ತಂದೆ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ 10 ತಿಂಗಳ ಮಗು ಸಾವು

Public TV
1 Min Read

ಮಂಗಳೂರು: ತಂದೆ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿದ ಮಗು ದಾರುಣ ಸಾವಿಗೀಡಾಗಿರುವ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.

ಅಡ್ಯಾರ್‌ನಲ್ಲಿ ವಾಸಿಸುತ್ತಿದ್ದ ಬಿಹಾರ ಮೂಲದ ದಂಪತಿ ಪುತ್ರ ಅನೀಶ್‌ ಎಂಬ ಮಗು ಮೃತಪಟ್ಟಿದೆ. ಬೀಡಿ ತುಂಡು ಗಂಟಲಲ್ಲಿ ಸಿಲುಕಿಕೊಂಡು ಅಸ್ವಸ್ಥಗೊಂಡಿದ್ದ ಮಗು ಚಿಕಿತ್ಸೆ ಫಲಿಸದೇ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಇದನ್ನೂ ಓದಿ: KRS ಡ್ಯಾಂನಲ್ಲಿ 16 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಳ

ಮನೆಯ ನೆಲದಲ್ಲಿ ಬಿದ್ದಿದ್ದ ಬೀಡಿ ತುಂಡನ್ನು ಮಗು ನುಂಗಿತ್ತು. ಸ್ವಲ್ಪ ಹೊತ್ತಲ್ಲೇ ಅಸ್ವಸ್ಥಗೊಂಡ ಮಗುವನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ.

ಘಟನೆಗೆ ಸಂಬಂಧಿಸಿದಂತೆ ಗಂಡನ ವಿರುದ್ಧ ಮಗುವಿನ ತಾಯಿ ಲಕ್ಷ್ಮಿ ದೇವಿ ದೂರು ನೀಡಿದ್ದಾರೆ. ಸೇದಿದ ಬೀಡಿಯ ತುಂಡನ್ನು ಮನೆಯೊಳಗೆ ಬಿಸಾಡಬೇಡಿ ಎಂದು ಎಷ್ಟು ಬಾರಿ ತಿಳಿಸಿದರೂ, ಕೇಳದೇ ಮತ್ತೆ ಬಿಸಾಕಿದ್ದಕ್ಕೆ ಹೀಗಾಯಿತು ಎಂದು ಮಗುವಿನ ತಾಯಿ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ – ಫಲ್ಗುಣಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ನೆರೆ

Share This Article