ಕೆನಡಾ ಶಾಲೆಯಲ್ಲಿ ಗುಂಡಿನ ದಾಳಿ – ಶಂಕಿತ ಗನ್‌ಮ್ಯಾನ್‌ ಸೇರಿ 10 ಮಂದಿ ಸಾವು

1 Min Read

ಒಟ್ಟಾವ: ಕೆನಡಾದ (Canada) ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ಬುಧವಾರ (ಇಂದು) ನಡೆದ ಗುಂಡಿನ ದಾಳಿಯಲ್ಲಿ ಗನ್ ಮ್ಯಾನ್ ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ. 20 ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು (RCMP) ಹೇಳುವಂತೆ, ಶಂಕಿತ ಗನ್‌ಮ್ಯಾನ್‌ ಹಾಗೂ ಇತರ 6 ಜನರು ಶಾಲಾ ಆವರಣದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದರೆ, ಇನ್ನುಳಿದ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹೊಸ ‘ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್’ ಪರಿಚಯಿಸಿದ ವಾಟ್ಸಾಪ್​ – ಅಪ್ಲಿಕೇಶನ್ ಬಳಕೆಗೆ ಹಣ ಪಾವತಿಸ್ಬೇಕಾ?

ಟಂಬರ್ ರಿಡ್ಜ್ ಮಾಧ್ಯಮಿಕ ಶಾಲೆಯಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 1.20 ರ ವೇಳೆಗೆ ಘಟನೆ ನಡೆದಿದೆ. ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು (canada Police) ಅಲರ್ಟ್‌ ಘೋಷಣೆ ಮಾಡಿದ್ದಾರೆ. ಸುಮಾರು 2,400 ಜನಸಂಖ್ಯೆ ಹೊಂದಿರುವ ಟಂಬರ್ ರಿಡ್ಜ್ ಪಟ್ಟಣದ ನಿವಾಸಿಗಳು ಮನೆಯಿಂದಾಚೆ ಬಾರದಂತೆ ಎಚ್ಚರಿಸಿದ್ದಾರೆ. ಘಟನಾ ಸ್ಥಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್‌ ಬಂದೋಬಸ್ತ್‌ ಕೂಡ ಹೆಚ್ಚಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಇನ್ನೂ ತನಿಖೆ ಮುಂದುವರಿಸಿರುವ ಪೊಲೀಸರು ಕೃತ್ಯ ಎಸಗಿದ ಮತ್ತೊಬ್ಬ ಗನ್‌ ಮ್ಯಾನ್‌ (Gunman) ಸಾವನ್ನಪ್ಪಿದ್ದಾನೆಯೇ ಎಂದು ಶೋಧಿಸಲಾಗುತ್ತಿದೆ. ಜೊತೆಗೆ ಮೃತರ ಅಧೀಕೃತ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಘಟನೆಗೆ ಕೆನಡಾ ಪ್ರಧಾನಿ ತೀವ್ರ ಆಕ್ಷೇಪ ಹೊರಹಾಕಿದ್ದಾರೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಟಂಬರ್ ರಿಡ್ಜ್ ಸೆಕೆಂಡರಿ ಶಾಲೆಯು 7 ರಿಂದ 12 ನೇ ತರಗತಿ ವರೆಗೆ 175 ವಿದ್ಯಾರ್ಥಿಗಳನ್ನ ಹೊಂದಿದೆ. ಇದನ್ನೂ ಓದಿ: ಭಾರತದ ವಿದ್ಯುತ್‌ ಸ್ವಾವಲಂಬನೆಗೆ ಥೋರಿಯಂ ಆಧಾರಿತ ಪರಮಾಣು ವಿದ್ಯುತ್ ಕೇಂದ್ರಗಳು ಏಕೆ ಮುಖ್ಯ?

Share This Article