿದೆ. ಇದನ್ನೂ ಓದಿ: 4 ವರ್ಷದ ಬಾಲಕಿ ಸೇರಿ 3ನೇ ಬ್ಯಾಚ್‍ನ 17 ಮಂದಿಯ ಬಿಡುಗಡೆ ಮಾಡಿದ ಹಮಾಸ್

ಗಾಜಾ ಪಟ್ಟಿಯಲ್ಲಿರುವ ಎಲ್ಲಾ ಒತ್ತೆಯಾಳುಗಳ ಭದ್ರತೆಗೆ ಹಮಾಸ್ ಸಂಪೂರ್ಣ ಜವಾಬ್ದಾರವಾಗಿದೆ. ಹಮಾಸ್‌ನ ಕ್ರಮಗಳು ಒತ್ತೆಯಾಳುಗಳಿಗೆ ಅಪಾಯವನ್ನುಂಟುಮಾಡುವುದನ್ನು ಮುಂದುವರೆಸಿದೆ. ಅಪಾಯದಲ್ಲಿ 9 ಮಕ್ಕಳಿದ್ದಾರೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಕದನ ವಿರಾಮ ಜಾರಿಗೆ ಬರುವ ಕೆಲವೇ ದಿನಗಳ ಮೊದಲು ಇಸ್ರೇಲಿ ಬಾಂಬ್ ದಾಳಿಯಲ್ಲಿ ಮಗು ಕೆಫೀರ್, ಆತನ ಸಹೋದರ ಏರಿಯಲ್ ಮತ್ತು ಅವರ ತಾಯಿ ಶಿರಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ. ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ಸೆರೆಹಿಡಿದಿದ್ದ ಒತ್ತೆಯಾಳುಗಳಲ್ಲಿ ಬಿಬಾಸ್ ಕುಟುಂಬವೂ ಸೇರಿದೆ. ಇದನ್ನೂ ಓದಿ: 3ನೇ ಬ್ಯಾಚ್ ಒತ್ತೆಯಾಳುಗಳನ್ನು ಇಂದು ಬಿಡುಗಡೆ ಮಾಡಲಿದೆ ಹಮಾಸ್

ತಿಂಗಳ ಯುದ್ಧದ ನಂತರ ಇಸ್ರೇಲ್‌ ಮತ್ತು ಹಮಾಸ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಎರಡೂ ಕಡೆಯವರು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಜನರನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿವೆ. ಈಗಾಗಲೇ ಇಸ್ರೇಲ್‌ ಮತ್ತು ಹಮಾಸ್‌ ಕಡೆಯಿಂದ ಸೆರೆಹಿಡಿಯಲಾಗಿದ್ದ ನೂರಾರು ಜನರು ಬಿಡುಗಡೆಯಾಗಿದ್ದಾರೆ.

Share This Article